ಬೆಂಗಳೂರು,ನವೆಂಬರ್,12,2022(www.justkannada.in): ನಾಡಪ್ರಭು ಕೆಂಪೇಗೌಡರ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರನ್ನ ಆಹ್ವಾನಿಸದೇ ಅಪಮಾನ ಮಾಡಲಾಗಿದೆ ಎಂದು ಜೆಡಿಎಸ್ ಟೀಕಿಸಿರುವ ಕುರಿತು ಪ್ರತಿಕ್ರಿಯಿಸಿದ ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ್, ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ಈ ಕುರಿತು ಮಾತನಾಡಿರುವ ಸಚಿವ ಅಶ್ವಥ್ ನಾರಾಯಣ್, ಹೆಚ್.ಡಿ ದೇವೇಗೌಡರ ಬಗ್ಗೆ ಅಪಾರ ಗೌರವವಿದೆ. ಗೌರವಕ್ಕೆ ಚ್ಯುತಿ ಬರದಂತೆ ಅನಾವರಣ ಫಲಕದಲ್ಲಿ ಹೆಸರು ಇದೆ. ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಆಹ್ವಾನ ಪತ್ರಿಕೆ ಮಾಡಿಲ್ಲ. ಹೆಚ್.ಡಿ ದೇವೇಗೌಡರ ಬಗ್ಗೆ ನಮ್ಮ ಪಕ್ಷ, ಸರ್ಕಾರಕ್ಕೆ ಅತಿಯಾದ ಗೌರವವಿದೆ ಎಲ್ಲೂ ಅಗೌರವದ ರೀತಿ ಆಗಿಲ್ಲ ಸಂಪರ್ಕದ ಕೊರೆತೆಯೂ ಆಗಿಲ್ಲ ಎಂದರು.
ಪ್ರತಿಮೆ ಅನಾವರಣಕ್ಕೆ ಎಲ್ಲಾ ಮಾಜಿ ಸಿಎಂಗಳನ್ನ ಕರೆದಿದ್ದವು. ಪ್ರತಿಮೆ ಲೋಕಾರ್ಪಣೆ ವಿಚಾರದಲ್ಲಿ ಬಿಜೆಪಿ ರಾಜಕೀಯ ಮಾಡಲು ಹೊರಟಿಲ್ಲ . ಕೆಂಪೇಗೌಡರು ಯಾವುದೋ ಒಂದು ಸಮುದಾಯಕ್ಕೆ ಸೀಮಿತ ಅಲ್ಲ ಎಂದು ಅಶ್ವಥ್ ನಾರಾಯಣ್ ತಿಳಿಸಿದರು.
Key words: great -respect – H.D devegowda-BJP –Minister- Aswath Narayan