ಬೆಂಗಳೂರು, ಜನವರಿ,7,2025 (www.justkannada.in): ಡಿಸಿಎಂ ಡಿಕೆ ಶಿವಕುಮಾರ್ ಅವರು ವಿದೇಶ ಪ್ರವಾಸದಲ್ಲಿದ್ದ ವೇಳೆ ಸಚಿವ ಸತೀಶ್ ಜಾರಕಿಹೊಳಿ ನಿವಾಸದಲ್ಲಿ ನಡೆದ ಡಿನ್ನರ್ ಮೀಟಿಂಗ್ ವಿಚಾರಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಬಗ್ಗೆ ವಿಧಾನಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಟೀಕಿಸಿದ್ದಾರೆ.
ಈ ಕುರಿತು ಮಾತನಾಡಿರುವ ಹೆಚ್.ವಿಶ್ವನಾಥ್, ಡಿನ್ನರ್ ಮೀಟಿಂಗ್ ರುವಾರಿಯೇ ಸಿಎಂ ಸಿದ್ದರಾಮಯ್ಯ ಆಗಿದ್ದಾರೆ. ಔತಣಕೂಟ ಏರ್ಪಾಡು ಮಾಡುತ್ತಿರುವುದೇ ಸಿದ್ದರಾಮಯ್ಯ. 30 ತಿಂಗಳು ಆದ ಮೇಲೆ ಇಳಿಯಬೇಕಲ್ಲಾ, ಅದಕ್ಕೆ ಸುಮ್ಮನೆ ಏನೇನೊ ಆಟ ಆಡ್ತಿದ್ದಾರೆ ಎಂದರು.
ಡಿಕೆ ಶಿವಕುಮಾರ್ ಗೆ ಯಾವುದೇ ಕಾರಣಕ್ಕೂ ತಪ್ಪಿಸೋಕೆ ಆಗಲ್ಲ. ಡಿ.ಕೆ ಶಿವಕುಮಾರ್ ಕಾಂಗ್ರೆಸ್ ನಲ್ಲಿ 40 ವರ್ಷದಿಂದ ಇದ್ದಾರೆ. ಅವರು ಯಾವುದೇ ಊರಿಗೆ ಹೋದರೂ ಕಾರ್ಯಕರ್ತರನ್ನ ಗುರುತಿಸುತ್ತಾರೆ. ಆ ಕಾರ್ಯಕರ್ತರು ಈ ಸಿದ್ದರಾಮಯ್ಯಗೆ ಗೊತ್ತೇ ಇಲ್ಲ. ಸಿದ್ಧರಾಮಯ್ಯ ಚಮಚ, ಚೇಲಾಗಳನ್ನ ಜೊತೆಗೆ ಇಟ್ಟುಕೊಂಡು ತಿರುಗಾಡುತ್ತಿದ್ದಾರೆ ಎಂದು ಹೆಚ್.ವಿಶ್ವನಾಥ್ ಗುಡುಗಿದರು.
Key words: Dinner meeting, Siddaramaiah, H. Vishwanath