ನವದೆಹಲಿ, ಮೇ 8, 2020 (www.justkannada.in): ಲಾಕ್ ಡೌನ್ ಮುಗಿದ ನಂತರ ಶಾಲೆಗಳನ್ನು ಆರಂಭಿಸಲು ಕೇಂದ್ರ ಸರ್ಕಾರ ಮಾರ್ಗದರ್ಶಿ ಸೂತ್ರಗಳನ್ನು ಸಿದ್ಧಪಡಿಸುತ್ತಿದೆ.
ಮಾನವ ಸಂಪನ್ಮೂಲ ಸಚಿವಾಲಯದ ವತಿಯಿಂದ ಮಾರ್ಗಸೂಚಿ ಸಿದ್ಧಪಡಿಸಲಾಗಿದ್ದು, ಶಾಲೆಗಳಲ್ಲಿ ಸಮ -ಬೆಸ ಯೋಜನೆ ಜಾರಿಗೆ ತರಲು ಚಿಂತನೆ ನಡೆಸುತ್ತಿದೆ. ಶಾಲೆಗಳಲ್ಲಿ ಶೇ.50ರಷ್ಟು ವಿದ್ಯಾರ್ಥಿಗಳಿರುವಂತೆ ಗೈಡ್‍ಲೈನ್ಸ್ ರೂಪಿಸಲಾಗುತ್ತಿದೆ.
ವಿದ್ಯಾರ್ಥಿಗಳ ಕಲಿಕೆಗೆ ಅನುವಾಗುವಂತೆ 1 ನೇ ತರಗತಿಯಿಂದ ಪಿಯುಸಿ ವರೆಗೆ 12 ಪ್ರತ್ಯೇಕ ವಾಹಿನಿಗಳನ್ನು ಪ್ರಾರಂಭಿಸಲಾಗುವುದು.
ಶಾಲೆಗಳಲ್ಲಿ ಸಮ -ಬೆಸ ಯೋಜನೆ ಜಾರಿಗೆ ತರುವುದರಿಂದ ಮಕ್ಕಳು ಅಂತರ ಕಾಯ್ದುಕೊಳ್ಳಲು, ಸುರಕ್ಷತೆ ಅನುಸರಿಸಲು ಅನುಕೂಲವಾಗುತ್ತದೆ.