ಶೀಘ್ರದಲ್ಲೇ ಫಲಾನುಭವಿಗಳ ಕೈ ಸೇರಲಿದೆ ಗೃಹಲಕ್ಷ್ಮಿ ಹಣ

ಬೆಂಗಳೂರು,ಮಾರ್ಚ್,4,2025 (www.justkannada.in): ಕಳೆದ ನವೆಂಬರ್ ತಿಂಗಳಿನಿಂದ ಸ್ಥಗಿತವಾಗಿರುವ ಗೃಹಲಕ್ಷ್ಮಿ ಹಣ ಶೀಘ್ರದಲ್ಲೇ ಫಲಾನುಭವಿಗಳ ಕೈ ಸೇರಲಿದೆ.

ಹೌದು ಬಾಕಿ ಉಳಿದಿರುವ 4 ತಿಂಗಳ ಪೈಕಿ 2 ತಿಂಗಳ ಹಣವನ್ನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಫಲಾನುಭವಿಗಳ ಖಾತೆಗೆ ನೇರ ವರ್ಗಾವಣೆ ಮಾಡಲು ಮುಂದಾಗಿದೆ.  ಫೆಬ್ರವರಿ ಸೇರಿದಂತೆ 4 ತಿಂಗಳ ಹಣ ಪಾವತಿಯನ್ನ ಸರ್ಕಾರ ಬಾಕಿ ಉಳಿಸಿಕೊಂಡಿದ್ದು, ಪ್ರತಿಪಕ್ಷಗಳ ಟೀಕೆ ,ಮಹಿಳೆಯರ ಆಕ್ರೋಶಕ್ಕೆ ಮಣಿದಿರುವ ಸರ್ಕಾರ ಇದೀಗ ಕೊನೆಗೂ ಹಂತ ಹಂತವಾಗಿ ಹಣ ಬಿಡುಗಡೆಗೆ ಮುಂದಾಗಿದೆ.

ಈಗ ನವೆಂಬರ್, ಡಿಸೆಂಬರ್ ತಿಂಗಳ ಗೃಹಲಕ್ಷ್ಮಿ ಯೋಜನೆ ಹಣ ಫಲಾನುಭವಿಗಳ ಖಾತೆಗೆ ಬಿಡುಗಡೆ ಮಾಡಲಿದ್ದು,  2 ತಿಂಗಳೂ ಸೇರಿ 1.26 ಕೋಟಿ ಮಹಿಳೆಯರಿಗೆ ಸುಮಾರು 5000 ಕೋಟಿ ಪಾವತಿ ಮಾಡುತ್ತಿದೆ. ಇನ್ನು ಜನವರಿ, ಫೆಬ್ರವರಿ ತಿಂಗಳ ಬಾಕಿಯನ್ನು ಮಾರ್ಚ್, ಏಪ್ರಿಲ್ ತಿಂಗಳಲ್ಲಿ ನೀಡುವುದಾಗಿ ಸರ್ಕಾರ ಭರವಸೆ ನೀಡಿದೆ.

Key words: Grihalakshmi, money, beneficiaries, soon, State Government