ಮೈಸೂರು,ಡಿಸೆಂಬರ್,13,2020(www.justkannada.in) : ಜಿ.ಟಿ.ದೇವೇಗೌಡರು ನಮ್ಮ ನಾಯಕರು. ಅವರನ್ನ ಭೇಟಿ ಮಾಡುವುದರಲ್ಲಿ ವಿಶೇಷ ಏನಿಲ್ಲ. ಅವರು ನಮ್ಮ ಪಕ್ಷದಲ್ಲೆ ಇದ್ದಾರೆ. ಮುಂದೆ ನಮ್ಮ ಜೊತೆ ಬಂದೆ ಬರ್ತಾರೆ. ಕೆಲ ದಿನಗಳ ಕಾಲ ಆಕ್ಟಿವ್ ಇರಲಿಲ್ಲ. ಇನ್ನು ಮುಂದೆ ಆಕ್ಟಿವ್ ಆಗ್ತಾರೆ ಎಂದು ಶಾಸಕ ಸಾ.ರಾ.ಮಹೇಶ್ ಹೇಳಿದರು.
ಜಲದರ್ಶಿನಿ ಅಥಿತಿಗೃಹದಲ್ಲಿ ಗ್ರಾ.ಪಂ.ಚುನಾವಣೆ ಬೆನ್ನಲ್ಲೇ ದಳಪತಿಗಳು ಶಾಸಕರಾದ ಸಾರಾ.ಮಹೇಶ್ ಹಾಗೂ ಜಿಟಿ.ದೇವೇಗೌಡ ಮಾತುಕತೆ ಬಳಿಕ ಶಾಸಕ ಸಾ.ರಾ.ಮಹೇಶ್ ಮಾತನಾಡಿ, ನನ್ನಿಂದ ತಪ್ಪಾಗಿದ್ದರೆ ಕ್ಷಮಿಸಿ ಅಂತ ಕೇಳ್ತಿವಿ. ಅವರು ನಮಗಿಂತ 25 ವರ್ಷ ದೊಡ್ಡವರು. ನಮ್ಮಂತವರು ತಪ್ಪು ಮಾಡಿದಾಗ ತಿದ್ದಿ ಬುದ್ದಿ ಹೇಳುವ ಅಧಿಕಾರ ಅವರಿಗೆ ಇದೆ ಎಂದಿದ್ದಾರೆ.
ಹಾಗೇನಾದರೂ ನಾನು ತಪ್ಪು ಮಾಡಿದ್ರೆ ಅದನ್ನು ತಿದ್ದಿಕೊಳ್ಳುತ್ತೇನೆ. ಕುಮಾರಸ್ವಾಮಿ ಜಿಟಿಡಿಯವರನ್ನ ಭೇಟಿ ಮಾಡುವ ಸಂದರ್ಭ ಬಂದಿಲ್ಲ. ಅಂತಹ ಸಂದರ್ಭ ಬಂದರೆ ಅವರು ಜಿಟಿಡಿ ಅವರನ್ನ ಭೇಟಿ ಮಾಡ್ತಾರೆ. ಇನ್ಮುಂದೆ ಎಲ್ಲವು ಸರಿಯಾಗಲಿದೆ. ಗ್ರಾ.ಪಂ ಚುನಾವಣೆಯಲ್ಲಿ ನಮ್ಮ ಪಕ್ಷ ಹೆಚ್ಚಿನ ಸಾಧನೆ ಮಾಡಲಿದೆ ಎಂದು ತಿಳಿಸಿದ್ದಾರೆ.
ಇದು ವೈಯಕ್ತಿಕ ಭೇಟಿ : ಜಿಟಿಡಿ
ಭೇಟಿ ನಂತರ ಯಾವುದೇ ಪ್ರತಿಕ್ರಿಯೆ ನೀಡದೆ ತೆರಳಿದ ಜಿಟಿಡಿ. ಇದು ವೈಯುಕ್ತಿಕ ಭೇಟಿ. ಏನು ಮಾತನಾಡೋಲ್ಲ. ನನ್ನ ಹೇಳಿಕೆಗಳು ಮಾಧ್ಯಮದಲ್ಲಿ ತಪ್ಪಾಗಿ ಅರ್ಥೈಸಲಾಗಿದೆ. ನಾನು ಆ ರೀತಿ ಏನು ನಡೆದುಕೊಂಡಿಲ್ಲ ಎಂದು ಸ್ಥಳದಿಂದ ತೆರಳಿದ ಜಿಟಿಡಿ.
key words : GTD-Some-days-There-no-active-Not-anymore- Active-MLA sa.ra.Mahesh