ಮುಡಾ ಕೇಸ್ ನಲ್ಲಿ ಸಿಎಂ ಪಾತ್ರವೇನೆಂಬುದರ ಬಗ್ಗೆ  ರಾಜ್ಯಪಾಲರು ಹೇಳಿಲ್ಲ- ಹಿರಿಯ ವಕೀಲ ಸಿಂಘ್ವಿ ವಾದ

ಬೆಂಗಳೂರು,ಸೆಪ್ಟಂಬರ್,12,2024 (www.justkannada.in):  ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವುದನ್ನ ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ ಸಲ್ಲಿಸಿರುವ ಅರ್ಜಿ ವಿಚಾರಣೆ ಹೈಕೋರ್ಟ್ ನಲ್ಲಿ ನಡೆಯುತ್ತಿದೆ.

ಹೈಕೋರ್ಟ್ ನ್ಯಾ. ನಾಗಪ್ರಸನ್ನ ಅವರ ಏಕಸದಸ್ಯಪೀಠದಲ್ಲಿ ಅರ್ಜಿ ವಿಚಾರಣೆ ನಡೆಯುತ್ತಿದ್ದು ಸಿಎಂ ಸಿದ್ದರಾಮಯ್ಯ ಪರ ವಾದ ಮಂಡಿಸಿದ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ, ರಾಜ್ಯಪಾಲರ ಆದೇಶದಲ್ಲಿ ಶೂನ್ಯ ಕಾರಣಗಳಿವೆ . ರಾಜ್ಯಪಾಲರು ಏಕಪಕ್ಷೀಯವಾಗಿ ನಿರ್ಧಾರ ತೆಗದುಕೊಂಡಿದ್ದಾರೆ   ಕಾರಣ ನೀಡದೇ ಅನುಮತಿ  ಕೊಟ್ಟಿದ್ದಾರೆ. ಸಿಎಂ ಈ ಹಗರಣದಲ್ಲಿ ಹೇಗೆ ಭಾಗಿಯಾಗಿದ್ದಾರೆ ಎಂದು ತಿಳಿಸಿಲ್ಲ ಎಂದು ವಾದಿಸಿದರು.

ರಾಜ್ಯಪಾಲರ ಆದೇಶದಲ್ಲಿ  ಅವರು ಪರಿಶೀಲಿಸಿದ ಫೈಲ್ ಗಳ ಬಗ್ಗೆ ಉಲ್ಲೇಖವಿಲ್ಲ. ಟಿಪ್ಪಣಿ ಆಧಾರದ ಮೇಳೆ ಕ್ರಮ ಕೈಗೊಂಡಿದ್ದೇನೆಂಬುದು ಇಲ್ಲ.  ಕಂಪಾರಿಟೀವ್ ಚಾರ್ಟ್ ಬಗ್ಗೆಯೂ ರಾಜ್ಯಪಾಲರ ಆದೇಶದಲ್ಲಿ ಉಲ್ಲೇಖವಿಲ್ಲ ಮುಡಾ ಕೇಸ್ ನಲ್ಲಿ ಸಿದ್ಧರಾಮಯ್ಯ ಪಾತ್ರವೇನೆಂಬುದನ್ನು ರಾಜ್ಯಪಾಲರು  ಆದೇಶದಲ್ಲಿ ಉಲ್ಲೇಖಿಸಿಲ್ಲ ಎಂದು ಅಭಿಷೇಕ್ ಮನು ಸಿಂಘ್ವಿ ವಾದ ಮಂಡಿಸಿದರು.

Key words: Governor, CM, role, Muda case, high court