ಮೈಸೂರು,ಡಿ,23,2019(www.justkannada.in): ಇಂದು ರೈತ ದಿನಾಚರಣೆ ಹಿನ್ನೆಲೆ, ಮೈಸೂರಿನಲ್ಲಿ ಮೌನಾಚರಣೆ ಮಾಡುವ ಮೂಲಕ ಹುತಾತ್ಮ ರೈತರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಮೈಸೂರಿನ ಗನ್ ಹೌಸ್ ಬಳಿಯ ಕುವೆಂಪು ಪಾರ್ಕ್ ನಲ್ಲಿ ಕಬ್ಬು ಬೆಳೆಗಾರರ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ಮೈಸೂರು, ಚಾಮರಾಜನಗರ ರೈತರ ಸಭೆ ಆಯೋಜಿಸಲಾಗಿತ್ತು. ಸಭೆಯಲ್ಲಿ ಹುತಾತ್ಮ ರೈತರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಸಭೆಯಲ್ಲಿ ಸಾಲಮನ್ನಾ, ರೈತರ ಸಮಸ್ಯೆಗಳು ಕುರಿತು ಚರ್ಚಿಸಲಾಯಿತು.
ನಾಡಿನ ಸಮಸ್ತ ರೈತರಿಗೆ ರೈತದಿನಾಚರಣೆ ಶುಭ ಕೋರಿ ಮಾತನಾಡಿದ ರೈತ ಮುಖಂಡ ಕುರುಬೂರು ಶಾಂತಕುಮಾರ್, ಸರ್ಕಾರ ಪ್ರತಿ ವರ್ಷ ರೈತ ದಿನಾಚರಣೆ ಆಚರಿಸುತ್ತೆ. ಆದರೆ ರೈತರ ಸಮಸ್ಯೆಗಳಿಗೆ ಇಂದಿಗೂ ಕೂಡಾ ಪರಿಹಾರ ಸಿಕ್ಕಿಲ್ಲ. ರೈತ ಉಳಿದರೆ ದೇಶ ಉಳಿಯುವುದು ಎಂಬುದನ್ನ ಸರ್ಕಾರ ತಿಳಿದುಕೊಳ್ಳಬೇಕು. ರಾಜ್ಯದಲ್ಲಿ ರೈತರ ಆತ್ಮಹತ್ಯೆ ಸಂಖ್ಯೆ ಹೆಚ್ಚಾಗಿದೆ. ಸೂಕ್ತ ಬೆಲೆ ಇಲ್ಲದೆ ರೈತ ಕಂಗಾಲಾಗಿದ್ದಾನೆ. ಕೂಡಲೇ ಸರ್ಕಾರಗಳು ಎಚ್ಚೆತ್ತುಕೊಳ್ಳಬೇಕು. ರೈತರ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಆಗ್ರಹಿಸಿದರು.
Key words: governments – solve – farmer-problem- Kuruburu Shanthakumar