ಬೆಂಗಳೂರು, ಮಾರ್ಚ್ 26,2021(www.justkannada.in): ಸರ್ಕಾರ ಎಂದಿಗೂ ಕೋವಿಡ್ ಅಂಕಿ ಅಂಶಗಳನ್ನು ಬಚ್ಚಿಡುವುದಿಲ್ಲ. ಸರ್ಕಾರಕ್ಕೆ ಅದರ ಅವಶ್ಯಕತೆಯೂ ಇಲ್ಲ ಮತ್ತು ಅದು ಸಾಧ್ಯವೂ ಇಲ್ಲ. ವಸ್ತುಸ್ಥಿತಿಯ ಅಂಕಿ ಅಂಶವನ್ನು ಮಾತ್ರ ಘೋಷಣೆ ಮಾಡಲಾಗುತ್ತದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಡಾ.ಕೆ ಸುಧಾಕರ್, ಕೋವಿಡ್ ಸಂಬಂಧ ಯಾವುದೇ ಅಂಕಿ ಅಂಶ ಮುಚ್ಚಿಡುವುದಿಲ್ಲ. ಕೋವಿಡ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಎಲ್ಲ ವಿರೋಧ ಪಕ್ಷಗಳ ನಾಯಕರು ಸಲಹೆ, ಸೂಚನೆಗಳನ್ನು ನೀಡಬಹುದು. ಲೋಪಗಳಿದ್ದರೂ ಹೇಳಬಹುದು. ಮುಖ್ಯಮಂತ್ರಿಗಳು ನಿರ್ಧಾರ ಮಾಡಿ ಸರ್ವಪಕ್ಷಗಳ ಸಭೆ ನಡೆಸಿ ಕೋವಿಡ್ ಕುರಿತು ಚರ್ಚಿಸಬಹುದು. ಚರ್ಚೆಯ ವಿಚಾರದಲ್ಲಿ ಮುಕ್ತವಾಗಿದ್ದೇವೆ ಎಂದರು.
ಹಬ್ಬಗಳ ಆಚರಣೆ ವಿಚಾರದಲ್ಲಿ ಮುಖ್ಯಮಂತ್ರಿಗಳು ತೀರ್ಮಾನ ಕೈಗೊಳ್ಳುತ್ತಾರೆ. ಕಳೆದ ವರ್ಷವೂ ಅನೇಕ ಹಬ್ಬಗಳ ಆಚರಣೆಗಳನ್ನು ನಿಯಂತ್ರಿಸಲಾಗಿತ್ತು. ಈಗಲೂ ಮಾರ್ಗಸೂಚಿ ಹೊರಡಿಸಲಾಗಿದೆ. ಮಣಿಪಾಲ್ ಸಂಸ್ಥೆಯಲ್ಲಿ 704 ಪ್ರಕರಣ ಕಂಡುಬಂದಿದ್ದು, ಅದನ್ನು ಸಂಪೂರ್ಣ ಸೀಲ್ ಡೌನ್ ಮಾಡಲಾಗಿದೆ. ಇಂತಹ ಕಟ್ಟುನಿಟ್ಟಿನ ಕ್ರಮಗಳನ್ನು ಎಲ್ಲೆಡೆ ವಹಿಸಲಾಗುತ್ತಿದೆ. ಮಹಾರಾಷ್ಟ್ರದಲ್ಲಿ ನಿನ್ನೆ 35 ಸಾವಿರ ಪ್ರಕರಣ ಕಂಡುಬಂದಿದೆ. ನಮ್ಮಲ್ಲಿ 2 ಸಾವಿರ ಪ್ರಕರಣ ಪತ್ತೆಯಾಗಿದೆ. ಆದ್ದರಿಂದ ಜನರು ಇದನ್ನು ಗಂಭೀರವಾಗಿ ಪರಿಗಣಿಸಿ ಸುರಕ್ಷತಾ ಕ್ರಮ ವಹಿಸಬೇಕು. ಯುವಜನರು ತಮ್ಮ ಕುಟುಂಬದ ಹಿರಿಯರನ್ನು ಲಸಿಕೆ ಪಡೆಯಲು ಕೇಂದ್ರಕ್ಕೆ ಕರೆದುಕೊಂಡು ಹೋಗಬೇಕು ಎಂದು ಕೋರಿದರು.
ತಾಂತ್ರಿಕ ಸಲಹಾ ಸಮಿತಿ ಅನೇಕ ಸಲಹೆ ನೀಡಿದೆ. ಎಲ್ಲ ಬಿಗಿಯಾದ ಕ್ರಮ ಕೈಗೊಳ್ಳಲು ಮುಖ್ಯಮಂತ್ರಿಗಳು ನಿರ್ಧಾರ ಕೈಗೊಳ್ಳುತ್ತಾರೆ. ಯಾವುದೇ ಚಟುವಟಿಕೆಗಳನ್ನು ನಿರ್ಬಂಧಿಸುವುದು ಕಷ್ಟ. ಸೋಂಕಿನ ಬೆಳವಣಿಗೆ ಅವಲೋಕಿಸಿ ಜನಜೀವನಕ್ಕೆ ತೊಂದರೆಯಾಗದಂತೆ ಕ್ರಮ ವಹಿಸಲಾಗುತ್ತದೆ. ಆರೋಗ್ಯ ಇಲಾಖೆಯ ಅಧಿಕಾರಿಗಳು ಕೋವಿಡ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಚುನಾವಣಾ ಆಯೋಗದ ಅಧಿಕಾರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ ಎಂದು ತಿಳಿಸಿದರು.
ENGLISH SUMMARY….
No question of hiding of Covid number: Health & Medical Education Minister Dr.K.Sudhakar
Welcome suggestions from opposition leaders to contain second wave
Government seeks cooperation of Election Commission for Covid control
Bengaluru – March 26, 2021: There is no question of hiding covid numbers. Our Government neither intends nor it is possible to hide any details. Only factual data is made public, says health & Medical Education Minister Dr.K.Sudhakar. He was speaking to the media here on Friday.
We are not hiding any statistics regarding Covid-19. All opposition leaders are welcome to give their valuable suggestions for controlling Covid. They can also figure out any flaws in the system. CM may call all party meeting to discuss the issue. We are free to discuss anything in this regard he said.
Chief Minister has taken a decision on festival celebrations. We have put restrictions on public gatherings and congregations during upcoming festivals. There are 704 cases in Manipal institute alone and it has been sealed down. We are taking stringent measures every where to curb spreading. 35,000 cases have been reported in Maharashtra yesterday, and 2,000 here. People should take it seriously and follow precautions. Youth should voluntarily take the elderly people at home people for vaccination, said the Minister.
Technical advisory committee has suggested several precautionary measures. Chief Minister will take decision in this regard. It is difficult to restrict any activity, but keeping in view the spread of infection, adequate measures will be initiated. Health department officials have submitted a representation to Election Commission regarding safe conduct of by-elections amidst the second wave, said Dr.K.Sudhakar
Key words: government -never -hides –Covid-Covid number- Minister Dr. K. Sudhakar.