ನೂತನ ಮಾರ್ಗಸೂಚಿ ಗೊಂದಲಕ್ಕೆ ತೆರೆ ಎಳೆದ ಸರ್ಕಾರ: 14 ದಿನ ಏನೆಲ್ಲಾ ಬಂದ್…​?

ಬೆಂಗಳೂರು,ಏಪ್ರಿಲ್,23,2021(www.justkannada.in):  ರಾಜ್ಯದಲ್ಲಿ ಹೆಚ್ಚುತ್ತಿರುವ ಕೊರೋನಾ ನಿಯಂತ್ರಣಕ್ಕಾಗಿ ಕಳೆದ ಎರಡು ದಿನಗಳ ಹಿಂದೆ ರಾಜ್ಯ ಸರ್ಕಾರ ನೈಟ್ ಕರ್ಫ್ಯೂ ಮತ್ತು ವಿಕೇಂಡ್ ಕರ್ಫ್ಯೂ ಜಾರಿಗೊಳಿಸಿ ಆದೇಶಿಸಿತ್ತು. ಆದರೆ ನಿನ್ನೆ ರಾಜ್ಯಸರ್ಕಾರ ದಿಢೀರನೇ ಪರಿಷ್ಕೃತ ಹೊಸ ಮಾರ್ಗಸೂಚಿ ಬಿಡುಗಡೆ ಮಾಡುವ ಮೂಲಕ ಜನರನ್ನ ಗೊಂದಲಕ್ಕೀಡು ಮಾಡಿತ್ತು.jk

ಇದೀಗ ನೂತನ ಮಾರ್ಗಸೂಚಿ ಗೊಂದಲಕ್ಕೆ ತೆರೆ ಎಳೆದಿರುವ ರಾಜ್ಯ ಸರ್ಕಾರ, ಈ ಕುರಿತು ಸ್ಪಷ್ಡೀಕರಣ ನೀಡಿ ಆದೇಶ ಹೊರಡಿಸಿದೆ ನೂತನ ಮಾರ್ಗಸೂಚಿ ಪ್ರಕಾರ, ಅಗತ್ಯ ಸೇವೆ ಹೊರತು ಪಡಿಸಿ ಉಳಿದವೆಲ್ಲವೂ 14 ದಿನಗಳ ಕಾಲ ಬಂದ್ ಆಗಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಿದೆ.

14 ದಿನ ಏನೆಲ್ಲಾ ಬಂದ್ ಇಲ್ಲಿದೆ ಮಾಹಿತಿ…

ರಾಜ್ಯಾದ್ಯಂತ ರಾತ್ರಿ 9 ರಿಂದ ಬೆಳಗ್ಗೆ 6 ಗಂಟೆಯವರೆಗೆ ನೈಟ್ ಕರ್ಫ್ಯೂ, ಶನಿವಾರ, ಭಾನುವಾರ ವೀಕೆಂಡ್ ಕರ್ಫ್ಯೂ ಜಾರಿಯಲ್ಲಿರುತ್ತದೆ ಸಿನಿಮಾ ಹಾಲ್, ಜಿಮ್, ಕ್ರೀಡಾಂಗಣ, ಈಜುಕೊಳ ಬಂದ್ ಆಗಲಿದ್ದು, ಹೋಟೆಲ್, ರೆಸ್ಟೋರೆಂಟ್​ನಲ್ಲಿ ಪಾರ್ಸಲ್​ಗೆ ಅವಕಾಶ ನೀಡಲಾಗಿದೆ.

ಕೈಗಾರಿಕೆ, ವ್ಯವಸಾಯ, ದಿನಸಿ ಮಳಿಗೆಗೆ ಅನುಮತಿ  ನೀಡಲಾಗಿದ್ದು,  ಏ.23ರಿಂದ ತೆರೆದ ಪ್ರದೇಶದಲ್ಲಿ ತರಕಾರಿ ಮಾರಾಟ, ಲಿಕ್ಕರ್​ ಶಾಪ್, ‌ಬಾರ್​ನಲ್ಲಿ ಪಾರ್ಸಲ್ ​ಗೆ ಅವಕಾಶ ನೀಡಲಾಗಿದೆ.government-new-guideline-confusion-14-day-bandh

ಸರ್ಕಾರಿ ಕಚೇರಿಗಳಲ್ಲಿ ಶೇ.50ರಷ್ಟು ಮಾತ್ರ ಕೆಲಸಕ್ಕೆ ಹಾಜರಾತಿಗೆ ಅವಕಾಶ ನೀಡಲಾಗಿದೆ.  ಐಟಿ, ಬಿಟಿ ಕಂಪನಿಗಳಿಗೆ 100% ವರ್ಕ್ ಫ್ರಮ್ ಹೋಮ್ , ಅಂತರಾಜ್ಯ ಓಡಾಟಕ್ಕೆ ಯಾವುದೇ ನಿರ್ಬಂಧ ಇಲ್ಲ ಇರುವುದಿಲ್ಲ ,  ಸಾರಿಗೆ ಬಸ್​ಗಳಲ್ಲಿ ಶೇ.50 ಮಾತ್ರ ಸೀಟು ಭರ್ತಿಗೆ ಅವಕಾಶ ನೀಡಲಾಗಿದೆ.  ಮದುವೆ ಸಮಾರಂಭದಲ್ಲಿ 50 ಮಂದಿಗೆ ಮಾತ್ರ ಅವಕಾಶಶವಸಂಸ್ಕಾರದಲ್ಲಿ 30 ಜನ ಪಾಲ್ಗೊಳ್ಳೋಕೆ ಗ್ರೀನ್ ​ಸಿಗ್ನಲ್ ನೀಡಿದೆ.

ಇಡೀ ರಾಜ್ಯದಲ್ಲಿ 14 ದಿನವೂ ಸೆಕ್ಷನ್​ 144 ಜಾರಿಯಲ್ಲಿದ್ದು,  ದೂರ ಪ್ರಯಾಣ ಮಾಡೋರಿಗೆ ಟಿಕೆಟ್ ತೋರಿಸಿ ಹೋಗಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಿದೆ.

Key words: government –new Guideline-  confusion-14-day -bandh

.