ಮೈಸೂರು,ಡಿಸೆಂಬರ್,29,2020 : ದೇಶ ಎಂದೂ ಮರೆಯದಂತ್ತಹ ವ್ಯಕ್ತಿ ಕುವೆಂಪು. ಜ್ಞಾನಿಸುವ ಕೆಲವೇ ಕೆಲವು ವ್ಯಕ್ತಿಗಳಲ್ಲಿ ಕುವೆಂಪು ಅವರು ಒಬ್ಬರು ಎಂದು ಮೈಸೂರು ವಿವಿ ಕುಲಸಚಿವ ಪ್ರೊ.ಆರ್.ಶಿವಪ್ಪ ಅಭಿಪ್ರಾಯವ್ಯಕ್ತಪಡಿಸಿದರು.
ಮೈಸೂರು ವಿವಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಸಮಿತಿ ಕೊಠಡಿಯಲ್ಲಿ ಮಂಗಳವಾರ ಆಯೋಜಿಸಿದ್ದ ‘’ರಾಷ್ಟ್ರಕವಿ ಕುವೆಂಪು ಅವರ 117ನೇ ಜನ್ಮದಿನೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕುವೆಂಪು ಅವರು ಬರೆದಿರುವ ಸಾಹಿತ್ಯವನ್ನು ಆಂಗ್ಲ ಭಾಷೆಗೆ ಅನುವಾದಿಸಿದರೆ ಜಗತ್ತಿನ ಶ್ರೇಷ್ಠ ಕೀರ್ತಿಯನ್ನು ಈ ಸಾಹಿತ್ಯವುಗಳಿಸುವುದರಲ್ಲಿ ಅನುಮಾನವಿಲ್ಲ. ಈ ನಿಟ್ಟಿನಲ್ಲಿ ಕಾರ್ಯವಾಗಬೇಕು ಎಂದು ಸಲಹೆ ನೀಡಿದರು.
ಕುವೆಂಪು ಅವರ ಭಾಷಣದ ಸಂಗ್ರಹವಾದ ‘’ವಿಚಾರಕ್ರಾಂತಿಗೆ ಆಹ್ವಾನ’’ ಎಂಬ ಲೇಖನ ಓದಿದರೆ ಕುವೆಂಪು ಅವರ ವ್ಯಕ್ತಿತ್ವವನ್ನು ಅರಿತುಕೊಳ್ಳಲು ಸಾಧ್ಯವಿದೆ. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ, ರಾಷ್ಟ್ರಕವಿ ಕುವೆಂಪು ಅವರು ಜನಿಸಿದ ಈ ನೆಲದಲ್ಲಿ ನಾವು ಇರುವುದು ಪುಣ್ಯ. ಪ್ರಸ್ತುತ ಕವಿಗಳಲ್ಲಿಯೂ ಜಾತಿಗಳಿವೆ. ಆದರೆ, ಜಾತ್ಯಾತೀತ ಕವಿ ಕುವೆಂಪು ಆಗಿದ್ದಾರೆ ಎಂದು ಸ್ಮರಿಸಿದರು.
ಕಾರ್ಯಕ್ರಮದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ವಿಶ್ರಾಂತ ಪ್ರಾಧ್ಯಾಪಕರಾದ ಪ್ರೊ.ಸಿ.ಪಿ.ಸಿದ್ಧಾಶ್ರಮ, ಪ್ರೊ.ಆರ್.ರಾಮಕೃಷ್ಣ, ಕಲಾ ಪೋಷಕ ಗುರು ಪ್ರಶಸ್ತಿ ಪುರಸ್ಕೃತ ನಂಜಯ್ಯ ಹೊಂಗನೂರು ಅವರನ್ನು ಸನ್ಮಾನಿಸಲಾಯಿತು.
ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್, ವಿಶ್ರಾಂತ ಪ್ರಾಧ್ಯಾಪಕರಾದ ಪ್ರೊ.ಎನ್.ಬೋರಲಿಂಗಯ್ಯ, ಪ್ರೊ.ಎಂ.ಜಿ.ಮಂಜುನಾಥ್ ಇದ್ದರು.
key words: Great person – remembers – country-mysore university-Prof.R.Sivappa,