ಬೆಂಗಳೂರು,ಜು,24,2020(www.justkannada.in): ರಾಜ್ಯದಲ್ಲಿ ಕೊರೋನಾ ಅಟ್ಟಹಾಸ ಮುಂದುವರೆದಿದ್ದು, ಈ ನಡುವೆ ಕೋವಿಡ್ ಟೆಸ್ಟ್ ಗಳ ಸಂಖ್ಯೆಯನ್ನ ಸರ್ಕಾರ ಹೆಚ್ಚಿಸಿದೆ. ಈ ನಡುವೆ ಖಾಸಗಿ ಲ್ಯಾಬ್‌ಗಳಲ್ಲಿ ಕೋವಿಡ್ ಟೆಸ್ಟ್ ಗೆ ದರ ನಿಗದಿಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಈ ಕುರಿತು ಆರೋಗ್ಯ ಇಲಾಖೆ ಅಧೀನ ಕಾರ್ಯದರ್ಶಿ ಜಾವಿದ್ ಅಕ್ತರ್ ಆದೇಶ ಹೊರಡಿಸಿದ್ದಾರೆ. ಸರ್ಕಾರ ಕಳುಹಿಸಿದ ಮಾದರಿ ಪರೀಕ್ಷೆಗೆ 2000 ರೂ.ಖಾಸಗಿಯಾಗಿ ಟೆಸ್ಟ್ ಮಾಡಿಸಿಕೊಳ್ಳುವವರಿಗೆ 3000 ರೂ. ರ್ಯಾಪಿಡ್ ಆಂಟಿಜಿನ್ ಟೆಸ್ಟ್‌ಗೆ 700. ರೂ ನಿಗದಿಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಈ ಮೂರು ಟೆಸ್ಟ್ ಗಳಿಗೆ ಪಿಪಿಇ ಕಿಟ್, ಸ್ಕ್ರೀನಿಂಗ್ ಟೆಸ್ ಒಳಗೊಂಡಂತೆ ದರ ನಿಗದಿ ಮಾಡಲಾಗಿದೆ. ಐಸಿಎಂಆರ್ ಅನುಮೋದಿತ ಲ್ಯಾಬ್‌ಗಳಲ್ಲಿ ಮಾತ್ರ ಟೆಸ್ಟ್ ಗೆ ಅವಕಾಶ ನೀಡಲಾಗಿದೆ.
Key words: Govt –order- covid test – private- labs