ಮೈಸೂರು,ಡಿಸೆಂಬರ್,3,2020(www.justkannada.in): ರಾಜ್ಯದಲ್ಲಿ ಕೊರೊನಾ ನಡುವೆ ಗ್ರಾಮ ಪಂಚಾಯತಿ ಚುನಾವಣೆ ನಡೆಸಲಾಗುತ್ತಿದ್ದು, ಡಿಸೆಂಬರ್ 22 ಮತ್ತು 27 ರಂದು ಎರಡು ಹಂತದಲ್ಲಿ ಚುನಾವಣೆ ನಡೆಯಲಿದೆ. ಈ ಹಿನ್ನೆಲೆ ಅಭ್ಯರ್ಥಿಗಳು ಪ್ರಚಾರ ಸಂದರ್ಭದಲ್ಲೂ ಕೋವಿಡ್ ನಿಯಮ ಪಾಲಿಸುವುದು ಕಡ್ಡಾಯ ಎಂದು ಮೈಸೂರು ಜಿಲ್ಲಾ ಪಂಚಾಯತ್ ಸಿಇಓ ಡಾ.ಭಾರತಿ ಸೂಚಿಸಿದ್ದಾರೆ.
ಗ್ರಾಮ ಪಂಚಾಯತ್ ಚುನಾವಣೆ ಸಿದ್ಧತೆ ಕುರಿತು ಮಾಹಿತಿ ನೀಡಿದ ಮೈಸೂರು ಜಿಲ್ಲಾ ಪಂಚಾಯತ್ ಸಿಇಓ ಡಾ.ಭಾರತಿ, ಗ್ರಾಮ ಪಂಚಾಯತಿ ಚುನಾವಣೆ ದಿನಾಂಕ ನಿಗದಿಯಾಗಿದ್ದು, ಸ್ಟಾಂಡರ್ಡ್ ಆಪರೇಷನ್ ಪ್ರೊಸಿಜರ್ ನೀಡಲಾಗಿದೆ ಅದರಲ್ಲಿ ಸಿಇಓ ಮತ್ತು ಆರೋಗ್ಯ ಇಲಾಖೆಗೆ ನಿರ್ದಿಷ್ಟ ಸೂಚನೆ ನೀಡಿದ್ದಾರೆ. ಆ ಸೂಚನೆ ಪಾಲಿಸುವ ಮೂಲಕ ಚುನಾವಣೆ ನಡೆಸಲಿದ್ದೇವೆ. ಮತದಾನ ವೇಳೆ ಮತದಾರರು ಮಾಸ್ಕ್ ಧರಿಸುವುದು ಕಡ್ಡಾಯ, ಮತಕೇಂದ್ರಗಳಲ್ಲಿ ಥರ್ಮಲ್ ಸ್ಕ್ರೀನಿಂಗ್, ಸ್ಯಾನಿಟೈಸರ್ ಮಾಡಲಾಗುತ್ತದೆ ಎಂದು ತಿಳಿಸಿದರು.
ಮುಂಜಾಗ್ರತಾ ಕ್ರಮಗಳನ್ನ ಕೈಗೊಂಡು ಚುನಾವಣೆ ನಡೆಸಲು ಆಯಾ ಗ್ರಾಮ ಪಂಚಾಯತಿಯ ಪಿಡಿಓ, ಇಓ ಮತ್ತು ಇಂಜಿನಿಯರ್ಸ್ ನಿರ್ದೇಶನ ನೀಡಿಲಾಗಿದೆ. ಅದರ ಪ್ರಕಾರ ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಕೆಲಸ ಮಾಡುತ್ತೇವೆ. ಪ್ರತಿ ಗ್ರಾಮ ಪಂಚಾಯತಿ ರಿಟರ್ನಿಂಗ್ ಆಫೀಸರ್ ಇರ್ತಾರೆ. ಅವರು ಎಸ್ಓಪಿ ಪ್ರಕಾರ ನಾಮಪತ್ರ ಸಲ್ಲಿಸುವ ವೇಳೆ ಅಭ್ಯರ್ಥಿಗಳು ಮಾಸ್ಕ್ ಸ್ಯಾನಿಟೈಸರ್, ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಕಾರ್ಯ ನಿರ್ವಹಿಸಲಿದ್ದಾರೆ. ಮತದಾನ ಕೇಂದ್ರದಲ್ಲೂ ಸಹ ಕೊರೋನಾ ಮುಂಜಾಗ್ರತಾ ಕ್ರಮಗಳ ಪಾಲನೆ ಕಡ್ಡಾಯವಾಗಿರುತ್ತದೆ ಎಂದು ಸಿಇಓ ಭಾರತಿ ತಿಳಿಸಿದ್ದಾರೆ.
ಗ್ರಾಮ ಪಂಚಾಯತಿ ಚುನಾವಣೆ ಸ್ಥಳೀಯ ಮಟ್ಟದ ಚುನಾವಣೆಯಾಗಿರುವುದರಿಂದ ಹಲವು ಮಂದಿ ಸ್ಪರ್ಧಿಗಳಿರುತ್ತಾರೆ. ಹೀಗಾಗಿ ಜನರು ಆರೋಗ್ಯ ಇಲಾಖೆಯ ಮಾರ್ಗಸೂಚಿಯನ್ನ ಪಾಲಿಸುವ ಮೂಲಕ ಚುನಾವಣೆ ಯಶಸ್ವಿಗೊಳಿಸಿ, ಪ್ರಜಾಪ್ರಭುತ್ವದ ಬೇರನ್ನ ಗಟ್ಟಿಗೊಳಿಸಿ ಎಂದು ಸಿಇಓ ಡಾ.ಭಾರತಿ ಮನವಿ ಮಾಡಿದ್ದಾರೆ.
english summary….
GP elections: Candidates should mandatorily follow COVID precautions even during campaigning
Mysuru, Dec. 3, 2020 (www.justkannada.in): Gram Panchayath elections are being held in two phases in the State on December 22 and 27, even amidst the Corona pandemic. In this background, the Mysuru Zilla Panchayath CEO Dr. Bharathi has given strict instructions that all the candidates should mandatorily follow COVID guidelines issued by the government while campaigning.
Providing details of the preparations of GP elections to the press persons, she informed that the Standard Operation Procedures (SOP) are issued, and the Health Department has issued guidelines, and the ZP is committed to conducting the elections accordingly.
Keywords: GP elections/ ZP CEO Dr. Bharathi/ COVID guidelines
Key words: Gram Panchayth- election-Candidates – Covid- rule – campaign-mysore zp CEO- Bharathi