ಬೆಂಗಳೂರು,ನವೆಂಬರ್,27,2020(www.justkannada.in): ರಾಜ್ಯದಲ್ಲಿ ಗ್ರಾಮ ಪಂಚಾಯಿತಿ ಸಾರ್ವತ್ರಿಕ ಚುನಾವಣೆಗೆ ಸಿದ್ಧತೆ ನಡೆಸಲಾಗುತ್ತಿದ್ದು ಈ ಮಧ್ಯೆ ಕೋವಿಡ್ 19 ಸೋಂಕಿತರಿಗೆ ಅಂಚೆ ಮತದಾನದ ಅವಕಾಶ ಕೈತಪ್ಪಿದ್ದು ಖುದ್ದು ಹಾಜರಾಗಿಯೇ ಮತಚಲಾಯಿಸಬೇಕಿದೆ.
ಹೌದು ಗ್ರಾಮ ಪಂಚಾಯಿತಿ ಚುನಾವಣೆಗಳಲ್ಲಿ ಒಂದು ಮತವೂ ಪ್ರಾಮುಖ್ಯತೆ ಪಡೆಯುವ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಈ ಮಹತ್ವದ ನಿರ್ಧಾರ ಕೈಗೊಂಡಿದೆ. ಮತದಾನ ದಿನದಂದು ಸೋಂಕಿತರಿಗೆ ಅಂಚೆ ಮತದಾನದ ಬದಲು ಖುದ್ದು ಹಾಜರಿ ಮತದಾನಕ್ಕೆ ವ್ಯವಸ್ಥೆ ಕಲ್ಪಿಸುವಂತೆ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮುಖ್ಯ ಅಪರ ಕಾರ್ಯದರ್ಶಿಗೆ ಚುನಾವಣಾ ಆಯೋಗ ಪತ್ರದ ಮೂಲಕ ಸೂಚನೆ ನೀಡಿದೆ.
ಅಂಚೆಮತಗಳ ಬಳಕೆಯಿಂದ ಅಕ್ರಮ ನಡೆಯುವ ಸಾಧ್ಯತೆ ಹಾಗೂ ಆಸ್ಪದಗಳ ಕುರಿತು ಜಿಲ್ಲಾಧಿಕಾರಿಗಳ ಬಳಿ ಚುನಾವಣಾ ಆಯೋಗ ಈಗಾಗಲೇ ಚರ್ಚೆ ನಡೆಸಿದ್ದು, ಅಂಚೆಮತಗಳ ಸಾಧಕ ಬಾಧಕ ಚರ್ಚೆ ನಡೆಸಿದ ಬಳಿಕ ಚುನಾವಣಾ ಆಯೋಗ ಈ ನಿರ್ಧಾರ ಕೈಗೊಂಡಿದೆ.
ಮತದಾನ ಮುಗಿಯುವ ಒಂದು ಗಂಟೆಗೂ ಮೊದಲು ಸೋಂಕಿತರಿಗೆ ಮತದಾನಕ್ಕೆ ಅವಕಾಶ ನೀಡುವುದು. ಆಸ್ಪತ್ರೆ ಹಾಗೂ ಹೋಮ್ ಐಸೋಲೇಷನ್ ನಲ್ಲಿರುವ ಸೋಂಕಿತರನ್ನು ಅಗತ್ಯ ಕೋವಿಡ್ 19 ಮುನ್ನೆಚ್ಚರಿಕೆ ಕೈಗೊಂಡು ಮತದಾನಕ್ಕೆ ವ್ಯವಸ್ಥೆ ಮಾಡಲು ತೀರ್ಮಾನಿಸಲಾಗಿದೆ.
English summary….
GP Elections: COVID-19 patients lose postal voting opportunity
Bengaluru, Nov. 27, 2020 (www.justkannada.in): While preparations for the forthcoming Gram Panchayat elections are on in the state, people infected with COVID-19 virus have lost their chance to exercise their franchise by post, and instead, they have to come to the booth to vote.
The Election Commission has written a letter to the Health and Family Welfare Department, Government of Karnataka to make arrangements to allow the COVID-19 patients to go to the booth and vote.
It is learned that the EC has arrived at this decision after discussing it with the Deputy Commissioners on the possibilities of illegal voting if postal voting is allowed.
Accordingly, COVID patients will be allowed to exercise their franchise at the booth one hour before closing hours. Instructions have been given to bring the patients by taking all the precautionary measures.
keywords: COVID-19/GP elections/ no postal voting
Key words: grama panchayath-election-no – Postal Vote -covid-19- Infected