ನವದೆಹಲಿ,ಜು,5,2019(www.justkannada.in): ಸರ್ಕಾರಿ ಪ್ರಕ್ರಿಯೆ ಸರಳೀಕರಣ: ಮೂಲಸೌಕರ್ಯ; ಡಿಜಿಟಲೀಕರಣಕ್ಕೆ ಹೆಚ್ಚು ಒತ್ತು ಕೊಡುತ್ತೇವೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆ ವೇಳೆ ತಿಳಿಸಿದರು.
ಇಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2019-20ನೇ ಸಾಲಿನ ಕೇಂದ್ರ ಬಜೆಟ್ ಮಂಡನೆ ಮಾಡುತ್ತಿದ್ದಾರೆ. ನಿರ್ಮಲಾ ಸೀತಾರಾಮನ್ ಅವರು ಚೊಚ್ಚಲ ಬಾರಿಗೆ ಬಜೆಟ್ ಮಂಡಿಸುತ್ತಿದ್ದಾರೆ. ದೇಶ ಪ್ರಜಾಪ್ರಭುತ್ವದ ಉತ್ಸವ ಆಚರಿಸುತ್ತಿದೆ. ಸದೃಢ ದೇಶಕ್ಕಾಗಿ ಸದೃಢ ನಾಗರಿಕರು. ದೇಶ ಮೊದಲು ಮಂತ್ರದ ಮೂಲಕ ಸರ್ಕಾರದ ಯೋಜನೆ ಜಾರಿಗೆ ತರುತ್ತೇವೆ. 3 ಟ್ರಿಲಿಯನ್ ಆರ್ಥಿಕತೆ ಇದ್ದ ದೇಶ ಕೆಲವೇ ವರ್ಷಗಳಲ್ಲಿ 5 ಟ್ರಿಲಿಯನ್ ಆರ್ಥಿಕತೆ ಯೋಜನೆ ರೂಪಿಸಿದೆ. ನಾವು ದೇಶವನ್ನು ಎತ್ತರಕ್ಕೆ ಕೊಂಡೊಯ್ಯಲು ಬದ್ಧರಿದ್ದೇವೆ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದರು.
ಹಾಗೆಯೇ ಸರ್ಕಾರಿ ಪ್ರಕ್ರಿಯೆಗಳನ್ನು ಸರಳೀಕರಣ ಮಾಡುತ್ತೇವೆ. ಜನರ ಭಾಗವಹಿಸುವಿಕೆಯೊಂದಿಗೆ ಟೀಂ ಇಂಡಿಯಾ .ನಮ್ಮ ಪ್ರಧಾನಿ ನೇತೃತ್ವದಲ್ಲಿ ಖಂಡಿತವಾಗಿ ಗುರಿ ಮುಟ್ಟಲಿದ್ದೇವೆ. ಕೇಂದ್ರ ಜಾರಿಗೆ ತಂದಿರುವ ಉಡಾನ್ ಯೋಜನೆಯಿಂದ ಸಾಮಾನ್ಯರ ಬದುಕಿಗೆ ಆಶಾಕಿರಣವಾಗಿದೆ. ಗ್ರಾಮೀಣ ಮತ್ತು ನಗರ ಭೇದವನ್ನು ಯೋಜನೆ ತೆಗೆದು ಹಾಕಿದೆ. ಭಾರತ ಈಗ ಉದ್ಯೋಗ ನೀಡುವ ಕ್ಷೇತ್ರವಾಗಿ ಬದಲಾಗಿದೆ. ಉಜ್ವಲ ಯೋಜನೆಯಿಂದ ಮಹಿಳೆಯರು ಹೊಗೆ ಮುಕ್ತರಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
Key words: Government- process- simplification- Infrastructure- Union Minister- Nirmala Sitharaman-centralbudget