ಗುಂಡ್ಲುಪೇಟೆ, ಸೆಪ್ಟಂಬರ್,25,2024 (www.justkannada.in): ಗುಂಡ್ಲುಪೇಟೆ ಶಾಸಕ ಎಚ್. ಎಂ.ಗಣೇಶ್ ಪ್ರಸಾದ್ ಅವರು ದಲಿತ ಜಮೀನಿನ ಮೇಲೆ ಅಕ್ರಮವಾಗಿ ರಸ್ತೆ ನಿರ್ಮಾಣ ಮಾಡಲು ಮುಂದಾಗಿದ್ದಾರೆಂಬ ಆರೋಪ ಕೇಳಿ ಬಂದಿದ್ದು ಈ ಹಿನ್ನೆಲೆಯಲ್ಲಿ ಇಂದು ಸ್ಥಳಕ್ಕೆ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ ಭೇಟಿ ನೀಡಿ ಪರಿಶೀಲಿಸಿದರು.
ತಾಲೂಕಿನ ದೊಡ್ಡಹುಂಡಿ ಬಳಿ ಶಾಸಕ ಎಚ್. ಎಂ.ಗಣೇಶ್ ಪ್ರಸಾದ್ ಅವರ ಕ್ರಷರ್ ಇದ್ದು, ದಲಿತ ಭೂಮಿಯಲ್ಲಿ ರಸ್ತೆ ನಿರ್ಮಾಣ ಮಾಡಿ ತೊಂದರೆ ಯಾಗಿದೆ ಎಂದು ದಲಿತರು ದೂರು ನೀಡಿದ ಹಿನ್ನಲೆ ಯಲ್ಲಿ ಹಿರಿಕಾಟಿ ಗ್ರಾಮಕ್ಕೆ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.
ಈ ವೇಳೆ ಗುಂಡ್ಲುಪೇಟೆ ತಹಸೀಲ್ದಾರ್ ರಮೇಶ್ ಬಾಬು ಬೇಗೂರು ಪೊಲೀಸರಿಗೆ ಬೆವರಿಳಿಸಿದ ಛಲವಾದಿ ನಾರಾಯಣಸ್ವಾಮಿ, ಶಾಸಕರ ಪರವಾಗಿ ನಿಲ್ಲುತ್ತಿದ್ದ ಅಧಿಕಾರಿಗಳ ವಿರುದ್ಧ ಕಿಡಿ ಕಾರಿದರು. ಕಾನೂನಿನ ಪ್ರಕಾರ ಕೆಲಸಮಾಡಿ ಅದುಬಿಟ್ಟು ಯಾರದೋ ಮುಲಾಜಿಗೆ ಒಳಗಾಗಿ ಕೆಲಸ ಮಾಡಬೇಡಿ. ಶಾಸಕರ ಒಡೆತನದ ಕ್ರಷರ್ ಗೆ ರಸ್ತೆ ಮಾಡಿರೋದರಲ್ಲಿ ಅಧಿಕಾರಿಗಳ ದುರುಪಯೋಗ ಮೇಲ್ನೋಟಕ್ಕೆ ಎದ್ದು ಕಾಣುತ್ತಿದೆ ಎಂದು ಹರಿಹಾಯ್ದರು.
ಇದೇ ವೇಳೆ ಛಲವಾದಿ ನಾರಾಯಣ ಸ್ವಾಮಿಗೆ ಮಾಜಿ ಶಾಸಕ ನಿರಂಜನ್ ಕುಮಾರ್, ಮಾಜಿ ಸಚಿವ ಎನ್ ಮಹೇಶ್ ಸೇರಿದಂತೆ ಹಲವರು ಸಾಥ್ ನೀಡಿದರು.
Key words: Gulbupete, MLA, illegal, road. Construction, Chalavadi Narayanaswamy, visits