ಬೆಂಗಳೂರು, ನವೆಂಬರ್,21,2020(www.justkannada.in): ಗ್ರಾಮ ಪಂಚಾಯಿತಿ ಚುನಾವಣೆ ಹಿನ್ನೆಲೆ ಚುನಾವಣಾ ಆಯೋಗ ಚುನಾವಣಾ ಸಂಬಂಧಿತ ಪ್ರಕ್ರಿಯೆಗಳನ್ನು ಚುರುಕುಗೊಳಿಸಿದ್ದು ಇದೀಗ ಮತಗಟ್ಟೆ ಅಧಿಕಾರಿಗಳ ತರಬೇತಿ ಸಂಬಂಧ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದೆ.
ಮತಗಟ್ಟೆ ಅಧಿಕಾರಿಗಳ ತರಬೇತಿಗೆ ಕೆಲ ಅಂಶಗಳನ್ನು ಅಳವಡಿಸಿಕೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಚುನಾವಣಾ ಆಯೋಗ ಪತ್ರ ಬರೆದು ಸೂಚನೆ ನೀಡಿದೆ. ಮತಗಟ್ಟೆ ಸಿಬ್ಬಂದಿಗಳ ತಾಲೂಕು ಮಟ್ಟದ ರ್ಯಾಂಡಮೈಸೇಷನ್ ಪ್ರಕ್ರಿಯೆಗೆ ಎನ್.ಐ.ಸಿ ಸಂಸ್ಥೆಯ ತಂತ್ರಾಂಶ ಬಳಸಬೇಕು.
ಕೋವಿಡ್ ಹಿನ್ನೆಲೆಯಲ್ಲಿ ಚುನಾವಣಾ ಕಾರ್ಯಕ್ಕೆ ನಿಯೋಜಿತಗೊಂಡ ಮತಗಟ್ಟೆ ಅಧಿಕಾರಿಗಳನ್ನು ವಿವಿಧ ಗುಂಪುಗಳಾಗಿ ವಿಂಗಡನೆ ಮಾಡಿ ಒಂದೇ ತರಬೇತಿ ನೀಡುವಂತೆ ಕ್ರಮ ವಹಿಸಬೇಕು. ತರಬೇತಿ ಮಸ್ಟರಿಂಗ್ ಹಾಗೂ ಡಿ ಮಸ್ಟರಿಂಗ್ ಸಮಯದಲ್ಲಿ ಅಧಿಕಾರಿ ಹಾಗೂ ಸಿಬ್ಬಂದಿಗೆ ಊಟೋಪಚಾರ ವ್ಯವಸ್ಥೆ ಮಾಡಬೇಕು ಈ ಎಲ್ಲಾ ಅಂಶಗಳನ್ನು ಅಡವಳಿಸಿಕೊಳ್ಳುವಂತೆ ಚುನಾವಣಾ ಆಯೋಗ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದೆ.
English summary….
GP Elections: Election Commission writes letter to DC on booth officers training
Bengaluru, Nov. 21,2020 (www.justkannada.in): In the background of the forthcoming Gram Panchayat elections, the Election Commission has expedited the election related works. It has written a letter to the Deputy Commissioners of all districts regarding providing training to the voting booth officers.
It is said that in its letter the EC has mentioned to adopt a few points while providing training to the booth officers, including using of NIC software for Taluk-level randomisation process of voting booth staff. In the pretext of COVID pandemic, instructions also has been given to divide the booth officials in groups who have been assigned for election duty and take measures to provide uniform training to all.
Keywords: GP elections/EC instructions to Deputy Commissioners/
Key words: grama panchayath- election- Election Commission- DC- training -booth officers.