ಬೆಂಗಳೂರು,ಅಕ್ಟೋಬರ್,30,2020(www.justkannada.in) : ಈದ್-ಮಿಲಾದ್ ಹಬ್ಬಕ್ಕೆ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಸೇರಿದಂತೆ ವಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಅನೇಕ ಗಣ್ಯರು ಟ್ವೀಟ್ ಮೂಲಕ ಶುಭಾಶಯ ತಿಳಿಸಿದ್ದಾರೆ.
ಕರುಣೆ ಮತ್ತು ಸೋದರತ್ವವನ್ನು ಮತ್ತಷ್ಟು ವಿಸ್ತರಿಸಲಿ
ಪ್ರಧಾನಿ ನರೇಂದ್ರ ಮೋದಿ ಈ ದಿನ ಕರುಣೆ ಮತ್ತು ಸೋದರತ್ವವನ್ನು ಮತ್ತಷ್ಟು ವಿಸ್ತರಿಸಲಿ. ಎಲ್ಲರೂ ಆರೋಗ್ಯದಿಂದ ಮತ್ತು ಖುಷಿಯಿಂದ ಇರಲಿ. ʻಮಿಲಾದ್–ಉನ್–ನಬಿ ದಿನದ ಶುಭಾಶಯಗಳು. ಈದ್ ಮುಬಾರಕ್!’ ಎಂದು ಶುಭಾಶಯ ತಿಳಿಸಿದ್ದಾರೆ.
ಮುಸ್ಲಿಂ ಸೋದರ ಮತ್ತು ಸೋದರಿಯರಿಗೆ ಶುಭಾಶಯಗಳು
ರಾಷ್ಟ್ರಪತಿ ರಾಮನಾಥ್ ಕೋವಿಂದ್ ಎಲ್ಲ ನಾಗರಿಕರಿಗೆ, ವಿಶೇಷವಾಗಿ ಭಾರತದ ಮತ್ತು ಹೊರ ರಾಷ್ಟ್ರಗಳಲ್ಲಿರುವ ನಮ್ಮ ಮುಸ್ಲಿಂ ಸೋದರ ಮತ್ತು ಸೋದರಿಯರಿಗೆ ಶುಭಾಶಯಗಳು. ಸಮಾಜದ ಒಳಿತಿಗಾಗಿ, ದೇಶದಲ್ಲಿ ಶಾಂತಿ ಮತ್ತು ಸೌಹಾರ್ದತೆಗಾಗಿ ನಾವೆಲ್ಲರೂ ಅವರ ಬೋಧನೆಗಳನ್ನು ಅನುಸರಿಸೋಣ ಎಂದು ಟ್ವೀಟ್ ಮಾಡಿದ್ದಾರೆ.
ಸಮಾನತೆ-ಸೌಹಾರ್ದತೆ ಸಮಾಜ ಕಟ್ಟುವ ನಮ್ಮ ಕೈಗಳಿಗೆ ಇನ್ನಷ್ಟು ಬಲ ತಂದು ಕೊಡಲಿ
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರವಾದಿ ಮಹಮ್ಮದ್ ಪೈಗಂಬರರ ಬೋಧನೆ ಮತ್ತು ಸಾಧನೆ ಸಮಾನತೆ-ಸೌಹಾರ್ದತೆಯ ಸಮಾಜವನ್ನು ಕಟ್ಟುವ ನಮ್ಮ ಕೈಗಳಿಗೆ ಇನ್ನಷ್ಟು ಬಲ ತಂದು ಕೊಡಲಿ. ನಾಡಿನ ನನ್ನೆಲ್ಲ ಮುಸ್ಲಿಮ್ ಬಂಧುಗಳಿಗೆ ಈದ್-ಮಿಲಾದ್ ಶುಭಾಶಯಗಳು ಎಂದು ಟ್ವೀಟ್ ಮಾಡಿದ್ದಾರೆ.
key words : Greetings-many-dignitaries-‘Eid Milad’