ಮೈಸೂರು, ಮಾ.೦೮,೨೦೨೫: ನೀವು ರಾಜ್ಯದ ಜನರನ್ನ ಮೂರ್ಖರನ್ನಾಗಿಸಲು ಆಗಲ್ಲ. ನಿಮ್ಮನ್ನ ಇಷ್ಟು ಬೆಳೆಸಲು ಕಾರಣ ಯಾರು. ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ್ರು, ಮೊದಲಿಗೆ ಹಣಕಾಸು ಸಚಿವರನ್ನಾಗಿ ಮಾಡಿದ್ದು ದೇವೇಗೌಡ್ರು. ಆದರೂ ಎಲ್ಲೂ ದೇವೇಗೌಡರಿಗೆ ಒಂದು ಕೃತಜ್ಞತೆ ಸಲ್ಲಿಸಿಲ್ಲ. ಕೃತಜ್ಞತೆ ಇಲ್ಲದ ರಾಜಕಾರಣಿ ಸಿದ್ದರಾಮಯ್ಯ.
ರಾಜ್ಯ ಸರ್ಕಾರದ ಬಜೆಟ್ ಕುರಿತು ಎಂಎಲ್ಸಿ ವಿಶ್ವನಾಥ್ ಶನಿವಾರ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದರು.
ಸಿಎಂ ಮಂಡಿಸಿದ ಬಜೆಟ್ ನಲ್ಲಿ ಬಜೆಟ್ ಗಾತ್ರ ಪುಟ ವರ್ಷ ವರ್ಷಕ್ಕೂ ದಪ್ಪದಾಗುತ್ತಿದೆ. 178 ಪುಟ 3.15 ನಿಮಿಷ ಬಜೆಟ್ ಓದಿದ್ದಾರೆ. ರಾಹುಕಾಲ ಆರಂಭ ಆಗುತ್ತೆ ಅಂತ ಬೇಗ ಆರಂಭಿಸಿದ್ರು. ಸಿದ್ದರಾಮಯ್ಯ ಹೇಳೋದೊಂದು ಮಾಡೋದೊಂದು.
ಕಳೆದ ವರ್ಷದ ಬಜೆಟ್ ಹಣ ಬಜೆಟ್ ಎಲ್ಲೆಲ್ಲಿ ಖರ್ಚು ಮಾಡಿದ್ರಿ, ಯಾವ ಯಾವ ಕ್ಷೇತ್ರ ಎಷ್ಟು ಅಭಿವೃದ್ಧಿ ಆಯಿತು ಅಂತ ಹೇಳಿ. ಇನ್ನೂ 80 ಸಾವಿರ ಕೋಟಿ ಕಳೆದ ಸಾಲಿನ ಹಣ ಬಿಡುಗಡೆ ಆಗಬೇಕು. ಈಗ 4 ಲಕ್ಷಕ್ಕೂ ಮೀರಿದ ಬಜೆಟ್ ಮಂಡಿಸಿದ್ದೀರಾ. ? ಎಲ್ಲಿದೆ ನಿಮಗೆ ಹಣ.? ಯಾರನ್ನ ಮೂರ್ಖರನ್ನಾಗಿಸುತ್ತಿದ್ದೀರಾ.? 16 ಸಾರಿ ಬಜೆಟ್ ಮಂಡಿಸಿದ್ದೀರಾ ಅದರಲ್ಲಿ ಹೊಸತನ ಏನಿದೆ. ಸುಧಾರಣೆಗಾಗಿ ಬದಲಾವಣೆ ಏನಿದೆ.? ಇದೊಂದು ಕಟ್ ಅಂಡ್ ಪೇಸ್ಟ್ ಬಜೆಟ್ ಎಂದು ಟೀಕಿಸಿದ ವಿಶ್ವನಾಥ್.
ಮೈಸೂರಿಗೆ ಏನ್ ಕೊಟ್ಟಿದ್ದೀರಾ.?
ನಿಮ್ಹಾನ್ಸ್ ಯೋಜನೆ ಹೊಸ ಯೋಜನೆ ಅಲ್ಲ. ಬಾಂಬ್ ನಿಷ್ಕ್ರೀಯ ದಳ ಹೊಸದೇನಲ್ಲ. ಫಿಲಂ ಸಿಟಿ ಎಷ್ಟು ವರ್ಷಗಳಿಂದ ಹೇಳ್ತಾ ಇದ್ದೀರಿ. ರೇಷ್ಮೆ ಬೆಳೆಗಾರರಿಗೆ ಉತ್ತೇಜನ ನೀಡದೆ ರೇಷ್ಮೆ ಮಾರುಕಟ್ಟೆ ತೆರೆದು ಏನು ಮಾಡುತ್ತೀರಾ? ಸುಮ್ಮನೆ ಬಜೆಟ್ ಪುಟ ತುಂಬಿಸಲು ಹಳೆ ಯೋಜನೆಗಳನ್ನ ಇಲ್ಲಿಗೂ ಸೇರಿಸಿದ್ದಾರೆ. ಹೇಳಿದ್ದೇ ಹೇಳಿದ್ದಾರೆ ಅಷ್ಟೇ.
