ಮೈಸೂರು,ಡಿಸೆಂಬರ್, 22,2020(www.justkannada.in): ಇಂದು ಗ್ರಾಮಪಂಚಾಯತ್ ಚುನಾವಣೆಯ ಮೊದಲ ಹಂತದ ಮತದಾನ ನಡೆಯುತ್ತಿದ್ದು, ಮೈಸೂರು ಜಿಲ್ಲೆಯ ಗಿರಿಜನ ಹಾಡಿಗಳಲ್ಲೂ ಗ್ರಾ.ಪಂ. ಚುನಾವಣೆಯಲ್ಲಿ ಮತದಾರರ ಉತ್ಸಾಹ ಕಂಡು ಬಂದಿದೆ. ಗಿರಿಜನ ಮತದಾರರು ಮತಗಟ್ಟೆಗಳತ್ತ ಧಾವಿಸಿ ಉತ್ಸಹದಿಂದ ಮತ ಚಲಾಯಿಸುತ್ತಿದ್ದಾರೆ.
ವೀರನಹೊಸಳ್ಳಿ, ಗುರುಪುರ, ನಾಗಪುರ ಹಾಡಿ ನಿವಾಸಿಗಳು ಮತದಾನ ಮಾಡುತ್ತಿದ್ದು ಮಧ್ಯಾಹ್ನದ ವೇಳೆಗೆ ವೋಟಿಂಗ್ ಬಿರುಸುಗೊಂಡಿದೆ. ಮತಗಟ್ಟೆಗಳಲ್ಲಿ ಗಿರಿಜನ ಮತದಾರರಿಗೆ ಮತ ಹಾಕಲು ಮತಗಟ್ಟೆ ಅಧಿಕಾರಿಗಳು ಮಾರ್ಗದರ್ಶನ ಮಾಡುತ್ತಿದ್ದಾರೆ.
ಇನ್ನು ನಾಗಾಪುರದ ಹಿರಿಯ ಮಹಿಳೆ 95 ವರ್ಷದ ಪುಟ್ಟಮ್ಮನಿಂದ ಮತದಾನ ಮಾಡಿದ್ದು, ಮಧ್ಯಾಹ್ನದ ವೇಳೆಗೆ ಮತದಾನ ಮತ್ತಷ್ಟು ಬಿರುಸುಗೊಂಡಿದೆ. ಹುಣಸೂರು ತಾಲೂಕಿನ ಹಾಡಿಗಳ ಮಕ್ಕಳಿಗೆ ಕೋವಿಡ್ ಜಾಗೃತಿ ಮೂಡಿಸಲಾಗುತ್ತಿದೆ. ಹಕ್ಕು ಚಲಾಯಿಸಲು ಬರುವ ಪ್ರತಿಯೊಬ್ಬರಿಗೂ ಸ್ಯಾನಟೈಸರ್, ಥರ್ಮಲ್ ಸ್ಕ್ರೀನ್ ವ್ಯವಸ್ಥೆ ಮಾಡಲಾಗಿದೆ.
english summary….
GP Elections: Brisk voting in Mysuru District
Mysuru, Dec. 22, 2020 (www.justkannada.in): The first phase of Gram Panchayat elections in Mysuru District witnessed brisk voting. People were found exercising their franchise with enthusiasm.
The voting picked up momentum by the afternoon at Veeranahosahalli, Gurupura, and Nagapura haadi. A 95-year-old woman exercised her franchise at Nagapura. Efforts were being made to create awareness among the children about the Covid pandemic at villages in Hunsur Taluk. Sanitizer, thermal screening facilities were arranged at all the booths.
Keywords: Gram Panchayat elections/ Mysuru District/ brisk voting
Key words: GP election-Voter- turnout – Mysore district- Furious -voting.