ಮೈಸೂರು,ಅ,16,2019(www.justkannada.in): ನಾನು ಬಿಜೆಪಿಗೆ ಮಾರಾಟವಾಗಿದ್ದೀನಿ ಎಂದು ಆರೋಪಿಸಿರುವ ನೀವು ನನ್ನನ್ನು ಕೊಂಡುಕೊಂಡವನನ್ನ ಚಾಮುಂಡಿಬೆಟ್ಟಕ್ಕೆ ಕರೆ ತನ್ನಿ ನೋಡೋಣ ಎಂದು ಅನರ್ಹ ಶಾಸಕ ಹೆಚ್.ವಿಶ್ವನಾಥ್ ಹಾಕಿದ್ದ ಸವಾಲನ್ನ ಮಾಜಿ ಸಚಿವ ಸಾ.ರಾ ಮಹೇಶ್ ಸ್ವೀಕರಿಸಿದ್ದಾರೆ.
ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಆಣೆ ಪ್ರಮಾಣಕ್ಕೆ ಪಂಥಾಹ್ವಾನ ವಿಚಾರ ಕುರಿತು ಮಾತನಾಡಿದ ಸಾ.ರಾ ಮಹೇಶ್, ನಾಳೆ ಬೆಳಿಗ್ಗೆ 9 ಗಂಟೆಗೆ ನಾನು ಚಾಮುಂಡಿ ಬೆಟ್ಟಕ್ಕೆ ಬರುತ್ತೇನೆ. ನಾನು ಆಸೆ, ಆಮಿಷ, ಹಣದಾಸೆಗೆ ಬಲಿಯಾಗಿಲ್ಲ ಅಂತ ವಿಶ್ವನಾಥ್ ಪ್ರಮಾಣ ಮಾಡಲಿ. ಅವರು ಪ್ರಮಾಣ ಮಾಡಿದರೆ ನಾನು ರಾಜ್ಯದ ಜನತೆಯ ಬೇಷರತ್ ಕ್ಷಮೆಯಾಚಿಸುತ್ತೇನೆ. ನೀವು ಬರುವಾಗ ನಿವೃತ್ತ ಪತ್ರಕರ್ತರ ಮರಂಕಲ್ ಅವರನ್ನು ಕರೆದುಕೊಂಡು ಬನ್ನಿ. ಅವರಿಗೂ ಕೆಲ ವಿಚಾರಗಳು ಗೊತ್ತಿವೆ. ಅವರ ಮುಂದೆ ಚಾಮುಂಡಿ ತಾಯಿ ಬಳಿ ಪ್ರಮಾಣ ಮಾಡಲಿ. ಚಾಮುಂಡಿ ಪಾದ ಬೇಡ ಗೋಪುರದ ಬಳಿಯೇ ಪ್ರಮಾಣ ಮಾಡಲಿ ಎಂದು ಹೇಳಿದರು.
ಕೇವಲ ದುಡ್ಡಿನ ವಿಚಾರವಲ್ಲ, ನನ್ನ ವೈಯುಕ್ತಿಕ ಟೀಕೆಗಳು ಸತ್ಯ ಎಂದು ಪ್ರಮಾಣ ಮಾಡಿ. ರಿಯಲ್ ಎಸ್ಟೇಟ್ ಹೊರತುಪಡಿಸಿ ಬೇರಾವುದೇ ಮೂಲದಿಂದ ನಾನು ಹಣ ಸಂಪಾದನೆ ಮಾಡಿಲ್ಲ. ಆದರೆ ಅವರು ಮಾಡಿರುವ ನನ್ನ ವೈಯುಕ್ತಿಕ ಟೀಕೆಗಳನ್ನು ಸಾಬೀತು ಮಾಡಲಿ ಎಂದು ಸಾ.ರಾ ಮಹೇಶ್ ಪ್ರತಿ ಸವಾಲು ಹಾಕಿದರು.
ಡಿವೈಎಸ್ಪಿ ಸುಂದರ್ ರಾಜ್ ವರ್ಗಾವಣೆಗೆ ಎಷ್ಟು ಹಣ ಪಡೆದುಕೊಂಡಿದ್ದೀರಿ ಎಂದು ಗೊತ್ತಿದೆ. ವಿಶ್ವನಾಥ್ ಒಳ್ಳೆಯವರಲ್ಲ, ನಂಬಿಕೆಗೆ ಅರ್ಹರಲ್ಲ ಎಂದು ಜಿ.ಟಿ.ದೇವೇಗೌಡ ಹೇಳಿದ್ದರು. ಅವರನ್ನು ಮನವೊಲಿಸಿ ವಿಶ್ವನಾಥ್ ಅವರನ್ನು ಜೆಡಿಎಸ್ಗೆ ಕರೆತಂದೆ. ಹುಣಸೂರಿನ ಜನತೆಗೆ ಮೋಸ ಮಾಡಿ ಹೋಗಿದ್ದೀರಿ ಎಂದು ಹೆಚ್. ವಿಶ್ವನಾಥ್ ವಿರುದ್ಧ ಸಾ.ರಾ.ಮಹೇಶ್ ಹರಿಹಾಯ್ದರು.
