ಬೆಂಗಳೂರು,ಆಗಸ್ಟ್,25,2021(www.justkannada.in): ಕೊರೋನಾ 3ನೇ ಅಲೆ ಭೀತಿ ನಡುವೆ ಈಗಾಗಲೇ 9,10, ಮತ್ತು ಪಿಯು ತರಗತಿಗಳು ಆರಂಭವಾಗಿವೆ. ಈ ಮಧ್ಯೆ ಹಂತಹಂತವಾಗಿ ಪ್ರೈಮರಿ ಶಾಲೆ ಆರಂಭಕ್ಕೆ ಸಲಹೆ ನೀಡಿದ್ದೇವೆ. ಅದನ್ನ ಸರ್ಕಾರ ಮಾಡುತ್ತಿದೆ ಎಂದು ಕೊರೊನಾ ಮೂರನೇ ಅಲೆಯ ಟಾಸ್ಕ್ ಪೋರ್ಸ್ ಸಮಿತಿಯ ಅಧ್ಯಕ್ಷ ಡಾ. ದೇವಿಪ್ರಸಾದ್ ಶೆಟ್ಟಿ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಇಂದು ಮಾತನಾಡಿದ ಡಾ. ದೇವಿಪ್ರಸಾದ್ ಶೆಟ್ಟಿ, ಕೊವಿಡ್ 3ನೇ ಅಲೆ ಯಾವಾಗ ಬರುತ್ತೆಂದು ಹೇಳಲಾಗಲ್ಲ. ಅಕ್ಟೋಬರ್ ನಲ್ಲಿ ಕೊರೊನಾ 3ನೇ ಅಲೆ ಬರುವ ಸಾಧ್ಯತೆ ಇದೆ. ಗುಂಪು ಸೇರಿ ಯಾವುದೇ ಕಾರ್ಯಕ್ರಮ ಮಾಡಿದ್ರೂ ಸಮಸ್ಯೆ ಆಗಲಿದೆ ಎಂದು ಹೇಳಿದರು.
ಗಣೇಶೋತ್ಸವಕ್ಕೆ ಸರ್ಕಾರ ಅನುಮತಿ ಕೊಡುವ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು ಇದು ಸರ್ಕಾರಕ್ಕೆ ಬಿಟ್ಟ ವಿಚಾರ ನಾನು ಏನೂ ಹೇಳಲಾಗಲ್ಲ. ದೇವರ ಬಳಿ ಮೂರನೇ ಅಲೆ ಬರಬಾರದು ಅಂತಾ ಪ್ರಾರ್ಥನೆ ಮಾಡ್ಬೇಕು. ಬರಲ್ಲ ಅಂತಾ ಹೇಳಿದ್ರೇ ಎಲ್ಲರೂ ನಿರ್ಲಕ್ಷ್ಯ ಮಾಡ್ತಾರೆ. ಯಾವಾಗ ಬರುತ್ತೆ ಅಂತಾ ಪ್ರಿಡಿಕ್ಷನ್ ಮಾಡೋಕೆ ಆಗಲ್ಲ ಎಂದು ಡಾ.ದೇವಿಪ್ರಸಾದ್ ಶೆಟ್ಟಿ ತಿಳಿಸಿದರು.
ಗ್ರಾಮೀಣ ಭಾಗದಲ್ಲಿ ಕೋವಿಡ್ ಲಸಿಕೆ ಕಡಿಮೆ ಸಾಧ್ಯತೆ ಹಿನ್ನೆಲೆ ಉಚಿತ ಲಸಿಕೆ ಸಂಚಾರಿ ವಾಹನ ಆರಂಭವಾಗಲಿದೆ. ಗ್ರಾಮೀಣ ಭಾಗಕ್ಕೆ ತೆರಳಿ ಲಸಿಕೆ ನೀಡಲಾಗುತ್ತದೆ. ದಿನಕ್ಕೆ 2 ಸಾವಿರ ಮಂದಿಗೆ ಲಸಿಕೆ ನೀಡುವ ಗುರಿ ಇದೆ ಎಂದು ಡಾ.ದೇವಿಪ್ರಸಾದ್ ಶೆಟ್ಟಿ ತಿಳಿಸಿದರು.
Key words: Gradually – advised – opening -primary school-Dr. Deviprasad Shetty.