ಗುಜರಾತ್ ಫಲಿತಾಂಶ ರಾಜ್ಯಕ್ಕೆ ಸಂಬಂಧಿಸಿಲ್ಲ : ರಾಷ್ಟ್ರ ಚುನಾವಣೆ ಬೇರೆ, ರಾಜ್ಯ ಚುನಾವಣೆ ಬೇರೆ- ಮಾಜಿ ಸಿಎಂ ಸಿದ್ಧರಾಮಯ್ಯ.

ಬೆಂಗಳೂರು,ಡಿಸೆಂಬರ್,6,2022(www.justkannada.in):  ಗುಜರಾತ್  ವಿಧಾನಸಭಾ ಚುನಾವಣಾ ಫಲಿತಾಂಶ ಕರ್ನಾಟಕಕ್ಕೆ  ದಿಕ್ಸೂಚಿ ಎಂದಿದ್ದ ಬಿಜೆಪಿ ನಾಯಕರಿಗೆ ವಿಪಕ್ಷ ನಾಯಕ ಸಿದ್ಧರಾಮಯ್ಯ ತಿರುಗೇಟು ನೀಡಿದ್ದಾರೆ.

ಈ ಕುರಿತು ಮಾತನಾಡಿದ ಸಿದ‍್ಧರಾಮಯ್ಯ, ಗುಜರಾತ್ ಫಲಿತಾಂಶ ಕರ್ನಾಟಕ್ಕ್ಕೆ ದಿಕ್ಸೂಚಿಯಾತ್ರೆ  ಪಂಜಾಬ್ ಫಲಿತಾಂಶ ಯಾಕೆ ದಿಕ್ಸೂಚಿ ಆಗಲಿಲ್ಲ. ಅಲ್ಲಿನ ರಾಜಕೀಯ, ಆಡಳಿತ, ಭಾವನೆಗಳು ಬೇರೆ. ಇಲ್ಲಿಯ ರಾಜಕೀಯ. ಭಾವನೆಗಳೇ ಬೇರೆ. ರಾಷ್ಟ್ರ ಚುನಾವಣೆ ಬೇರೆ,  ರಾಜ್ಯ ಚುನಾವಣೆ ಬೇರೆ ಎಂದರು.

ಎಕ್ಸಿಟ್ ಪೋಲ್ ವಿಚಾರ ಸಂಬಂಧ  ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಮುಂದಿದೆ.  ಅಂತಾ ಹೇಳಿದೆ. ಗುಜರಾತ್ ನಲ್ಲಿ ಬಿಜೆಪಿ ಮುಂದಿದೆ ಎಂದು ಹೇಳಿದ್ದಾರೆ 8 ನೇ ತಾರೀಖು ನೋಡೋಣ. ಚುನಾವಣೇಯಲ್ಲಿ ಜನ ಕೊಟ್ಟ ತೀರ್ಪು ಒಪ್ಪಿಕೊಳ್ಳಬೇಕು ಎಂದು ತಿಳಿಸಿದರು.

ಗಡಿ ವಿವಾದ ಕುರಿತು ಪ್ರತಿಕ್ರಿಯಿಸಿದ ಸಿದ್ಧರಾಮಯ್ಯ, ಈಗಾಗಲೇ ಮಹಾಜನ್ ವರದಿ ಬಂದಿದೆ ಮಹಾಜನ್ ವರದಿಯೇ ಅಂತಿಮ. ಮಹಾರಾಷ್ಟ್ರದವರು ವರದಿ ಒಪ್ಪಲ್ಲ ಅಂದರೇ ಮಹಾರಾಷ್ಟ್ರದವರ ಪುಂಡಾಟಿಕೆಗೆ ಸರ್ಕಾರ ಹೆದರಬಾರದು.  ಉತ್ತಮ ಲಾಯರ್ ಇಟ್ಟು ವಾದ ಮಾಡಲಿ.  ಸಿಎಂ ಬೊಮ್ಮಾಯಿ ಸರ್ವಪಕ್ಷ ಸಭೆ ಕರೆಯುವುದಾಗಿ ಹೇಳಿದ್ದರು. ಆದರೆ ಕರೆಯಲಿಲ್ಲ ಎಂದು ಟೀಕಿಸಿದರು.

Key words: Gujarat -result -not related – state-Former CM- Siddaramaiah.

ENGLISH SUMMARY..

Gujarat assembly election results, not related to Karnataka: National elections, State elections are different – Former CM Siddaramaiah
Bengaluru, December 6, 2022 (www.justkannada.in): Responding to the State BJP leaders statement that the Gujarat assembly election results are like exit polls for Karnataka, the leader of the opposition in the assembly Siddaramaiah said, national elections and state elections should not be matched.
Speaking in Bengaluru today, Siddaramaiah said, then why Punjab assembly election results did not turn to be favourable for the BJP in the State? “Politics, administration, feelings there are quite different from our State,” he said.
In his reply on the exit poll, Siddaramaiah said that the Congress is leading in Himachal Pradesh according to the exit polls. “Likewise, the BJP will win in Gujarath. However, let us wait till 8th for the results. Whatever may be the results, we all should accept people’s judgement,” he observed.
In his reply on the border issue, Siddaramaiah expressed his view that the Mahajan Committee report is final. “Maharashtra won’t accept the Mahajan committee report. However, Karnataka Government should not get scared from their atrocities. Let them appoint an efficient counsel and fight the case. The CM Bommai had informed that he would convene a all party meeting to discuss about this issue. But still now he has not done it,” he criticized.
Keywords: Siddaramaiah/ Gujarat assembly result/ Karnataka