ದೇವರಾಜ ಅರಸು ಬಗ್ಗೆ ವಿಶ್ವನಾಥ್ ಇವತ್ತು ಮಾತನಾಡುತ್ತಾರೆ. ಅವತ್ತು ಅವರ ಮೊಮ್ಮಗ ಚುನಾವಣೆ ಬಂದಾಗ ಅವರನ್ನ ಹೇಗೆ ನಡೆಸಿಕೊಂಡಿದ್ರಿ ಅಂತ ಯೋಚನೆ ಮಾಡಿ. ಹುಣಸೂರಿನಲ್ಲಿ ಈ ಜಿಲ್ಲೆಯವರಂತು ಸ್ಪರ್ಧೆ ಮಾಡಲ್ಲ. ಹೊರ ಜಿಲ್ಲೆಯವರು ಬಂದು ಸ್ಪರ್ಧೆ ಮಾಡ್ತಾರೆ. ಅದಕ್ಕೆ ಬೇರೆ ಬೇರೆ ರೀತಿಯ ಒಪ್ಪಂದ ಆಗಿದೆ. ಆ ಒಪ್ಪಂದ ಏನ್ ಆಗಿದೆ ಅನ್ನೋದನ್ನ ಹೇಳೋಕೆ. ವಿಶ್ವನಾಥ್ ಅವ್ರು ಮತ್ತೆ ದೇವರ ಮುಂದೆ ಬರಬೇಕು ಎಂದು ಹೇಳಿದರು.
ನಾನು ಕೆ.ಆರ್.ನಗರದ ಮಾಲೀಕ ಅಲ್ಲ. ನಾನು ಕೆ.ಆರ್.ನಗರದ ಸೇವಕ. ಹಾಗಾಗಿ ಅಲ್ಲಿನ ಜನ ನನ್ನ 3ಬಾರಿ ಆಯ್ಕೆ ಮಾಡಿದ್ದಾರೆ. ನೀವು ಗೆದ್ದಾಗ ಮಾಲೀಕರಂತೆ ನಡೆದುಕೊಂಡಿದ್ರಿ. ಅದಕ್ಕೆ ಅಲ್ಲಿನ ಜನ ನಿಮ್ಮನ್ನ ಓಡಿಸಿದ್ದಾರೆ. ಮಾಲೀಕ ಸೇವಕ ಯಾರೆಂದು ಜನರ ನೋಡಿದ್ದಾರೆ ಎಂದು ಹೆಚ್.ವಿಶ್ವನಾಥ್ ಗೆ ಸಾ.ರಾ ಮಹೇಶ್ ಟಾಂಗ್ ನೀಡಿದರು.
ಹುಣಸೂರಿನಲ್ಲಿ ವಿಶ್ವನಾಥ್ ಅಭ್ಯರ್ಥಿ ಆಗಲ್ಲ: ಅದಕ್ಕಞೂ ಒಳ ಒಪ್ಪಂದ ಆಗಿದೆ…
ಹುಣಸೂರಿನಲ್ಲಿ ವಿಶ್ವನಾಥ್ ಅಭ್ಯರ್ಥಿ ಆಗಲ್ಲ. ಅವರ ಕುಟುಂಬಸ್ಥರಲ್ಲು ಯಾರು ಅಭ್ಯರ್ಥಿ ಆಗೋಲ್ಲ. ಅದಕ್ಕು ಒಳ ಒಪ್ಪಂದ ಆಗಿದೆ ಎಂದು ಹೊಸ ಬಾಂಬ್ ಸಿಡಿಸಿದ ಮಾಜಿ ಸಚಿವ ಸಾ.ರಾ.ಮಹೇಶ್, ವಿಶ್ವನಾಥ್ ಕುಟುಂಬಸ್ಥರಿಂದ ಯಾರು ಸ್ಪರ್ಧೆ ಮಾಡೋಲ್ಲ. ಆದ್ರೂ ನ್ಯಾಯಾಲಯದ ಆದೇಶ ಬಂದರೆ. ಅವರೇ ಮೈಸೂರು ಉಸ್ತುವಾರಿ ಸಚಿವಾರಾಗ್ತಾರೆ, ಇದಂತು ಸತ್ಯ ಎಂದು ತಿಳಿಸಿದರು.
Key words: H.Vishwanath challenge – former minister- sa.ra Mahesh-mysore-Chamundi hills