ಗುಂಡ್ಲುಪೇಟೆ : ಆ. 19 ರಂದು ಅದ್ದೂರಿ ಅಂಬೇಡ್ಕರ್‌ ಜಯಂತೋತ್ಸವಕ್ಕೆ ಸಿದ್ಧತೆ.

Gundlupet: Preparations are underway for a grand Ambedkar Jayanti celebrations on August 19.

 

ಮೈಸೂರು, ಆ.17,2024.: (www.justkannada.in news) ಭಾರತರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರ ೧೩೩ನೇ ಜಯಂತೋತ್ಸವ ಅಂಗವಾಗಿ ಆ.೧೯ರಂದು ಗುಂಡ್ಲುಪೇಟೆ ಪಟ್ಟಣದಲ್ಲಿ ಅದ್ಧೂರಿ ಮೆರವಣಿಗೆ ಆಯೋಜನೆ.

ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರ ಆಪ್ತ ಸಹಾಯಕ, ಯುವ ಮುಖಂಡ ಗೋಪಾಲ್ ಹೊರೆಯಾಲ ನೇತೃತ್ವದಲ್ಲಿ ಕಾರ್ಯಕ್ರಮ ಆಯೋಜನೆ. ಪಟ್ಟಣದಲ್ಲಿ ಅಲಂಕೃತ ಬೆಳ್ಳಿ ಪಲ್ಲಕ್ಕಿಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರದ ಮೆರವಣಿಗೆ ಜತೆಗೆ, ಡೊಳ್ಳುಕುಣಿತ,ನಗಾರಿ, ಕಂಸಾಳೆ, ಪಟಕುಣಿತ, ಪೂಜಾ ಕುಣಿತ, ಕೋಲಾಟ,ತಮಟೆ,ಬ್ಯಾಂಡ್‌ಸೆಟ್ ಸೇರಿದಂತೆ ೨೦ಕ್ಕೂ ಹೆಚ್ಚು ಜಾನಪದ ಕಲಾತಂಡಗಳ ಕಲಾವಿದರು ನೃತ್ಯ ಪ್ರದರ್ಶನವಿರಲಿದೆ.

ಡಾ.ಬಿ.ಆರ್.ಅಂಬೇಡ್ಕರ್ ಅವರ ಸಾಧನೆಯುಳ್ಳ ಸ್ತಬ್ಧಚಿತ್ರಗಳು ಪಾಲ್ಗೊಳ್ಳಲಿವೆ. ಈಗಾಗಲೇ ಕಾರ್ಯಕ್ರಮಕ್ಕೆ ತಾಲ್ಲೂಕಿನ ಜನರನ್ನು ಹೆಚ್ಚಿನ ಮಟ್ಟದಲ್ಲಿ ಸೇರಿಸಲು ಹಳ್ಳಿಗಳಲ್ಲಿ ಪ್ರಚಾರ ಮಾಡಲಾಗುತ್ತಿದೆ.  ಜಯಂತೋತ್ಸವದ ಪೋಸ್ಟರ್‌ಗಳನ್ನು ಬಿಡುಗಡೆ ಮಾಡಿ ಆಹ್ವಾನಿಸಲಾಗುತ್ತದೆ.

ಕಾರ್ಯಕ್ರಮದ ಪ್ರಯುಕ್ತ ಪಟ್ಟಣದಲ್ಲಿ ಜಯಂತಿ ಸಮಾರಂಭದ ಜತೆಗೆ ಮೆರವಣಿಗೆಯಲ್ಲಿ ಕನಿಷ್ಠ ಹತ್ತು ಸಾವಿರ ಜನರು ಭಾಗವಹಿಸಲಿದ್ದಾರೆ ಎಂದು ಕಾರ್ಯಕ್ರಮದ ಉಸ್ತುವಾರಿ ಗೋಪಾಲ್ ಹೊರೆಯಾಲ ತಿಳಿಸಿದ್ದಾರೆ.

ಕಾರ್ಯಕ್ರಮಕ್ಕೆ ಸಂಸದ ಸುನಿಲ್ ಬೋಸ್, ಶಾಸಕ ಎಚ್.ಎಂ.ಗಣೇಶ್ ಪ್ರಸಾದ್,ಮಾಜಿ ಶಾಸಕ ಸಿ.ಎಸ್.ನಿರಂಜನಕುಮಾರ್, ಮಾಜಿ ಸಂಸದ ಎ.ಸಿದ್ದರಾಜು  ಭಾಗವಹಿಸಲಿದ್ದು, ಸಾನ್ನಿಧ್ಯವನ್ನು ಬೋದಿದತ್ತ ಮಹಾಥೇರಾ ವಹಿಸಲಿದ್ದಾರೆ.

key words: Gundlupet, Preparations, are underway for a , grand, Ambedkar Jayanti, celebrations, on August 19.