ಮೈಸೂರು,ಡಿಸೆಂಬರ್,03,2020(www.justkannada.in) : ಯುಜಿಸಿ ಗೈಡ್ ಲೈನ್ ಪ್ರಕಾರ ಯುಜಿ, ಪಿಜಿ ಪರೀಕ್ಷೆ ಮುಗಿಸಿದ್ದೇವೆ. 1ನೇ ಮತ್ತು 3ನೇ ಸೆಮಿಸ್ಟರ್ ನಲ್ಲಿ ಪಾಸ್ ಆದರೆ, ಬಾಕಿ ವಿಷಯಗಳು ಪಾಸ್ ಎಂದು ಮೈಸೂರು ವಿವಿ ಪರೀಕ್ಷಾಂಗ ಕುಲಸಚಿವ ಡಾ.ಮಹದೇವನ್ ತಿಳಿಸಿದ್ದಾರೆ.
ಕಳೆದ ಸೆಮಿಸ್ಟರ್ ಗಳಲ್ಲಿ ವಿದ್ಯಾರ್ಥಿಗಳು ಪಡೆದ ಅಂಕದ ಆಧಾರದ ಮೇಲೆ ಪಾಸ್
ಪದವಿ, ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಮೈಸೂರು ವಿವಿ ಸಿಹಿ ಸುದ್ದಿ ನೀಡಿದೆ. 2 ಮತ್ತು 4ನೇ ಸೆಮಿಸ್ಟರ್ ಗೆ ಪರೀಕ್ಷೆ ಇಲ್ಲದೆ ಪಾಸ್ ಮಾಡಲು ಮೈಸೂರು ವಿವಿ ನಿರ್ಧರಿಸಿದ್ದು, ಬಾಕಿಯಿದ್ದ ವಿಷಯಗಳ ಪರೀಕ್ಷೆ ಬರೆಯದೇ ಮುಂದಿನ ಸೆಮಿಸ್ಟರ್ಗೆ ಜಿಗಿದು ವಿದ್ಯಾರ್ಥಿಗಳು ಅಂಕಪಟ್ಟಿ ಪಡೆದಿದ್ದಾರೆ. ಕೋವಿಡ್ ಹಿನ್ನಲೆ ಮೈಸೂರು ವಿವಿ ಈ ನಿರ್ಧಾರ ಕೈಗೊಂಡಿದೆ.ಈ ಮೂಲಕ ಕೋವಿಡ್ ಸಂದರ್ಭದಲ್ಲಿ ವಿದ್ಯಾರ್ಥಿಗಳ ಅನುಕೂಲಕ್ಕೆ ನಿಂತ ರಾಜ್ಯದ ಮೊದಲ ವಿವಿ ಮೈಸೂರು ವಿವಿಯಾಗಿದೆ. ಕಳೆದ ಸೆಮಿಸ್ಟರ್ ಗಳಲ್ಲಿ ವಿದ್ಯಾರ್ಥಿಗಳು ಪಡೆದ ಅಂಕದ ಆಧಾರದ ಮೇಲೆ ಪಾಸ್ ಮಾಡಲಾಗಿದೆ ಎಂದು ತಿಳಿಸಲಾಗಿದೆ.
ತಜ್ಞರ ಸಲಹೆ ಸೂಚನೆಗಳಂತೆ ನಿರ್ಧಾರ
ಸರ್ಕಾರದ ಅನುಮತಿಯಂತೆ ವಿವಿ ತಜ್ಞರ ಸಲಹೆ ಸೂಚನೆಗಳಂತೆ ಪ್ರಥಮ ಮತ್ತು ಮೂರನೇ ಸೆಮಿಸ್ಟರ್ ನಲ್ಲಿ ಗಳಿಸಿದ ಅಂಕದ ಆಧಾರದ ಮೇಲೆ 2 ಮತ್ತು 4ನೇ ಸೆಮಿಸ್ಟರ್ ಪಾಸ್ ಮಾಡಲಾಗಿದೆ. ಅಂಕಪಟ್ಟಿಯನ್ನು ನೀಡಲಾಗಿದೆ ಎಂದು ಮೈಸೂರು ವಿವಿ ಪರೀಕ್ಷಾಂಗ ಕುಲಸಚಿವ ಡಾ.ಮಹದೇವನ್ ಮಾಹಿತಿ ನೀಡಿದ್ದಾರೆ.
ಈ ಅಂಕಪಟ್ಟಿಯಲ್ಲಿ ಯಾವುದೇ ರೀತಿಯ ವ್ಯತ್ಯಾಸವಿಲ್ಲ. ಪರೀಕ್ಷೆ ಬರೆದು ಪಾಸ್ ಆದ ರೀತಿಯಲ್ಲೇ ಅಂಕಪಟ್ಟಿ ಇರಲಿದೆ. ಕಾರಣ ಸ್ಕಾಲರ್ಶಿಪ್ ಪಡೆಯಲು ನವೆಂಬರ್ 20 ಕೊನೆ ದಿನವಾಗಿತ್ತು. ಈ ಹಿನ್ನಲೆ ಮೈಸೂರು ವಿವಿ ವಿದ್ಯಾರ್ಥಿಗಳಿಗೆ ಅನುಕೂಲಕ್ಕಾಗಿ ದಿನಾಂಕ ಮುಗಿಯುವ ಅವಧಿಯೊಳಗೆ ಅಂಕಪಟ್ಟಿ ವಿತರಿಸಿದೆ. ಕೊರೊನಾದಿಂದ ಕೆಲ ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿರಲಿಲ್ಲ. ಅಂತವರಿಗೆ ಮತ್ತೊಂದು ಅವಕಾಶ ನೀಡಲಾಗಿದೆ ಎಂದರು.
ಪರೀಕ್ಷೆಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಈಗಾಗಲೇ 113 ಅರ್ಜಿಗಳು ಬಂದಿವೆ. ಈ ಟೈಮ್ ಟೇಬಲ್ ರೆಡಿಯಾಗಿದೆ. ಎಕ್ಸಾಮ್ ಮುಗಿದ ಮುರ್ನಾಲ್ಕು ದಿನಗಳಲ್ಲಿ ಮೌಲ್ಯಮಾಪನ ಮುಗಿಸಿ ರಿಸಲ್ಟ್ ನೀಡುವ ಮೂಲಕ ಸ್ನಾತಕೋತ್ತರ ಪದವಿಗೆ ಪ್ರವೇಶ ಪಡೆಯಲು ಅನುಕೂಲ ಮಾಡಿಕೊಡಲಾಗುತ್ತದೆ ಎಂದು ಮೈಸೂರು ವಿವಿ ಪರೀಕ್ಷಾಂಗ ಕುಲಸಚಿವ ಡಾ.ಮಹದೇವನ್ ತಿಳಿಸಿದ್ದಾರೆ.
English summary….
Good news for Mysore University Degree and PG students: Pass without exams
Mysuru, Dec. 3, 2020 (www.justkannada.in): “We have successfully conducted the UG, PG exams as per UGC guidelines. If the students have passed in1st and 3rd semesters, they will be promoted,” informed Dr. Mahadevan, Registrar, Mysore University.
The University authorities have decided to promote the students of the 2nd and 4th semesters without conducting the exams. Accordingly, the students can now go to the next semester without writing the exams of the remaining subjects. The University has taken this decision due to the COVID pandemic.
Keywords: Mysore University/ students pass without exams
key words : graduate-postgraduate-students-Sweet-news-Mysore Vivi-Pass- without-exam