ಮೈಸೂರು,ನವೆಂಬರ್,05,2020(www.justkannada.in) : ಸರ್ಕಾರಿ ಅಧಿಕಾರಿಗಳು ಪಕ್ಷದ ಏಜೆಂಟಗಳಾಗಿ ಕೆಲಸ ಮಾಡ್ತಿದ್ದಾರೆ. ಇದು ನಾಚಿಕೆಗೇಡಿನ ಸಂಗತಿ. ಕೇಂದ್ರ ಸರ್ಕಾರ ಇಡಿ, ಐಟಿ, ಸಿಬಿಐ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಿದೆ ಎಂದು ಮಾಜಿ ಸಂಸದ ಆರ್. ಧ್ರುವನಾರಾಯಣ್ ಕಿಡಿಕಾರಿದ್ದಾರೆ.
ಮಾಜಿ ಸಚಿವ ವಿಜಯ್ ಕುಲಕರ್ಣಿ ಬಂಧನ ವಿಚಾರವಾಗಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಕಾನೂನಿನ ಚೌಕಟ್ಟಿನಲ್ಲಿ ತನಿಖೆ ನಡೆಯಬೇಕು. ವಿನಯ್ ಕುಲಕರ್ಣಿ ಈ ರೀತಿಯ ಯಾವುದೇ ಪ್ರಕರಣದಲ್ಲಿ ಭಾಗಿಯಾಗಿಲ್ಲ ಅನ್ನೋ ವಿಶ್ವಾಸ ನಮಗಿದೆ ಎಂದರು.
ಡಿ.ಕೆ.ಶಿವಕುಮಾರ್ ಮೇಲೆ ಇಡಿ ರೈಡ್ ಆದಾಗ ಅವರ ಜೊತೆ ವಿನಯ್ ಕುಲಕರ್ಣಿ ಇದ್ದರು. ಆವಾಗ ಡಿ.ಕೆ.ಶಿವಕುಮಾರ್ ಅವರಿಗೂ ಬಿಜೆಪಿ ಸೇರ್ಪಡೆಗೊಳ್ಳುವಂತೆ ಆಮಿಷ ನೀಡಲಾಗಿತ್ತು. ಆದರೆ, ಡಿ.ಕೆ.ಶಿವಕುಮಾರ್ ಬಿಜೆಪಿ ಸೇರಲಿಲ್ಲ ಬಳಿಕ ಮತ್ತೆ ಅವರ ಮೇಲೆ ರೈಡ್ ಮಾಡಲಾಯಿತು. ಈಗಲೂ ಇದೇ ರೀತಿ ತನಿಖಾ ಸಂಸ್ಥೆಗಳ ಅಧಿಕಾರಿಗಳಿಂದ ವಿನಯ್ ಕುಲಕರ್ಣಿ ಬಂಧಿಸಲಾಗಿದೆ ಎಂದು ಧ್ರುವನಾರಾಯಣ್ ಹೇಳಿದ್ದಾರೆ.
key words : Government-officials-party-agents-Working-Former MP-R. Dhruvanarayan