ಬೆಂಗಳೂರು,ಡಿಸೆಂಬರ್,8,2022(www.justkannada.in): ಗುಜರಾತ್ ನಲ್ಲಿ ಬಿಜೆಪಿ ದಾಖಲೆ ಗೆಲುವು ಹಿನ್ನಲೆ ಅಲ್ಲಿನ ಫಲಿತಾಂಶ ಕರ್ನಾಟಕದ ಮೇಲೂ ಪರಿಣಾಮ ಬೀರಲಿದೆ ಎಂದು ಹೇಳಿಕೆ ನೀಡಿದ ರಾಜ್ಯ ಬಿಜೆಪಿ ನಾಯಕರಿಗೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಟಾಂಗ್ ನೀಡಿದ್ದಾರೆ.
ಈ ಕುರಿತು ಇಂದು ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ, ಕಳೆದ 5 ವರ್ಷದಿಂದ ಗುಜರಾತ್ ನಲ್ಲಿ ವಿರೋಧ ಪಕ್ಷವೇ ಇಲ್ಲ. ಆದ್ದರಿಂದ ಗುಜರಾತ್ ಫಲಿತಾಂಶ ಏನಾಗಲಿದೆ ಎಂಬುದು ಮೊದಲೇ ಎಲ್ಲರಿಗೊ ಗೊತ್ತಿರುವ ವಿಷಯವಾಗಿತ್ತು. ರಾಜ್ಯದ ಸಿಎಂ ಗುಜರಾತ್ ಫಲಿತಾಂಶ ಕರ್ನಾಟಕದ ಮೇಲೂ ಪರಿಣಾಮ ಬೀರುತ್ತದೆ ಎಂದಿದ್ದಾರೆ. ಆದರೆ ಗುಜರಾತ್ ನಲ್ಲಿರುವ ವಾತವಾರಣವೇ ಬೇರೆ, ರಾಜ್ಯದ ವಾತಾವರಣವೇ ಬೇರೆ. ಹೀಗಾಗಿ ಗುಜರಾತ್ ಫಲಿತಾಂಶ ರಾಜ್ಯದ ಮೇಲೆ ಪರಿಣಾಮ ಬೀರಲ್ಲ ಎಂದು ಹೇಳಿದರು.
ಹಿಮಾಚಲ ಪ್ರದೇಶದಲ್ಲಿ ಮೊದಲಿನಿಂದಲೂ ಒಂದು ಬಾರಿ ಕಾಂಗ್ರೆಸ್ ಮತ್ತೊಂದು ಬಾರಿ ಬಿಜೆಪಿಗೆ ಅಧಿಕಾರ ಸಿಗುತ್ತದೆ. ಅದೇ ಈ ಬಾರಿಯೂ ಮರುಕಳಿಸಿದೆ ಎಂದು ಹೆಚ್.ಡಿಕೆ ಅಭಿಪ್ರಾಯ ವ್ಯಕ್ತಪಡಿಸಿದರು.
Key words: Gujarat –Election- Result- Former CM- H.D. Kumaraswamy