ಅಕ್ರಮವಾಗಿ ನಾಡ ಬಂದೂಕು ತಯಾರಿಸಿ ಮಾರಾಟ; ಆರೋಪಿಗಳು ಅಂದರ್

ತುಮಕೂರು,ನವೆಂಬರ್,27,2024 (www.justkannada.in): ಅಕ್ರಮವಾಗಿ ನಾಡ ಬಂದೂಕುಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದ ಆರೋಪಿಗಳನ್ನು ತುಮಕೂರಿನ ಗುಬ್ಬಿಠಾಣಾ ಪೊಲೀಸರು ಬಂಧಿಸಿದ್ದಾರೆ.

ಮಧುಚಂದ್ರ ಟಿ.ಆ‌ರ್. ಮಧು (29) , ಶಿವಕುಮಾರ್ ಸಿ ಬಿನ್ (24) ಮಂಜುನಾಥ ಬಿನ್ ದೊಡ್ಡಯ್ಯ (39) ರವೀಶ್ ಬಿನ್ ಕರಿಯಪ್ಪ (50), ತಿಮ್ಮರಾಜ ಬಿನ್ ನಿಂಗಪ್ಪ(45) ಇಮ್ರಾನ್ ಪಾಷಾ ಬಿನ್ ಅಮೀರ್ ಜಾನ್(40) ಬಂಧಿತ ಆರೋಪಿಗಳು.

 ಘಟನೆ ವಿವರ

ದಿನಾಂಕ:12-08-2024 ರಂದು ರಾತ್ರಿ 10-30 ಗಂಟೆಗೆ ಗುಬ್ಬಿ ತಾಲ್ಲೂಕು ತಿಪೂರು ಗ್ರಾಮದ ವಾಸಿಗಳಾದ ಆರೋಪಿ ಮಧುಚಂದ್ರ & ಶಿವ ಕುಮಾರ್  ಻ವರು ಅಕ್ರಮವಾಗಿ ಯಾವುದೇ ಲೈಸೆನ್ಸ್ ಇಲ್ಲದ ನಾಡ ಬಂದೂಕಿನೊಂದಿಗೆ ಬೇಟೆಗೆ ಬಂದಾಗ ಚೈತ್ರ ಎಂಬುವವರ ಪತಿ ದರ್ಶನ್ ಆಕ್ಷೇಪಿಸಿದ್ದು,  ಬಂದೂಕು ಕೆಳಗೆ ಬಿದ್ದು ಪೈರ್ ಆಗಿ ಚೈತ್ರ ರವರಿಗೆ ಗಾಯ ಆಗಿತ್ತು. ಈ ಮಧ್ಯೆ ಚೈತ್ರ ಅವರ ಹೇಳಿಕೆ ಮೇರೆಗೆ ಗುಬ್ಬಿ ಪೊಲೀಸ್ ಠಾಣೆ ಮೊ.ನಂ.301/2024 ಕಲಂ 3 & 25 ಆರ್ಮ್ಸ್ ಆಕ್ಟ್ ಮತ್ತು 125(ಎ) ಬಿಎಸ್ ರೀತ್ಯಾ ಪ್ರಕರಣದ ದಾಖಲು ಮಾಡಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದರು.

ತನಿಖಾ ವೇಳೆ ತುಮಕುರು ಜಿಲ್ಲೆಯಲ್ಲಿ 25-30 ಸಾವಿರ ರೂ ಗಳಿಗೆ ಅಕ್ರಮ ಬಂದೂಕು ತಯಾರಿಸಿ ಮಾರಾಟ ಮಾಡುತ್ತಿರುವ ಜಾಲ ಸಕ್ರಿಯವಾಗಿರುವ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಕೆ.ವಿ ಆಶೋಕ್ ಐಪಿಎಸ್ ರವರು. ತುಮಕೂರು ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ವಿ.ಮರಿಯಪ್ಪ ಮತ್ತು ಬಿ.ಎಸ್. ಅಬ್ದುಲ್ ಖಾದರ್ ರವರ ಮಾರ್ಗದರ್ಶನದಲ್ಲಿ ಸಿರಾ ಉಪವಿಭಾಗದ ಡಿವೈ.ಎಸ್.ಪಿ ಬಿ.ಕೆ. ಶೇಖರ್ ರವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿತ್ತು.

ಕಾರ್ಯಾಚರಣೆಯಲ್ಲಿ  ಗುಬ್ಬಿ ವೃತ್ತದ ಸಿಪಿಐ ಗೋಪಿನಾಥ್, ಗುಬ್ಬಿ ಪೊಲೀಸ್ ಠಾಣೆಯ ಪಿಎಸ್ ಐ ಸುನೀಲ್ ಕುಮಾರ್ ಜಿ.ಕೆ. ಹಾಗೂ ಸಿಬ್ಬಂದಿಗಳಾದ ನವೀನ್ ಕುಮಾರ್, ವಿಜಯಕುಮಾರ್ ಜ್ಞಾನಾನಂದ. ಮಧುಸೂಧನ, ಭೂತರಾಜು, ನಾಗರಾಜು, ಎ.ಆರ್.ಎಸ್.ಐ ಮಂಜುನಾಥ ಅವರು ಮತ್ತು ಜಿಲ್ಲಾ ಪೊಲೀಸ್ ಕಛೇರಿಯ ತಾಂತ್ರಿಕ ವಿಭಾಗದ ನರಸಿಂಹರಾಜು ಹಾಗೂ ದುಷ್ಯಂತ್  ಅವರು ಪಾಲ್ಗೊಂಡು  ಆರೋಪಿಗಳನ್ನು ದಸ್ತಗಿರಿ ಮಾಡಿ ಆರೋಪಿಗಳ ಕಡೆಯಿಂದ ಯಾವುದೇ ಲೈಸೆನ್ಸ್ ಇಲ್ಲದೇ ಅಕ್ರಮವಾಗಿ ಹೊಂದಿದ್ದ ಬಂದೂಕುಗಳನ್ನು ವಶಕ್ಕೆ ಪಡೆದಿದ್ದಾರೆ.

ಬಂಧಿತ ಆರೋಪಿಗಳಿಂದ ಅಕ್ರಮವಾಗಿ ಹೊಂದಿದ್ದ ಒಟ್ಟು 04 ಬಂದೂಕುಗಳು, ಬಂದೂಕಿನ ಬಿಡಿಭಾಗಗಳು ಹಾಗೂ ಸದರಿ ಬಂದೂಕುಗಳನ್ನು ತಯಾರಿಸಲು ಬೇಕಾಗಿದ್ದ ಉಪಕರಣಗಳು ಮತ್ತು ಕಚ್ಚಾ ಸಾಮಾಗ್ರಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಬಂದೂಕುಗಳನ್ನು ಖರೀದಿ ಮಾಡಿದವರು ಕಾಡು ಪ್ರಾಣಿಗಳನ್ನು ಬೇಟೆಯಾಡಲು ಉಪಯೋಗಿಸುತ್ತಿದ್ದುದಾಗಿ ತಿಳಿದುಬಂದಿದೆ.

Key words: Illegally, selling, Gun, accused, arrested