ರಾಮನಗರದ, ಡಿಸೆಂಬರ್ 29, 2019 (www.justkannada.in): ತಲೆಕೂದಲು ಕತ್ತರಿಸಿ ಕ್ಷೌರ ಮಾಡಿಸಿ ಶುಭ್ರವಾಗಿಸುವ ಮೂಲಕ ರಾಮನಗರ ಜಿಲ್ಲಾ ಕೇಂದ್ರದ ಪಕ್ಕದಲ್ಲಿರುವ ಇರುಳಿಗರ ಕಾಲೊನಿಯಲ್ಲಿ “ಗ್ರಾಮ ಸೇವೆ” ಕಾರ್ಯಕ್ರಮಕ್ಕೆ ಇಂದು ಚಾಲನೆ ದೊರೆಯಿತು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಮ್ಮಿಕೊಂಡಿದ್ದ ವಿನೂತನ ಕಾರ್ಯಕ್ರಮ ‘ಗ್ರಾಮ ಸೇವೆ’ಗೆ ರಾಮದೇವರ ಬೆಟ್ಟದ ಇರುಳಿಗರ ಕಾಲೊನಿನಲ್ಲಿ ಹಲವು ತಿಂಗಳಿಂದ ತಲೆಕೂದಲು ಬೆಳೆಸೆಕೊಂಡು ಶುಭ್ರತೆಯನ್ನು ಕಾಪಾಡದ ಹತ್ತಾರು ಮಕ್ಕಳು ಹಾಗೂ ಕಾಲೊನಿಯ ವಾಸಿಗಳಿಗೆ ಕ್ಷೌರ ಮಾಡಿಸಿ ಸ್ನಾನಮಾಡಿ ಶುಭ್ರವಾಗಿರುವಂತೆ ಜಾಗೃತಿ ಮೂಡಿಸಲಾಯಿತು. ಅರೋಗ್ಯ ಇಲಾಖೆ ಸಹಕಾರದೊಂದಿಗೆ ಇದೇ ಸಂದರ್ಭದಲ್ಲಿ ಆಯೋಜಿಸಿದ್ದ ಆರೋಗ್ಯ ಶಿಬಿರದಲ್ಲಿ ಕಾಲೊನಿಯ ಎಲ್ಲ ವಾಸಿಗಳ ತಪಾಸಣೆ ಮಾಡಿ ಚಿಕಿತ್ಸೆ ಸಹ ನೀಡಲಾಯಿತು.
ರಾತ್ರಿಯಿಡೀ ಗ್ರಾಮದಲ್ಲೇ ಉಳಿದ ವಾರ್ತಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಎಸ್. ಶಂಕರಪ್ಪ ನೇತೃತ್ವದ ತಂಡ ಸ್ಥಳೀಯರೊಂದಿಗೆ ಬೆರೆತು ಅವರಲ್ಲಿ ಮಾಹಿತಿ ಹಂಚಿಕೊಳ್ಳುವ ಜತೆಗೆ ಜಾಗೃತಿ ಮೂಡಿಸಿತು. ಇರುಳಿಗರ ಕಾಲೊನಿಯಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿತ್ತು. ಮನೆ ಬಾಗಿಲಿಗೆ ಬಂದ ಅಧಿಕಾರಿಗಳ ತಂಡವನ್ನು ಅವರು ಆತ್ಮೀಯವಾಗಿ ಬರ ಮಾಡಿಕೊಂಡರು. ಅವರಿಂದ ಸರ್ಕಾರದಿಂದ ತಮಗಾಗಿಯೇ ಇರುವ ಸೌಲಭ್ಯಗಳ ಮಾಹಿತಿ ಪಡೆದರು.
ಶ್ರೀನಿವಾಸ್ ಹಾಗೂ ಮುತ್ತು ತಂಡದವರಿಂದ ಬೀದಿ ನಾಟಕ ಹಾಗೂ ಗಾಯನ ಕಾರ್ಯಕ್ರಮ ಆಯೋಜಿಸಿ ಸರ್ಕಾರದ ಕಾರ್ಯಕ್ರಮಗಳ ಅರಿವು ಹಾಗೂ ಜಾಗೃತಿ ಮೂಡಿಸಲಾಯಿತು. ಇದಕ್ಕೂ ಮುನ್ನ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ವಾರ್ತಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಎಸ್.ಶಂಕರಪ್ಪ ಮಾತನಾಡಿ ‘ಜಿಲ್ಲೆಯಲ್ಲಿನ ಇರುಳಿಗರ ಕಾಲೊನಿಗಳ ಮೂಲಸೌಕರ್ಯ ಒದಗಿಸಲು ಸಂಬಂಧಿಸಿದ ಇಲಾಖೆಗಳಿಗೆ ವಸ್ತುಸ್ಥಿತಿಯ ವರದಿ ನೀಡಲಾಗುವುದು ಎಂದು ಹೇಳಿದರು.
ಪರಿಶಿಷ್ಟ ಜಾತಿ ಪಂಗಡಗಳ ಕಾಯಿದೆಯಡಿ ಹಲವು ಸವಲತ್ತುಗಳಿದ್ದು ಅವುಗಳನ್ನು ಬಳಕೆ ಮಾಡಿಕೊಳ್ಳಬೇಕು. ಸ್ವಯಂ ಉದ್ಯೋಗ ಕೈಗೊಳ್ಳಲು ಸರಕಾರದಿಂದ ವಿವಿದ ಸಲವತ್ತುಗಳನ್ನು ನೀಡಲಾಗುತ್ತಿದ್ದು, ಅವುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಇತ್ತೀಚಿಗೆ ಇರುಳಿಗರಲ್ಲಿ ಬಾಲ್ಯ ವಿವಾಹ ಮಾಡುವ ಪ್ರಕರಣಗಳು ಹೆಚ್ಚುತ್ತಿದೆ. 12 ಹಾಸುಪಾಸಿನ ಮಕ್ಕಳಿಗೆ ಮದುವೆ ಮಾಡುವುದರಿಂದ ಹುಟ್ಟುವ ಮಕ್ಕಳು, ಅಂಗವಿಕಲತೆಗೆ ಒಳಗಾಗುತ್ತಾರೆ. ಇಂತಹ ಪ್ರಕರಣಗಳು ಮತ್ತೆ ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕು ಎಂದು ಹೇಳಿದರು.
