ಬೆಂಗಳೂರು,ಏಪ್ರಿಲ್,02,2021(www.justkannada.in) : ಕರೋನಾ 2ನೇ ಅಲೆ ಹೆಚ್ಚಿದೆ. ಸರ್ಕಾರಕ್ಕೆ ದೂರು, ಪ್ರತಿದೂರಿನ ರಂಪಾಟದಲ್ಲಿ ಜನಹಿತಕ್ಕಿಂತ ಸ್ವಹಿತವೇ ಮುಖ್ಯವಾಗಿದೆ. ಕಿತ್ತಾಟದಲ್ಲೇ ಮುಳುಗಿರುವ ಸರ್ಕಾರಕ್ಕೆ ರಾಜ್ಯದಲ್ಲಿನ ಸಮಸ್ಯೆ ಬಗೆಹರಿಸುವ ಇಚ್ಛಾಶಕ್ತಿ ಇಲ್ಲವಾಗಿದೆ ಎಂದು ಟ್ವೀಟ್ ಮೂಲಕ ರಾಜ್ಯ ಕಾಂಗ್ರೆಸ್ ಕಿಡಿಕಾರಿದೆ.
ಬಿಜೆಪಿ ಸರ್ಕಾರದ ಕ್ರೋನಾಲಜಿ! ನೆರೆ ಬಂದಾಗ – ಸಂಪುಟವಿಲ್ಲದೆ ಪರದಾಟ ಕರೋನಾ ಬಂದಾಗ – ಕರೋನಾ ಲೂಟಿಗೆ ಕಿತ್ತಾಟ ಆರ್ಥಿಕ ಬಿಕ್ಕಟ್ಟಿನಲ್ಲಿ – ಖಾತೆ ಕಿತ್ತಾಟ ಬೆಲೆ ಏರಿಕೆಯ ಸಂದರ್ಭದಲ್ಲಿ – ಸಿಡಿ ಕಳ್ಳಾಟ ಇದೆ ಆಗಿದೆ ಎಂದು ಆಕ್ರೋಶವ್ಯಕ್ತಪಡಿಸಿದೆ.
ಸಿಡಿ ಸರ್ಕಾರಕ್ಕೆ ಸಿಡಿ ಚಿಂತೆ, ಜನತೆಗೆ ಬದುಕು ಉಳಿಸಿಕೊಳ್ಳುವ ಚಿಂತೆ. ಹಲವು ದಿನಗಳಿಂದ ಸಾರಿಗೆ ನೌಕರರ ಬಿಕ್ಕಟ್ಟು ದಿನೇ ದಿನೇ ಹೆಚ್ಚುತ್ತಿದ್ದರೂ ಸಚಿವ ಲಕ್ಷ್ಮಣ್ ಸವದಿ ಕಣ್ ಮುಚ್ಚಿಕೊಂಡು ಕುಳಿತಿದ್ದಾರೆ ಎಂದು ದೂರಿದೆ.
key words : government-Rather-people-Self-Main-State-Congress-criticism