ಬೆಂಗಳೂರು, ಸೆಪ್ಟೆಂಬರ್,19,2020(www.justkannada.in) :ಗೋವಾಗೆ ತೆರಳಲು ದೇವನಹಳ್ಳಿ ಏರ್ ಪೋರ್ಟ್ ಆಗಮಿಸಿದ್ದ ಮಾಜಿ ಸಚಿವ ಆನಂದ್ ಅಸ್ನೋಟಿಕರ್ ಅವರ ಲಗೇಜ್ ನಲ್ಲಿ ಗನ್ ಪತ್ತೆಯಾದ ಹಿನ್ನೆಲೆ ಅವರನ್ನು ವಿಮಾನ ನಿಲ್ದಾಣ ಭದ್ರತಾ ಸಿಬ್ಬಂದಿ ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ.
ಬೆಂಗಳೂರಿನಿಂದ ಇಂಡಿಗೋ ವಿಮಾನದಲ್ಲಿ ಬೆಳಗ್ಗೆ 11ಕ್ಕೆ ಗೋವಾಕ್ಕೆ ತೆರಳುವುದಕ್ಕೆ ಮಾಜಿ ಸಚಿವ ಆನಂದ್ ಅಸ್ನೋಟಿಕರ್ ದೇವನಹಳ್ಳಿ ಏರ್ ಪೋರ್ಟ್ ಗೆ ಆಗಮಿಸಿದದ್ದರು. ಈ ಸಂದರ್ಭದಲ್ಲಿ ಲಗೇಜ್ ಪರಿಶೀಲಿಸುವ ವೇಳೆ ಗನ್ ಪತ್ತೆಯಾಗಿದೆ. ಹೀಗಾಗಿ, ಸಿಐಎಸ್ಎಫ್ ಭದ್ರತಾ ಸಿಬ್ಬಂದಿ ಆನಂದ್ ಅಸ್ನೋಟಿಕರ್ ಅವರನ್ನು ವಶಕ್ಕೆ ಪಡೆದು ವಿಚಾರಣೆಗೆ ನಡೆಸಿದ್ದಾರೆ.
ಈ ವೇಳೆ ಮಾಜಿ ಸಚಿವ ಆನಂದ್ ಅಸ್ನೋಟಿಕರ್ ಗನ್ ಗೆ ಲೇಸೆನ್ಸ್ ಹೊಂದಿರುವುದಾಗಿ ತಿಳಿಸಿದ್ದಾರೆ ಎನ್ನಲಾಗಿದೆ.
key words ; Gun-found-luggage-former minister-Anand Asnotekar-Inquiries-air port-staff