ನನ್ನ ಕೆಲಸಕ್ಕೆ ಸರ್ಟಿಫಿಕೇಟ್ ಕೊಡುವ ಅಗತ್ಯವಿಲ್ಲ- ‘ಕೈ’ ನಾಯಕರಿಗೆ ಹೆಚ್.ಡಿಡಿ ಟಾಂಗ್

ಬೆಂಗಳೂರು,ಡಿಸೆಂಬರ್,7,2024 (www.justkannada.in):  ಹಾಸನದಲ್ಲಿ ಜನ ಕಲ್ಯಾಣ ಸಮಾವೇಶ ನಡೆಸಿ ತಮ್ಮ ವಿರುದ್ದ ಗುಡುಗಿದ್ದ ಕಾಂಗ್ರೆಸ್ ನಾಯಕರಿಗೆ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು ತಿರುಗೇಟು ನೀಡಿದ್ದಾರೆ.

ಈ ಕುರಿತು ಮಾಧ್ಯಮದ ಜೊತೆ ಮಾತನಾಡಿರುವ ಹೆಚ್.ಡಿ ದೇವೇಗೌಡರು,  ನಾವು ಸೋತಿದ್ದೇವೆ ನಿಜ ಆತಂಕ ಪಡುವ ಅಗತ್ಯವಿಲ್ಲ. ನನ್ನ ಕೆಲಸಕ್ಕೆ ಕಾಂಗ್ರೆಸ್ ಸರ್ಟಿಫಿಕೇಟ್ ಕೊಡುವ ಅಗತ್ಯವಿಲ್ಲ.   ನಮ್ಮನ್ನ ಸೋಲಿಸಿದ ಪುಣ್ಯಾತ್ಮರೇ ಗೆಲ್ಲಿಸುತ್ತಾರೆ ಎಂದರು.

ದೇವೇಗೌಢರ ಕುಟುಂಬ ಮುಗಿಸುತ್ತೇವೆ ಎಂದರು.  ನಮ್ಮನ್ನ ಮುಗಿಸಲು ಕಾಂಗ್ರೆಸ್ ಗೆ ಆಯ್ತಾ? ಸಿದ್ದರಾಮಯ್ಯಗೆ ನಾಚಿಕೆ ಆಗಬೇಕು ಎಂದು ಹೆಚ್ ಡಿಡಿ  ಕಿಡಿಕಾರಿದರು.

ಮೈತ್ರಿ ಮುಂದುವರಿಕೆ ಕುರಿತು ಪ್ರತಿಕ್ರಿಯಿಸಿದ ಹೆಚ್ ಡಿ ದೇವೇಗೌಡರು, ಎನ್ ಡಿಎ ಮೈತ್ರಿಯಲ್ಲಿ ಬದಲವಾಣೆ ಇಲ್ಲ ಎಂದರು.

Key words:  certificate, my work – H.D.Devegowda, Congress leaders