ಮೈಸೂರು,ಜೂನ್,11,2024 (www.justkannada.in): ನಗರದ ಬೆಳವಾಡಿ ಗ್ರಾಮದ, ಸಿಲಿಕಾನ್ ವ್ಯಾಲಿ ಬಡಾವಣೆಯಲ್ಲಿರುವ ಸೈನಿಕ ಅಕಾಡೆಮಿ ಮೈಸೂರು ಸಂಸ್ಥೆಯಲ್ಲಿ ತರಬೇತಿ ಪಡೆದು ಭಾರತೀಯ ಸೇನೆಗೆ ಆಯ್ಕೆಯಾಗಿ ತರಬೇತಿ ಮುಗಿಸಿ ಇದೀಗ ರಜೆಗೆ ಸೇನಾ ಸಮವಸ್ತ್ರದಲ್ಲೇ ಬಂದ ಯುವ ಸೈನಿಕರಿಗೆ ಅದ್ದೂರಿಯಾಗಿ ಸ್ವಾಗತ ಕೋರಲಾಯಿತು.
ತರಬೇತಿ ಕೇಂದ್ರ ಮಾಜಿ ಕಮಾಂಡೋ ಶ್ರೀಧರ್ ಸಿ ಎಂ ರವರ ಮಾರ್ಗದರ್ಶನದಲ್ಲಿಸೈನಿಕ ಅಕಾಡೆಮಿ ಮೈಸೂರು ಸಂಸ್ಥೆ ನಡೆಯುತ್ತಿದ್ದು ಸೇನೆ, ಅರೆ ಸೇನೆ ಪೊಲೀಸ್ ನಂತಹ ಹುದ್ದೆಗೆ ಸೇರಲು ಬಯಸುವ ಆಕಾಂಕ್ಷಿಗಳಿಗೆ 3 ವರ್ಷಗಳಿಂದ 234 ಅಭ್ಯರ್ಥಿಗಳನ್ನು ಆಯ್ಕೆ ಮಾಡಿಸುವಲ್ಲಿ ಸಂಸ್ಥೆ ಯಶಸ್ವಿಯಾಗಿದೆ.
ಸಂಸ್ಥೆಯಿಂದ ತರಬೇತಿ ಪಡೆದು, ಸೇನೆಯ ತರಬೇತಿ ಮುಗಿಸಿ ರಜೆಗೆ ಸೇನಾ ಸಮವಸ್ತ್ರದಲ್ಲಿ ಬಂದ ಸೈನಿಕರುಗಳನ್ನು ಹೂವಿನ ಸುರಿಮಳೆ, ಜೈಕಾರ, ಚಪ್ಪಾಳೆಯೊಂದಿಗೆ ಬಹಳ ಅದ್ದೂರಿಯಾಗಿ ಸ್ವಾಗತಿಸಿ ಯುವ ಸೈನಿಕರನ್ನು ಗೌರವಿಸಲಾಯಿತು.
ಈ ವೇಳೆ ಮಾತನಾಡಿದ ಸೈನಿಕ ಅಕಾಡೆಮಿಯ ಸಂಸ್ಥಾಪಕರು ಕಮಾಂಡೋ ಶ್ರೀಧರ್ ಸಿ. ಎಂ, ಸೈನಿಕರು ತಮ್ಮ ಜೀವನವನ್ನು ಪಣವಾಗಿಟ್ಟು ದೇಶವನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಯುತ್ತಿರುವುದರಿಂದ ನಾವೆಲ್ಲರೂ ದೇಶದಲ್ಲಿ ಸಂತೋಷದಿಂದ ಬದುಕುತ್ತಿದ್ದೇವೆ. ಸುಮಾರು ವರ್ಷಗಳವರೆಗೆ ನಮ್ಮ ಶಾಲೆಯಲ್ಲಿ ಓದಿರುವ ಮಕ್ಕಳುಗಳು ಮುತ್ತಿನಂತೆಯೇ ಇದ್ದು ಶ್ರದ್ಧೆಯಿಂದ ಓದಿದ್ದಾರೆ. ಯುವಕರು ದೇಶ ಸೇವೆ ಸಲ್ಲಿಸಲು ಮುಂದೆ ಬರಬೇಕು ಎಂದು ಕಿವಿಮಾತು ಹೇಳಿದರು.
ಈ ಸಮಯದಲ್ಲಿ ಆಗ್ನಿವೀರರು ವರುಣ, ರೆವಂತ್, ಅರ್ಜುನ್, ಆಂತೋನಿ ಪ್ರತಾಪ್, ಸೊಗನ್ ರವರು ಹಾಗೂ ಸಹ ಸಂಸ್ಥಾಪಕರು ಅನಿತಾ ಶ್ರೀಧರ್, ಅಧ್ಯಾಪಕರಾದ ರಘು, ಸಂತೋಷ, ಸಿಬ್ಬಂದಿಗಳಾದ ದಿಲೀಪ್, ಚೇತನ್, ಪವನ್, ಕಾರ್ತಿಕ್ ಹಾಗು ತರಬೇತಿ ಪಡೆಯುತ್ತಿರುವ ಅಭ್ಯರ್ಥಿಗಳು ಉಪಸ್ಥಿತರಿದ್ದರು.
Key words: grand welcome, young soldiers, training, mysore