ಮುಖಂಡ ಡಾ. ಕೃಷ್ಣಮೂರ್ತಿ ಮಾತನಾಡಿ, ಇರುಳಿಗ ಜನಾಂಗದವರನ್ನು ಇತರೆ ಸಮುದಾಯಗಳಿಗೆ ಹೋಲಿಕೆ ಮಾಡಿದರೇ, 50 ವರ್ಷದ ಹಿಂದಿನ ಜೀವನ ನಡೆಸುತ್ತಿದ್ದಾರೆ. ಸರಕಾರದ ಸವಲತ್ತುಗಳ ಕುರಿತು ಅಧಿಕಾರಿಗಳು ಮಾಹಿತಿ ನೀಡಬೇಕು ಎಂದರು.
ರಾಜ್ಯದಲ್ಲೇ ಅತೀ ಹೆಚ್ಚು 16ಸಾವಿರ ಮಂದಿ ಇರುಳಿಗ ಸಮುದಾಯದವರು ಜಿಲ್ಲೆಯಲ್ಲಿ ವಾಸಿಸುತ್ತಿದ್ದಾರೆ. ಜಿಲ್ಲೆಯ ಮೂಲ ನಿವಾಸಿಗಳಾದ ಇವರು, ತುಂಡು ಭೂಮಿ ಇಲ್ಲದೇ ಜೀವನ ಸಾಗಿಸುತ್ತಿದ್ದಾರೆ ಎಂದು ವಿಷಾದವ್ಯಕ್ತಪಡಿಸಿದರು.
ಅರಣ್ಯ ಹಕ್ಕು ಕಾಯ್ದೆ ಸೇರಿದಂತೆ ಸರಕಾರದ ಹಲವು ಯೋಜನೆಗಳ ಕುರಿತು ಇವರಿಗೆ ಮಾಹಿತಿಯೇ ಇಲ್ಲ. ಎಂದೂ ಮದ್ಯಪಾನ ಮಾಡದ ಇವರು, ಇತ್ತೀಚಿಗೆ ಕುಡಿತದ ಚಟಕ್ಕೆ ದಾಸರಾಗುತ್ತಿದ್ದಾರೆ. ಅಂಗವೈಕಲ್ಯದಂತಹ ಕಾಯಿಲೆಗೆ ತುತ್ತಾಗುತ್ತಿದ್ದಾರೆ ಎಂದು ವಿಷಾದ‘ ವ್ಯಕ್ತಪಡಿಸಿದರು.
ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಕಾರಿ ಸುರೇಂದ್ರ ಮಾತನಾಡಿ, ಸಮುದಾಯದಲ್ಲಿ ಬಾಲ್ಯವಿವಾಹದಂತಹ ಪ್ರಕರಣಗಳು ಹೆಚ್ಚುತ್ತಿದೆ. ಬಾಲ್ಯ ವಿವಾಹದಿಂದಾಗುವ ಅಪಾಯಗಳ ಕುರಿತು ಇಲಾಖೆ ವತಿಯಿಂದ ಅರಿವು ಮೂಡಿಸಲಾಗುತ್ತಿದೆ. 2019-20ನೇ ಸಾಲಿನಲ್ಲಿ ಸಮುದಾಯದಲ್ಲಿ ಹಲವು ಬಾಲ್ಯ ವಿವಾಹ ಪ್ರಕರಣಗಳು ಬಯಲಿಗೆ ಬಂದಿವೆ ಎಂದು ತಿಳಿಸಿದರು.
ಮಕ್ಕಳ ಪಾಲನೆ ಪೋಷಣೆಗೆ ಸಂಬಂಸಿದಂತೆ ಇಲಾಖೆ ವತಿಯಿಂದ ಬಾಲ ಮಂದಿರ ಕಾರ್ಯ ನಿರ್ವಹಿಸುತ್ತಿದೆ. ದತ್ತು ಕೇಂದ್ರಗಳಿದ್ದುಘಿ, ಪೋಷಣೆಗಳ ಕುರಿತು ಮಾಹಿತಿ ಪಡೆದುಕೊಳ್ಳಬಹುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಇರುಳಿಗ ಸಮುದಾಯದ ವಿದ್ಯಾರ್ಥಿಗಳಿಗೆ ಉಚಿತವಾಗಿ ಬ್ಯಾಗ್ ವಿತರಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಚನ್ನಪಟ್ಟಣ ಶಿಶು ಸಂರಕ್ಷಣಾಕಾರಿ ಕಾಂತರಾಜು, ಅಂಗನವಾಡಿ ಸೂಪರ್ವೈಸರ್ ಶಾಕುಂತಲ, ಶಿವಮ್ಮಘಿ, ಮಕ್ಕಳ ಸಹಾಯವಾಣಿ ಘಟಕದ ರಾಮಚಂದ್ರ, ಹರೀಸಂದ್ರ ಗ್ರಾಪಂ ಪಿಡಿಒ ಶ್ರೀನಿವಾಸ್, ಸದಸ್ಯರಾದ ಜೋಗಯ್ಯ ಸೇರಿದಂತೆ ಹಲವರು ಹಾಜರಿದ್ದರು.