ಮಂಗಳೂರು,ಜೂನ್,2,2023(www.justkannada.in): ಕಾಂಗ್ರೆಸ್ ಸರ್ಕಾರ ಜಾರಿ ಮಾಡಲು ಮುಂದಾಗಿರುವ ಗ್ಯಾರಂಟಿ ಯೋಜನೆಗಳನ್ನ ಸ್ವಾಗತಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಗ್ಯಾರಂಟಿ ಯೋಜನೆ ಜಾರಿಯಿಂದ ರಾಜ್ಯ ಬೊಕ್ಕಸ ಹಣದ ಗತಿ ಏನು..? ಎಂದು ಪ್ರಶ್ನಿಸಿದ್ದಾರೆ.
ಈ ಕುರಿತು ಇಂದು ಮಾತನಾಡಿದ ನಳೀನ್ ಕುಮಾರ್ ಕಟೀಲ್, ಜನಾಕ್ರೋಶ ಬಳಿಕ ಗ್ಯಾರಂಟಿ ಯೋಜನೆ ಘೋಷಣೆ ಮಾಡಿದ್ದಾರೆ. ಜನಪರ ಯೋಜನೆ ಘೋಷಣೆ ಮಾಡಿದ್ದಾರೆ. ಗ್ಯಾರಂಟಿ ಯೋಜನೆ ನಾನು ಸ್ವಾಗತಿಸುತ್ತೇನೆ. ಆದರ ಹಣದ ಮೂಲ ಹಣದ ಕ್ರೂಢೀಕರಣ ಎಷ್ಟು ವರ್ಷ ಇರುತ್ತೆ ಎಂಬ ಬಗ್ಗೆ ಶ್ವೇತ್ರ ಪತ್ರ ಹೊರಡಿಸಲಿ ಎಂದು ಆಗ್ರಹಿಸಿದರು.
ಮೊದಲು ಮಾನದಂಡದ ಬಗ್ಗೆ ಹೇಳಿರಲಿಲ್ಲ. ನಿರುದ್ಯೋಗ ಭತ್ಯೆಗೆ ಮಾನದಂಡ ಹಾಕಿದ್ದಾರೆ. ಕರಾವಳಿಯಲ್ಲಿ ಖಾಸಗಿ ಬಸ್ ಇದೆ. ಖಾಸಗಿ ಬಸ್ ನಲ್ಲಿ ಪ್ರಯಾಣಿಸುವವರ ಗತಿ ಏನು.? ರಾಜ್ಯದ ಬೊಕ್ಕಸದ ಹಣದ ಗತಿ ಏನು..? ಯಾರಿಗೂ ಹೊರ ಆಗದೆ ಹೇಗೆ ನಿಯಂತ್ರಿಸುತ್ತೀರಿ ಶ್ರೀಲಂಕಾ ಪಾಕಿಸ್ತಾನದಂತೆ ಆರ್ಥಿಕ ಕುಸಿತವಾಗಬಾರದು ಎಂದು ನಳೀನ್ ಕುಮಾರ್ ಕಟೀಲ್ ಹೇಳಿದರು.
Key words: Guarantee scheme- welcome:Question – Naleen Kumar Kateel