ಮೋಟಾರು ವಾಹನ ತೆರಿಗೆ ಪಾವತಿ ಅವಧಿ  ವಿಸ್ತರಿಸಿ ಸರ್ಕಾರ ಆದೇಶ…

ಬೆಂಗಳೂರು, ಏಪ್ರಿಲ್.30,2021(www.justkannada.in): ಮೋಟಾರು ವಾಹನ ತೆರಿಗೆ ಪಾವತಿ ಅವಧಿಯನ್ನು ಮೇ 15ರವರೆಗೆ ವಿಸ್ತರಿಸಿ ಸಾರಿಗೆ ಇಲಾಖೆ ಆದೇಶ ಹೊರಡಿಸಿದೆ.jk

ಕೋವಿಡ್ 2ನೇ ಅಲೆ ಹಿನ್ನೆಲೆಯಲ್ಲಿ ಕರ್ನಾಟಕ ಮೋಟಾರು ವಾಹನ ತೆರಿಗೆ ಕಾಯ್ದೆ 1957ರ ಕಲಂ 4(1) ನಿಯಮಗಳನ್ನು ಸಡಿಲಗೊಳಿಸಿದ್ದು,  ಕರ್ನಾಟಕ ರಾಜ್ಯದ ಎಲ್ಲಾ ನೋಂದಾಯಿತ ಸಾರಿಗೆ ಪ್ರಯಾಣಿಕ ವಾಹನಗಳಿಗೆ ಅನ್ವಯಿಸುವಂತೆ ಈಗಾಗಲೇ ಸರ್ಕಾರದ ಆದೇಶ ಹೊರಡಿಸಲಾಗಿತ್ತು‌. ಆದರೆ, ಹೊಸ ವಾಹನಗಳ ನೋಂದಣಿಯನ್ನು ಹೊರತುಪಡಿಸಿ ತೆರಿಗೆ ಅವಧಿ ವಿಸ್ತರಿಸಲಾಗಿದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ.

government-order-extending-motor-vehicle-tax-payment

ಮೋಟರು ವಾಹನ ತೆರಿಗೆ ಪಾವತಿ ಅವಧಿಯನ್ನ ಮೇ 15ರವರೆಗೆ ವಿಸ್ತರಣೆ ಮಾಡಲಾಗಿದೆ. ಹಾಗೆಯೇ ದಂಡ ಸಹಿತವಾಗಿ ತೆರಿಗೆ ಪಾವತಿಸುವ ಅವಧಿಯನ್ನು ಮೇ. 31 ರವರೆಗೆ ವಿಸ್ತರಿಸಿ ಆದೇಶಿಸಲಾಗಿದೆ.

Key words: Government -order -extending -motor vehicle -tax payment