ಹುಬ್ಬಳ್ಳಿ, ಮೇ 17,2024 (www.justkannada.in): ಹುಬ್ಬಳ್ಳಿಯಲ್ಲಿ ನಡೆದ ನೇಹಾ ಹಿರೇಮಠ ಹಾಗೂ ಅಂಜಲಿ ಹತ್ಯೆಗೆ ಸರ್ಕಾರವೇ ನೇರ ಹೊಣೆ. ಸರ್ಕಾರ ಸತ್ತಿದೆಯೋ ಬದುಕಿದೆಯೋ ಎಂದು ವಿಧಾನಪರಿಷತ್ ಬಿಜೆಪಿ ಸದಸ್ಯ ಎನ್.ರವಿಕುಮಾರ್ ಕಿಡಿಕಾರಿದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಎನ್.ರವಿಕುಮಾರ್, ಅಂಜಲಿ ಅಂಬಿಗೇರ ಹತ್ಯೆ ಆಗಿರೋದು ಕಾಡಿನಲ್ಲಿ ಅಲ್ಲ. ಆಕೆ ಕೊಲೆಯಾಗಿದ್ದು ಜನವಸತಿ ಪ್ರದೇಶದಲ್ಲಿ. ಈ ವಿಚಾರದಲ್ಲಿ ಸರ್ಕಾರ ಬೇಜವಾಬ್ದಾರಿಯಾಗಿ ವರ್ತಿಸಿದೆ. ಇದು ಅಸಮರ್ಥ ಸರ್ಕಾರ. ಇದು ರಣ ಹೇಡಿ ಸರ್ಕಾರ. ಕೊಲೆ ಪಾತಕರನ್ನು ರಕ್ಷಣೆ ಮಾಡುವ ಸರ್ಕಾರ ಎಂದು ಹರಿಹಾಯ್ದರು.
ನೇಹಾ ಹಿರೇಮಠ ಕೊಲೆಯಾಗಿ ಒಂದು ವರ್ಷ ಆಗಿಲ್ಲ. ಮತ್ತೆ ಅಂತಹದ್ದೇ ಕೊಲೆಯಾಗಿದೆ ಅಂದರೆ ಏನರ್ಥ? ಈ ಕೊಲೆಗಳಿಗೆ ಪೊಲೀಸರು ಹೊಣೆ. ಕರ್ನಾಟಕ ಕ್ರೈಂ ರಾಜ್ಯ, ಕೊಲೆಪಾತಕರ ರಾಜ್ಯ ಆಗಿದೆ ಎಂದು ಗುಡುಗಿದರು.
ಹಾಗೆಯೇ ಅಂಜಲಿ ಮನೆಯ ಒಬ್ಬರಿಗೆ ಸರ್ಕಾರಿ ನೌಕರಿ ಕೊಡಬೇಕು. ಮನೆಯವರಿಗೆ 50 ಲಕ್ಷ ರೂಪಾಯಿ ಪರಿಹಾರ ಕೊಡಬೇಕು. ಇಲ್ಲದಿದ್ದರೇ ಬಿಜೆಪಿ ಹೋರಾಟ ಮಾಡುತ್ತದೆ ಎಂದು ರವಿಕುಮಾರ್ ಎಚ್ಚರಿಕೆ ನೀಡಿದರು.
Key words: government, Neha, Anjali, murder, N.Ravi Kumar