ಮೈಸೂರು, ಅಕ್ಟೋಬರ್ 13, 2019 (www.justkannada.in): ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ, ದಸರಾ ಪ್ರವಾಸೋದ್ಯಮ ಉಪ ಸಮಿತಿ ಹಾಗೂ ಆಟೋಮೋಟಿವ್ ಸ್ಪೋರ್ಟ್ಸ್ ಕ್ಲಬ್ ಮೈಸೂರು ವತಿಯಿಂದ ಇಂದು ಗ್ರಾವೆಲ್ ಫೆಸ್ಟ್ ನಡೆಯಲಿದೆ.
ಮೈಸೂರನ್ನು ಸಾಹಸ ಪ್ರವಾಸೋದ್ಯಮ ತಾಣವಾಗಿ ಹಾಗೂ ಮೋಟಾರ್ ಕ್ರೀಡೆಯ ತಾಣವಾಗಿ ಅಭಿವೃದ್ಧಿ ಗ್ರಾವೆಲ್ ಫೆಸ್ಟ್ ಆಯೋಜನೆ ಮಾಡಲಾಗಿದೆ. ದೇಶದ ೧೦೦ ಬೆಸ್ಟ್ ಡ್ರೈವರ್ ಗಳು ಭಾಗಿಯಾಗುವ ಗ್ರಾವೆಲ್ ಫೆಸ್ಟ್ ಇದಾಗಿದೆ.
ಒಟ್ಟು ೯ ವಿಭಾಗದಲ್ಲಿ ಸ್ಪರ್ಧೆ ನಡೆಯಲಿದೆ. ರಾಜ್ಯ ಮಾತ್ರವಲ್ಲದೆ ದೆಹಲಿ, ಮಹಾರಾಷ್ಟ್ರ, ಗೋವಾ, ತಮಿಳುನಾಡು, ಕೇರಳ, ಆಂಧ್ರಪ್ರದೇಶ, ತೆಲಂಗಾಣ, ರಾಜ್ಯಗಳಿಂದ ಡ್ರೈವರ್’ಗಳು ಆಗಮಿಸಿದ್ದಾರೆ.
೧೧೦೦ ಸಿಸಿ ವರಗೆ , ೧೧೦೦ ಸಿಸಿಯಿಂದ ೧೪೦೦ ಸಿಸಿ ವರೆಗೆ, ೧೪೦೦ ಸಿಸಿಯಿಂದ ೧೬೫೦ಸಿಸಿ ವರೆಗೆ, ಇಂಡಿಯನ್ ಓಪನ್ ಕ್ಲಾಸ್, ಅನ್ರಿಸ್ಟ್ರಿಕ್ಟೆಡ್ ಕ್ಲಾಸ್, ಲೇಡಿಸ್ ಕ್ಲಾಸ್, ಎಸ್ ಯುವಿ ಕ್ಲಾಸ್ ಗಳಲ್ಲಿ ಸ್ಪರ್ಧೆ ನಡೆಯಲಿದೆ.
ಈ ಬಾರಿ ಮೈಸೂರಿನ ಸ್ಥಳಿಯ ೧೬ ಮಂದಿ ಪ್ರತಿಭೆಗಳ ಹಾಗೂ ೧೦ ಮಂದಿ ಮಹಿಳಾ ಸ್ಪರ್ಧಿಗಳು ತಮ್ಮ ಕೌಶಲ್ಯ ಪ್ರದರ್ಶನ ಮಾಡಲಿದ್ದಾರೆ.