ಬೆಂಗಳೂರು,ಆಗಸ್ಟ್,23,2024 (www.justkannada.in): ಪ್ರಾಸಿಕ್ಯೂಷನ್ ವಿಚಾರಕ್ಕೆ ಸಂಬಂಧಿಸಿದಂತೆ ಸರ್ಕಾರ ಮತ್ತು ರಾಜ್ಯಪಾಲರ ನಡುವೆ ಸಂಘರ್ಷ ಕುರಿತು ಪ್ರತಿಕ್ರಿಯಿಸಿದ ಗೃಹ ಸಚಿವ ಡಾ. ಜಿ.ಪರಮೇಶ್ವರ್, ರಾಜ್ಯಪಾಲರು ನಮ್ಮ ಸರ್ಕಾರದ ವಿರುದ್ದ ಇದ್ದಾರೆಂಬುದು ಸ್ಪಷ್ಟ ಎಂದಿದ್ದಾರೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಪರಮೇಶ್ವರ್, ಪಕ್ಷದ ವರಿಷ್ಠರು ಕರೆದಿರುವ ಹಿನ್ನೆಲೆ ದೆಹಲಿಗೆ ಹೋಗುತ್ತಿದ್ದೇವೆ. ಸಿಎಂ ಸಿದ್ಧರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಜೊತೆ ನಾನು ಹೋಗುತ್ತಿದ್ದೇನೆ. ನಾವೆಲ್ಲಾ ಸ್ವಯಂಪ್ರೇರತರಾಗಿ ಹೋಗುತ್ತಿದ್ದೇವೆ. ನನಗೆ ಇಲಾಖೆ ಕೆಲಸ ಕೂಡ ಇದೆ ಅದಕ್ಕಾಗಿ ಹೋಗುತ್ತಿದ್ದೇವೆ. ಅಲ್ಲಿ ನಾವು ಮುಡಾ ಹಗರಣ ಕುರಿತು ವಿವರ ನೀಡಲು ಹೋಗುತ್ತಿಲ್ಲ. ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಅಜೆಂಡಾ ಏನಿದೆ ಗೊತ್ತಿಲ್ಲ ಎಂದರು.
ಸರ್ಕಾರ ಮತ್ತು ರಾಜ್ಯಪಾಲರ ಜೊತೆ ಹೊಂದಾಣಿಕೆ ಇಲ್ಲಿದಿದ್ದರೇ ಪ್ರಾಸಿಕ್ಯೂಷನ್ ಗೆ ಅನುಮತಿಯಂತ ಬೆಳವಣಿಗೆ ನಡೆಯುತ್ತವೆ. ಒಂದೆರೆಡು ಬಿಲ್ ಸ್ಪಷ್ಟನೆ ಕೋರಿ ರಾಜ್ಯಪಾಲರು ವಾಪಸ್ ಕಳುಹಿಸಿದ್ದರು. ಇದೀಗ ಸಾಮಾನ್ಯ ಬಿಲ್ ಕೂಡ ವಾಪಸ್ ಕಳುಹಿಸಿದ್ದಾರೆ. ನಮ್ಮ ಸರ್ಕಾರದ ವಿರುದ್ದ ರಾಜ್ಯಪಾಲರು ಇದ್ದಾರೆಂಬುದು ಸ್ಪಷ್ಟ ಎಂದು ಪರಮೇಶ್ವರ್ ತಿಳಿಸಿದರು.
Key words: Governor, against, government, Minister, Dr. G. Parameshwar