ಚಾಮರಾಜನಗರ,ಜನವರಿ,8,2025 (www.justkannada.in): ಸಾರಿಗೆ ತೊಂದರೆ, ಇಂಗ್ಲೀಷ್ ವ್ಯಾಮೋಹ, ಶಿಕ್ಷಕರ ಕೊರತೆ ಹೀಗೆ ನಾನಾಕಾರಣಗಳಿಂದ ಗಡಿಜಿಲ್ಲೆ ಚಾಮರಾಜನಗರದಲ್ಲಿ ಸರ್ಕಾರಿ ಶಾಲೆಗಳು ಮುಚ್ಚಿತ್ತಿವೆ.
ಹೌದು ಚಾಮರಾಜನಗರದಲ್ಲಿ ಕಳೆದ ಶೈಕ್ಷಣಿಕ ವರ್ಷದಲ್ಲಿ 12 ಶಾಲೆ ಬೀಗ ಬಿದ್ದರೇ ಈ ವರ್ಷ 12 ಸರ್ಕಾರಿ ಶಾಲೆಗಳ ಬಾಗಿಲು ಬಂದ್ ಆಗಿದೆ. ಇಂಗ್ಲಿಷ್ ಶಾಲೆಗಳ ವ್ಯಾಮೋಹ, ಸಾರಿಗೆ ತೊಂದರೆಯಿಂದಾಗಿ ಸರ್ಕಾರಿ ಶಾಲೆಗಳತ್ತ ಮಕ್ಕಳು ಮುಖ ಮಾಡುತ್ತಿಲ್ಲ. ಹೀಗಾಗಿ ಜಿಲ್ಲೆಯಲ್ಲಿ 1-5 ರ ವರೆಗಿನ 24 ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳು ಕ್ಲೋಸ್ ಆಗಿವೆ. ಮಕ್ಕಳ ದಾಖಲಾತಿ ಕುಸಿತ ಕಂಡ ಹಿನ್ನೆಲೆ ಶಾಲೆಗಳು ಬಂದ್ ಆಗಿವೆ.
ಚಾಮರಾಜನಗರ ತಾಲ್ಲೂಕಿನ 11 ಶಾಲೆಗಳು, ಗುಂಡ್ಲುಪೇಟೆ ತಾಲೂಕಿನ 9 , ಹನೂರಿನ 2 , ಕೊಳ್ಳೇಗಾಲ ಮತ್ತು ಯಳಂದೂರು ತಾಲ್ಲೂಕಿನಲ್ಲಿ ತಲಾ 1 ಶಾಲೆಗಳು ಬಂದ್ ಆಗಿವೆ ಎಂಬ ಮಾಹಿತಿ ಲಭ್ಯವಾಗಿದೆ.
ಇಂಗ್ಲಿಷ್ ಮಾಧ್ಯಮದಲ್ಲಿ ಶಾಲೆ ನಡೆಸಲು ಪೋಷಕರು ಕೇಳುತ್ತಾರೆ . ಎಲ್‌ಕೆಜಿ ಯುಕೆಜಿ ಪ್ರಾರಂಭಿಸಲು ಕೇಳುತ್ತಾರೆ. ಪಾಲಕರ ಬೇಡಿಕೆಯನ್ನು ಶಿಕ್ಷಣ ಸಚಿವರ ಗಮನಕ್ಕೆ ತಂದಿದ್ದೇವೆ ಎಂದು ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ರಾಮಚಂದ್ರರಾಜೇ ಅರಸ್ ತಿಳಿಸಿದ್ದಾರೆ.
Key words: Chamarajanagar, 24 government schools, Bandh