ಗುಲ್ಬರ್ಗಾ ವಿವಿ ಮೇಲೆ ಲೋಕಾಯುಕ್ತ ದಾಳಿ: ದಾಖಲೆ ಪರಿಶೀಲನೆ

ಕಲಬುರಗಿ,ಫೆಬ್ರವರಿ,27,2025 (www.justkannada.in): ಗುಲ್ಬರ್ಗಾ ವಿಶ್ವವಿದ್ಯಾಲಯದ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ದಾಖಲೆ ಪರಿಶೀಲಿಸಿದರು.

ಲೋಕಾಯುಕ್ತ ಎಸ್‌.ಪಿ  ಬಿಕೆ. ಉಮೇಶ್ ನೇತೃತ್ವದಲ್ಲಿ ಗುಲ್ಬರ್ಗ ವಿಶ್ವವಿದ್ಯಾಲಯ ಮೇಲೆ ದಾಳಿ ನಡೆಸಿ ದಾಖಲೆ ಪರಿಶೀಲಿಸಿದರು. ವಿದ್ಯಾರ್ಥಿಗಳಿಗೆ ಅಂಕಪಟ್ಟಿ ವಿಳಂಬ ಮತ್ತು ನಕಲಿ ಅಂಕಪಟ್ಟಿ ಹಾಗೂ ಲಂಚ ಪಡೆಯುತ್ತಿರುವ ಆರೋಪ ಕೇಳಿ ಬಂದಿದ್ದವು. ಈ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಏಕಕಾಲಕ್ಕೆ  ಗುಲ್ಬರ್ಗ ವಿಶ್ವವಿದ್ಯಾಲಯ  ಮೇಲೆ ದಾಳಿ ಮಾಡಿ ಹಾಜರಿ ಪುಸ್ತಕ, ಚಲನವಲನ ರಿಜಿಸ್ಟರ್, ಕ್ಯಾಸಿಸ್ಟರ್ ಮುಂತಾದ ದಾಖಲೆಗಳನ್ನ ಪರಿಶೀಲನೆ ನಡೆಸಿದರು.

ಲೋಕಾಯುಕ್ತ. ಎಸ್. ಪಿ. ಉಮೇಶ್,  ಡಿವೈಎಸ್ಪಿ ಗೀತಾ ಬೇನಾಳ ಹಾಗೂ ಡಿವೈಎಸ್ಪಿ ಹನುಮಂತ್ ರಾಯ ಹಾಗೂ ಇನ್ಸ್ ಪೆಕ್ಟರ್ ಸಂತೋಷ್,  ಅರುಣ್ ಕುಮಾರ್, ಪೊಲೀಸ್ ಸಿಬ್ಬಂದಿಗಳು ಮುಂತಾದವರು ಇದ್ದರು.

Key words: Lokayukta, raids, Gulbarga University