ಬೆಳಗಾವಿ,ಡಿಸೆಂಬರ್,20,2022(www.justkannada.in): ಮಹಾರಾಷ್ಟ್ರ-ಕರ್ನಾಟಕ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವನ್ನ ಮಾಜಿ ಸಚಿವ ಹೆಚ್.ಕೆ ಪಾಟೀಲ್ ತರಾಟೆ ತೆಗೆದುಕೊಂಡಿದ್ದಾರೆ.
ಈ ಕುರಿತು ಮಾತನಾಡಿದ ಹೆಚ್.ಕೆ ಪಾಟೀಲ್, ಗಡಿ ವಿಚಾರದಲ್ಲಿ ಸರ್ಕಾರಕ್ಕೆ ಗಂಭೀರತೆ, ಕಾಳಜಿ ಕಾಣುತ್ತಿಲ್ಲ .ಕೇಂದ್ರ ಗೃಹ ಸಚಿವರ ಸಭೆಯನ್ನ ಸಿಎಂ ಬಸವರಾಜ ಬೊಮ್ಮಾಯಿ ತಿರಸ್ಕಾರ ಮಾಡಬೇಕಿತ್ತು. ನಮ್ಮ ಕರ್ನಾಟಕ ಸರ್ಕಾರಕ್ಕೆ ಶಾಂತಿ ಕಾಪಾಡಲು ಆಗುವುದಿಲ್ಲವಾ. ಬೆಳಗಾವಿಯಲ್ಲಿ ಅಶಾಂತಿ ಇದೆಯಾ..? ತಪ್ಪು ಹೆಜ್ಜೆ ಇಟ್ಟಿರುವ ರಾಜ್ಯ ಸರ್ಕಾರ ಜನರ ಕ್ಷಮೆ ಕೇಳಬೇಕು ವಿಧಾನಸಭೆಯಲ್ಲಿ ಗಡಿ ವಿವದ ಕುರಿತು ಚರ್ಚೆ ಮಾಡುತ್ತೇವೆ ಎಂದರು.
Key words: government -not – serious – border- issue-Former minister -HK Patil