ಧಾರವಾಡ,ಮೇ,31,2021(www.justkannada.in): ಸರ್ಕಾರ ನೀಡಿರುವ ಪರಿಹಾರ ಇಲ್ಲಿವರೆಗೂ ರೈತರಿಗೆ ಸಿಕ್ಕಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಆರೋಪಿಸಿದರು.
ಧಾರವಾಡ ತಾಲೂಕಿನ ರಾಯಪುರದಲ್ಲಿ ಮಾತನಾಡಿದ ಡಿ.ಕೆ ಶಿವಕುಮಾರ್, ರೈತರ ಸಮಸ್ಯೆಗಳನ್ನು ಕೇಳಲು ಅವರ ಜಮೀನಿಗೆ ಬಂದಿದ್ದೇನೆ, ಇಲ್ಲಿಯವರೆಗೂ ಸರ್ಕಾರ ನೀಡಿದ ಪರಿಹಾರ ರೈತರಿಗೆ ಸಿಕ್ಕಿಲ್ಲ. ರೈತರಿಗೆ ತರಕಾರಿ ಮಾರಲು 2 ಗಂಟೆ ಅವಕಾಶ ನೀಡುತ್ತಾರೆ. ಆದರೆ ಮದ್ಯ ಮಾರಾಟಕ್ಕೆ 4 ಗಂಟೆ ಕಾಲ ಅವಕಾಶವನ್ನು ನೀಡುತ್ತಾರೆ. ಈ ಸರ್ಕಾರಕ್ಕೆ ಕಣ್ಣು, ಹೃದಯ ಇದ್ಯಾ..? ಎಂದು ಕಿಡಿಕಾರಿದರು.
ನಾನು ಹೇಳಿದ ಮೇಲೆ ಕೆಲ ಸಚಿವರನ್ನು ಜಿಲ್ಲೆಗಳಿಗೆ ಕಳುಹಿಸಿದರು. ನಾವು ರೈತರ ಜೊತೆ ನಿಲ್ಲುತ್ತೇವೆ. ರಾಜ್ಯದಲ್ಲಿ ಲಾಕ್ಡೌನ್ ವಿಸ್ತರಣೆ ಬಗ್ಗೆ ನಾನೇನೂ ಹೇಳಲಾರೆ. ಅದು ಅವರ ನಿರ್ಧಾರ. ಅವರು ಏನಾದರೂ ಮಾಡಿಕೊಳ್ಳಲಿ. ಸರ್ಕಾರ ನನ್ನ ಬಳಿ ಕೇಳಿದರೆ ನನ್ನ ಅಭಿಪ್ರಾಯ ಹೇಳುತ್ತೇನೆ ಎಂದು ಡಿ.ಕೆ ಶಿವಕುಮಾರ್ ತಿಳಿಸಿದರು.
ಇನ್ನು ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಡಿ.ಕೆ ಶಿವಕುಮಾರ್, ಗೃಹ ಸಚಿವ ಬಸವರಾಜ ಬೊಮ್ಮಾಯಿ ಬೆಂಬಲ ನೀಡಿದ್ದಾರೆ. ರಮೇಶ್ ನಿರ್ದೋಷಿಯಾಗಿ ಹೊರಬರುವುದಾಗಿ ಸಿಎಂ ಬಿಎಸ್ ವೈ ಅವರೇ ಹೇಳಿಕೆ ನೀಡಿದ್ದಾರೆ. ಅವರ ಬೆಂಬಲಕ್ಕೆ ನಿಂತಿದ್ದಾರೆ ಎಂದು ಹೇಳಿದರು.
Key words: government -not given – compensation- farmers-KPCC president -DK Sivakumar