ಸಾರ್ವಜನಿಕರ ಸಂಪರ್ಕಕ್ಕೆ ಸಿಗದ, ಕರೆ ಸ್ವೀಕರಿಸದ ಅಧಿಕಾರಿಗಳಿಗೆ ಸರಕಾರದ ‘ಬಿಸಿ’

ಬೆಂಗಳೂರು, ಅಕ್ಟೋಬರ್ 12, 2021 (www.justkannada.in): ಸಾರ್ವಜನಿಕರ ಸಂಪರ್ಕಕ್ಕೆ ಸಿಗದ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಲು ರಾಜ್ಯ ಸರಕಾರ ಮುಂದಾಗಿದೆ.

ಜಿಲ್ಲಾಧಿಕಾರಿ, ತಹಶೀಲ್ದಾರ್, ರಾಜಸ್ವ ನಿರೀಕ್ಷಕರು ಕಡ್ಡಾಯವಾಗಿ ಸಾರ್ವಜನಿಕರ ಕರೆಗಳನ್ನು ಸ್ವೀಕರಿಸಿ, ಚಾಚು ತಪ್ಪದೇ ನಿಯಮಾನುಸಾರ ಸಮಸ್ಯೆಗಳ ಕುರಿತಂತೆ ಕ್ರಮ ಕೈಗೊಳ್ಳುವಂತೆ ಎಚ್ಚರಿಕೆ ನೀಡಿದೆ.

ಈ ಸಂಬಂಧ ಕಂದಾಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ತುಷಾರ್ ಗಿರಿನಾಥ್ ಸುತ್ತೋಲೆ ಹೊರಡಿಸಿದ್ದಾರೆ. ಜನ ಪ್ರತಿನಿಧಿಗಳ ಹಾಗೂ ಸಾರ್ವಜನಿಕರ ಜೊತೆ ನಿಕಟ ಸಂಪರ್ಕ ಹಾಗೂ ಸಂಬಂಧ ಹೊಂದಿರುವ ಜನಸ್ನೇಹಿಯಾಗಿ ಕೆಲಸ ಮಾಡಬೇಕಿದೆ.

ಗ್ರಾಮಲೆಕ್ಕಿಗರಿಂದ ರಾಜಸ್ವ ನಿರೀಕ್ಷಕರು, ಉಪ ತಹಶೀಲ್ದಾರ್, ತಹಶೀಲ್ದಾರ್, ಉಪ ವಿಭಾಗಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳು ನೇರವಾಗಿ ಜನರ ಹಾಗೂ ಜನಪ್ರತಿನಿಧಿಗಳ ಸಂಪರ್ಕದಲ್ಲಿರುತ್ತಾರೆ. ಹೀಗಾಗಿ ಜನರ ಕರೆಗಳನ್ನು ಸ್ವೀಕರಿಸಿ ಪ್ರತಿಕ್ರಿಯೆ ನೀಡಬೇಕು. ಸಂಬಂಧಿತ ಸಮಸ್ಯೆಗೆ ಪರಿಹಾರ ನೀಡಬೇಕೆಂದು ನಿರ್ದೇಶನ ನೀಡಿದ್ದಾರೆ.

ಸಾರ್ವಜನಿಕರಿಂದ ಹಾಗೂ ಜನಪ್ರತಿನಿಧಿಗಳಿಂದ ಕರೆ ಬಂದಲ್ಲಿ, ಅಧಿಕೃತವಾಗಿ ಕರೆಗಳನ್ನು ಸ್ವೀಕರಿಸಿ, ಸದರಿ ಅಹವಾಲು, ಮನವಿಗಳಿಗೆ ಹೆಚ್ಚು ಗಮನ ನೀಡಿ, ಕಾನೂನಿನ ವ್ಯಾಪ್ತಿಯಲ್ಲಿ ನಿಯಮಾನುಸಾರ ಕ್ರಮ ಕೈಗೊಳ್ಳಬೇಕೆಂದು ಸೂಚನೆ ನೀಡಿದ್ದಾರೆ.

Key words: Government Warning to Officers who have not received a call from the public

ENGLISH SUMMARY…

Govt. officials who won’t receive public calls will have to face action
Bengaluru, October 12, 2021 (www.justkannada.in): The State Government has decided to teach the officials who won’t receive phone calls from people.
The government has warned all the Deputy Commissioners, Tahasildars, and Revenue Inspectors to compulsorily receive phone calls of the public, and address their grievances, and take necessary action without fail.
Tushar Girinath, Principal Secretary, Revenue Department, has issued a circular in this regard and has asked all the department officials to develop a cordial relationship with the people.final-decision-four-days-compliance-fees-industry-minister-jagadish-shettar
Officials of the Revenue Department like the Village Accountants, Revenue Inspectors, Deputy Tahasildars, Tahasildar, Assistant Commissioners will always be in constant touch with the people and elected representatives. Hence, they should always be ready to receive public phone calls and address grievances.
Keywords: Revenue Department/ State Government/ receive phone calls/ compulsory