ಬೆಂಗಳೂರು,ಅಕ್ಟೋಬರ್,28,2020(www.justkannada.in): ಕೊರೋನಾ ಮಹಾಮಾರಿ ಹರಡುತ್ತಿರುವ ಹಿನ್ನೆಲೆ ಶಾಲಾ-ಕಾಲೇಜುಗಳನ್ನ ಬಂದ್ ಮಾಡಲಾಗಿದ್ದು ರಾಜ್ಯದಲ್ಲಿ ಮಕ್ಕಳಿಗೆ ಆನ್ ಲೈನ್ ಮೂಲಕ ಶಿಕ್ಷಣ ನೀಡಲಾಗುತ್ತಿದೆ.
ಈ ನಡುವೆ ಆನ್ ಲೈನ್ ಶಿಕ್ಷಣಕ್ಕೆ ಶಿಕ್ಷಣ ಇಲಾಖೆ ಮಾರ್ಗಸೂಚಿ ಬಿಡುಗಡೆ ಮಾಡಿದ್ದು, ಸರ್ಕಾರದ ಗೈಡ್ ಲೈನ್ಸ್ ಈ ಕೆಳಕಂಡಂತಿದೆ..
ಪ್ರತಿ ತರಗತಿಗೆ ಗರಿಷ್ಠ ಸಮಯ 30 ನಿಮಿಷಗಳು.
6 ಮತ್ತು ನಂತರದ ತರಗತಿಗಳಿಗೆ ಅವಶ್ಯಕತೆಗಳಿಗೆ ಅನುಗುಣವಾಗಿ 30 ರಿಂದ 45 ನಿಮಿಷದ ತರಗತಿ. ವಯೋಮಾನಕ್ಕೆ ಅನುಗುಣವಾಗಿ ದಿನಕ್ಕೆ 1ರಿಂದ 4 ಗಂಟೆ ತರಗತಿ ಮಾಡಬಹುದು.
2ನೇ ತರಗತಿವರೆಗೆ ಪರ್ಯಾಯ ದಿನಗಳ ಬೋಧನೆ.
2ನೇ ತರಗತಿಯವರೆಗೆ ಪೋಷಕರ ಉಪಸ್ಥಿತಿ ಕಡ್ಡಾಯ. ಪೋಷಕರ ಅನುಮತಿ ಮೇರೆಗೆ ವಯಸ್ಕರ ಉಪಸ್ಥಿತಿಗೆ ಅವಕಾಶ. 6ರಿಂದ 8ನೇ ತರಗತಿವರೆಗೆ ಪೋಷಕರು ಹಾಜರಿರಬಹುದು ಅಥವಾ ಹಾಜರಿ ಇಲ್ಲದಿರಬಹುದು.
3ನೇ ತರಗತಿ ನಂತರ ವಾರಕ್ಕೆ ಗರಿಷ್ಠ 5 ದಿನಗಳವರೆಗೆ ಬೋಧನೆ ಮಾಡಬಹುದು..
3-5ನೇ ತರಗತಿವರೆಗೆ ದಿನಕ್ಕೆ 30 ನಿಮಿಷಗಳ 2 ಕ್ಲಾಸ್ ತೆಗೆದುಕೊಳ್ಳಬಹುದು. 6-8ನೇ ತರಗತಿವರೆಗೆ ದಿನಕ್ಕೆ 30-45 ನಿಮಿಷಗಳವರೆಗೆ 3 ಕ್ಲಾಸ್ ತೆಗೆದುಕೊಳ್ಳಲು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
Key words: Guidelines -Online Education – State