ಕಾಂಗ್ರೆಸ್ ಕಟ್ಟಿ ಬೆಳೆಸಿದ್ದು ನಾವು, ನಾವು ಬೆಳೆದ ಮನೆಯಲ್ಲಿ ಕೂತಿದ್ದೀರಾ. ನಿಮ್ಮನ್ನ ಕರೆದುಕೊಂಡು ಬಂದಿದ್ದು ನಾವು. ನಿಮ್ಮ ಬಜೆಟ್ ನಲ್ಲಿ ಹಿಂದು ಮುಸ್ಲಿಂ ಸಮುದಾಯವನ್ನ ಬೇರ್ಪಡಿಸುವ ಕೆಲಸ ಮಾಡಿದ್ದೀರಾ.? ಇದು ಬೇಕಿತ್ತಾ.? 16 ಮುಸ್ಲಿಂ ಹೆಣ್ಣು ಮಕ್ಕಳ ಕಾಲೇಜು ಕೊಟ್ಟಿದ್ದೀರಾ ಇದು ಬೇಕಿತ್ತಾ.? ಹಿಂದೂ ಮುಸ್ಲಿಮರ ವಿಭಜಮೆ ಮಾಡುವ ಕೆಲಸ ಸಿದ್ದರಾಮಯ್ಯ ಮಾಡಿದ್ದಾರೆ. ಮೋದಿ ಸಬ್ ಕಾ ಸಾತ್ ಸಬ್ ಕಾ ವಿಕಾಸ್ ಎನ್ನುತ್ತಾರೆ. ಕಾಂಗ್ರೆಸ್ ನ ವಿಶಾಲ ಮನೋಭಾವನೆಯನ್ನ ಸಂಕುಚಿತ ಮಾಡಿಬಿಟ್ರು ಸಿದ್ದರಾಮಯ್ಯ.
ಬಿಜೆಪಿಯವರು ಇದು ಸಾಬರ ಬಜೆಟ್, ಹಲಾಲ್ ಬಜೆಟ್ ಅಂತಾರೆ. ಇದಕ್ಕೆಲ್ಲ ಕಾರಣ ಯಾರು..? ನೀವು . ಕುಲ ಕಸುಬಿಗೆ ಆದ್ಯತೆ ಕೊಟ್ಟಿಲ್ಲ, ಕುರಿನ ಬರಿ ಕುರುಬರೇ ಸಾಕಲ್ಲ. ಗ್ರಾಮೀಣ ಭಾಗದಲ್ಲಿ ಎಲ್ಲ ಸಮುದಾಯವರು ಸಾಕ್ತಾರೆ.
ಗ್ಯಾರಂಟಿ ಯೋಜನೆ ಹೆಸರಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿಬಿಟ್ರಿ. ಸ್ಟ್ಯಾಂಪ್ ಡ್ಯೂಟಿ ಹೆಚ್ಚು ಮಾಡಿದ್ರಿ ,ಮದ್ಯಪಾನ ಬೆಲೆ ಏರಿಕೆ ಮಾಡಿದ್ರಿ, 40 ಸಾವಿರ ಕೋಟಿ ಅಬಕಾರಿ ತೆರಿಗೆಯಿಂದ ಸಂಗ್ರಹ ಮಾಡುವ ಗುರಿ ಹೊಂದಿದ್ದಾರೆ.
ಸಾಮಾಜಿಕ ಸ್ವಾಸ್ಥ್ಯವನ್ನೇ ಹಾಳು ಮಾಡುವ ಕೆಲಸ ಸಿಎಂ ಸಿದ್ದರಾಮಯ್ಯ ಮಾಡುತ್ತಿದ್ದಾರೆ. ಬಜೆಟ್ ಕುರಿತು ಸಿಎಂ ಸಿದ್ದರಾಮಯ್ಯ ಮೇಲೆ ಕಿಡಿ ಕಾರಿದ ವಿಶ್ವನಾಥ್.
ಜನರಿಗೆ ಹೆಂಡ ಸರಾಯಿ ಕುಡಿಸಿ ರಾಜ್ಯವನ್ನ ಸರ್ವನಾಶ ಮಾಡಲಿಕ್ಕೆ ಹೊರಟಿದ್ದಾರೆ. ಕರೆಂಟ್ ಫ್ರೀ ಮೀಟರ್ ಅಳವಡಿಸಲು 5 ಸಾವಿರ ಕೊಡಬೇಕಂತೆ. ಒಂದು ಕಡೆ ಬಾಯಲ್ಲಿ ಫ್ರೀ ಅಂತಾರೆ ಇನ್ನೊಂದು ಕಡೆ ಕಿತ್ತುಕೊಳ್ಳುತ್ತಿಸ್ದಾರೆ. ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿ ಜನರ ಬದುಕು ಸಂಕಷ್ಟವಾಗಿದೆ. ಇಡೀ ಸಮಾಜದ ಸ್ವಾಸ್ಥ್ಯ ಕದಡುವ ಕೆಲಸ ಮಾಡುತ್ತಿದ್ದೀರಾ.
ಪ್ರತ್ಯೇಕತಾ ಮನೋಭಾವಕ್ಕೆ ನಾಂದಿ ಹಾಡುತ್ತಿದ್ದೀರಾ.? ಕುರುಬರಿಗೆ ಏನು ಮಾಡಿದ್ರಿ.? ಛೇ ….ಛೇ..ಥು..ಥೂ… ಎಂದು ಸುದ್ದಿ ಗೋಷ್ಠಿಯ ಮೂಲಕ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ.
key words: “cut and paste” budget, MLC ,Adagur H. Vishwanath, Mysore
It’s a “cut and paste” budget: MLC Adagur H. Vishwanath’s comments