ಬೆಂಗಳೂರು,ಆಗಸ್ಟ್ ,2,2023(www.justkannada.in): ಕಾಂಗ್ರೆಸ್ ಸರ್ಕಾರದಲ್ಲಿ ಸರ್ಕಾರಿ ಅಧಿಕಾರಿಗಳ ವರ್ಗಾವಣೆ ಜೋರಾಗಿದ್ದು, ನಿನ್ನೆ ವರ್ಗಾವಣೆಗೊಂಡಿದ್ದ 211 ಪೊಲೀಸ್ ಇನ್ಸ್ಪೆಕ್ಟರ್ ಗಳ ಪೈಕಿ 11 ಇನ್ಸ್ ಪೆಕ್ಟರ್ ಗಳ ವರ್ಗಾವಣೆಗೆ ಇಂದು ಸರ್ಕಾರ ತಡೆ ನೀಡಿದೆ ಎಂಬ ಮಾಹಿತಿ ಲಭ್ಯವಾಗಿದೆ.
ನಿನ್ನೆ ಬರೋಬ್ಬರಿ 211 ಇನ್ಸ್ಪೆಕ್ಟರ್ ಗಳನ್ನ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶಿಸಿತ್ತು. ಈ ಪೈಕಿ 11 ಪೊಲೀಸ್ ಇನ್ಸ್ ಪೆಕ್ಟರ್ ಗಳ ವರ್ಗಾವಣೆಯನ್ನು ಸರ್ಕಾರ ಏಕಾಏಕಿ ಇಂದು ತಡೆ ಹಿಡಿದಿದೆ. ಬಹುತೇಕ ಜಿಲ್ಲೆ, ಸಿಸಿಬಿ , ಗುಪ್ತ ವಾರ್ತೆಯ ಪೊಲೀಸ್ ಇನ್ ಸ್ಪೆಕ್ಟರ್ ಗಳ ವರ್ಗಾವಣೆ ಆಗಿತ್ತು. ಇದರಲ್ಲಿ ಇದೀಗ ಕೆಲವರ ವರ್ಗಾವಣೆಯನ್ನು ದಿಢೀರ್ ತಡೆ ಹಿಡಿದಿದೆ.
ಇನ್ನು ಜುಲೈ 31 ರಂಧು 45 ಎಸಿಪಿಗಳನ್ನ ರಾಜ್ಯ ಸರ್ಕಾರ ವರ್ಗಾವಣೆ ಮಾಡಿದ್ದು ಇದೀಗ ಈ ಪೈಕಿ 7 ಎಸಿಪಿಗಳ ವರ್ಗಾವಣೆಗೆ ತಡೆ ನೀಡಿದೆ ಎನ್ನಲಾಗಿದೆ.
Key words: Govt -stalled -transfer – 11 Police Inspectors – 7 ACPs