ಮೈಸೂರು, ಜುಲೈ 10,2020(www.justkannada.in): ಕೊರೊನಾ ಸಂಕಷ್ಟದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಹುದ್ದೆ ಅನಾಥವಾಗಿದ್ದು, ಗ್ರಾಮೀಣ ಭಾಗದ ಜನರ ಬಗ್ಗೆ ನಿರ್ಲಕ್ಷ ಬೇಡ ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಒತ್ತಾಯಿಸಿದ್ದಾರೆ.
ರಾಜ್ಯದ ಉದ್ದಗಲಕ್ಕೂ ಗ್ರಾಮೀಣ ಪ್ರದೇಶದಲ್ಲಿ ಕೋರೋನ ಸೋಂಕು ತೀವ್ರವಾಗಿ ಏರುತ್ತಿದೆ. ಸೋಂಕು ತಗುಲಿದವರು ಚಿಕಿತ್ಸೆಗಾಗಿ ಜಿಲ್ಲಾ ಮಟ್ಟದ ಆಸ್ಪತ್ರೆಗಳಿಗೆ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಬಹುತೇಕ ತಾಲೂಕು ಮಟ್ಟದ ಸರ್ಕಾರಿ ಆಸ್ಪತ್ರೆಗಳು ಕೂರೂನ ರೋಗಿಗಳನ್ನು ಐಷೋಲೇಷನ್ ವಾರ್ಡ್ನಲ್ಲಿಟು ಚಿಕಿತ್ಸೆ ಮಾಡಲು ಯಾವುದೇ ರೀತಿಯಲ್ಲೂ ಸಜ್ಜಾಗಿಲ್ಲ ಎಂದು ಪ್ರಕಟಣೆಯಲ್ಲಿ ದೂರಿದ್ದಾರೆ.
ರಾಜ್ಯದ ಉದ್ದಗಲಕ್ಕೂ ಇದೇ ಪರಿಸ್ಥಿತಿ ಮುಂದುವರೆದಿದೆ. ರಾಜ್ಯ ಸರ್ಕಾರ ಮಾತ್ರ ಬೆಂಗಳೂರು ನಗರದ ಕೋರೋನ ಪೀಡಿತ ಜನರ ಬಗ್ಗೆ ಹೆಚ್ಚು ಕಾಳಜಿ ವಹಿಸುವಂತೆ ಕಂಡುಬರುತ್ತಿದೆ ಸೋಂಕು ಪೀಡಿತ. ಆದರೆ ಜನರ ಸಂಖ್ಯೆ ಏರಿಕೆಯಾದರೆ ಗ್ರಾಮೀಣ ಜನರನ್ನು ಕಾಪಾಡುವಂತಹ ವ್ಯವಸ್ಥೆಯೇ ಇಲ್ಲದಂತಾಗಿದೆ. ಇಂಥ ಬಿಕ್ಕಟ್ಟಿನ ಸಂದರ್ಭದಲ್ಲಿ, ಮೈಸೂರು ಚಾಮರಾಜನಗರ ಕೊಡಗು ಹಾಸನ ಜಿಲ್ಲಾ ಉಸ್ತುವಾರಿ ಸಚಿವರನ್ನು ಬೆಂಗಳೂರು ನಗರದ ಕೊರೋನಾ ಜವಾಬ್ದಾರಿಯನ್ನು ನಿರ್ವಹಿಸಲು ಸೂಚಿಸಲಾಗಿರುವುದು ಕಂಡರೆ ರಾಜ್ಯ ಸರ್ಕಾರ ಗ್ರಾಮೀಣ ಪ್ರದೇಶವನ್ನು ನಿರ್ಲಕ್ಷೆ ಮಾಡಿದಂತಾಗಿದೆ.
ಕೇವಲ ಬೆಂಗಳೂರಿಗೆ ಹೆಚ್ಚು ನಿಗಾವಹಿಸುವ ಕಾರ್ಯ ನಡೆಸಲಾಗುತ್ತಿದೆ. ಇಂತಹ ಚಟುವಟಿಕೆಯಿಂದ ಜಿಲ್ಲಾ ಉಸ್ತುವಾರಿ ಸಚಿವರ ಜವಾಬ್ದಾರಿ ನಾಮಕಾವಸ್ಥೆಯಾಗಿ, ಅನಾಥವಾಗಿ ಉಳಿಯುತ್ತದೆ, ಸರ್ಕಾರ ನಿರ್ಧಾರವನ್ನು ಕೂಡಲೇ ಬದಲಾಯಿಸಿ ಕುರೂನ ಸಮಸ್ಯೆ ಬಗೆಹರಿಯುವ ತನಕ ಆಯಾ ಜಿಲ್ಲೆಯ ಉಸ್ತುವಾರಿ ಸಚಿವರು ಆಯಾ ಜಿಲ್ಲೆಯಲ್ಲಿ ಉಳಿದು ನಿಗಾವಹಿಸುವ ಕಾರ್ಯ ನಡೆಸಲು ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರನ್ನು ಒತ್ತಾಯಿಸಿದ್ದಾರೆ.
ಪ್ರಧಾನಿ ಫಸಲ್ ಭೀಮಾ ಬೆಳೆ ವಿಮೆ ಯೋಜನೆ ರೈತರ ಪಾಲಿಗೆ ಮಾಯಜಿಂಕೆ ಯಾಗೆ ಮರೀಚಿಕೆಯಾಗಿದೆ ರಾಜ್ಯದಲ್ಲಿ ಕೃಷಿ ಚಟುವಟಿಕೆ ಆರಂಭವಾಗುತ್ತಿರುವಾಗ ಬೆಳೆ ವಿಮೆ ಕಂಪನಿಗಳು ದೊಡ್ಡ ದೊಡ್ಡ ಜಾಹೀರಾತು ನೀಡಿ ಬೆಳೆವಿಮೆ ಹಣ ಕಟ್ಟಲು ರೈತರನ್ನು ಪ್ರೇರೇಪಿಸುತ್ತಿದ್ದಾರೆ. ರೈತರು ಯಾವ ಪುರುಷಾರ್ಥಕ್ಕಾಗಿ ಬೆಳೆವಿಮೆ ಕಟ್ಟಬೇಕು ಎನ್ನುವುದೇ ಸಂಶಯ ಮೂಡುತ್ತಿದೆ ಎಂದು ಆರೋಪಿಸಿದ್ದಾರೆ.