ರಾಜ್ಯಪಾಲರೇ ಷಡ್ಯಂತ್ರದಲ್ಲಿ ಭಾಗಿಯಾದ್ರೆ ಸುಮ್ಮನಿರಬೇಕಾ? ಸಚಿವ ದಿನೇಶ್ ಗುಂಡೂರಾವ್ ಕಿಡಿ

ಕೋಲಾರ,ಆಗಸ್ಟ್,21,2024 (www.justkannada.in): ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವ ರಾಜ್ಯಪಾಲರ ನಡೆ ಬಗ್ಗೆ ನಮಗೆ ಅಸಮಾಧಾನವಿದೆ. ರಾಜ್ಯಪಾಲರೇ ಷಡ್ಯಂತ್ರದಲ್ಲಿ ಭಾಗಿಯಾದ್ರೆ ಸುಮ್ಮನಿರಬೇಕಾ? ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಕಿಡಿಕಾರಿದ್ದಾರೆ.

ಈ ಕುರಿತು ಮಾತನಾಡಿದ ಸಚಿವ ದಿನೇಶ್ ಗುಂಡೂರಾವ್,  ರಾಜ್ಯಪಾಲರ ನಡವಳಿಕೆ ಅತ್ಯಂತ ಖಂಡನೀಯ ರಾಜ್ಯಪಾಲರು ಸರ್ಕಾರವನ್ನ ಅಸ್ಥಿರಗೊಳಿಸುವ ಕೆಲಸ ಮಾಡುತ್ತಿದ್ದಾರೆ. ಸಿದ್ಧರಾಮಯ್ಯ ಜನನಾಯಕ ಯಾವುದೇ ತಪ್ಪು ಮಾಡದ ವ್ಯಕ್ತಿ. ಆದರೆ ಸರ್ಕಾರದ ವ್ಯವಸ್ಥೆ ಹಾಳು ಮಾಡಲು ಕೈ ಹಾಕಿದ್ರೆ ಸುಮ್ಮನಿರಬೇಕಾ. ರಾಜ್ಯಪಾಲರ ನಡೆ ಆಡಳಿತ ಮೇಲೆ ಪರಿಣಾಮ ಬೀರಿದೆ. ರಾಜ್ಯಪಾಲರೇ ಷಡ್ಯಂತ್ರದಲ್ಲಿ ಭಾಗಿಯಾದ್ರೆ ಸುಮ್ಮನಿರಬೇಕಾ..?  ನಾವು ಮತ್ತಷ್ಟು ಸ್ಟ್ರಾಂಗ್ ಆಗಿದ್ದೇವೆ ಎಂದರು.

ಸಿಎಂ ಬದಲಾವಣೆ ಆಗುವ ಪ್ರಶ್ನೆಯೇ ಇಲ್ಲ.  ಡಿಕೆ ಶಿವಕುಮಾರ್ ಸೇರಿದಂತೆ ಇಡೀ ಕಾಂಗ್ರೆಸ್ ಸರ್ಕಾರ ಹೇಳಿದೆ ಈ ಪ್ರಕರಣದಿಂದ ಸಿದ್ಧರಾಮಯ್ಯ ಜನಪ್ರಿಯತೆ ಹೆಚ್ಚಾಗಿದೆ. ರಾಜ್ಯದಲ್ಲಿ ಅಭಿವೃದ್ಧಿ ಆಗಬಾರದು. ಸರ್ಕಾರಕ್ಕೆ ಕೆಟ್ಟ ಹೆಸರು ಬರಬೇಕು  ಜನರಿಗೆ ತೊಂದರೆ ಆಗಬೇಕು ಎಂಬುದು ಬಿಜೆಪಿ ಅಭಿಪ್ರಾಯ ಎಂದು ದಿನೇಶ್ ಗುಂಡೂರಾವ್ ವಾಗ್ದಾಳಿ ನಡೆಸಿದರು.

Key words: governor, Prosecution, Minister, Dinesh Gundurao