ಮೈಸೂರು,ಜೂ,20,2019(www.justkannada.in): ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ವಿಶ್ವನಾಥ್ ರಾಜ್ಯ ಸಮ್ಮಿಶ್ರ ಸರ್ಕಾರದ ವಿರುದ್ದ ಬೇಸರ ವ್ಯಕ್ತಪಡಿಸಿರುವ ಕುರಿತು ಪ್ರತಿಕ್ರಿಯಿಸಿದ ಸಚಿವ ಸಾ.ರಾ ಮಹೇಶ್, ವಿಶ್ವನಾಥ್ ಮಾರ್ಗದರ್ಶನ ಮತ್ತು ಸಲಹೆಯನ್ನು ಸಿಎಂ ಮತ್ತು ಎಲ್ಲಾ ಸಚಿವರು ಬಳಸಿಕೊಳ್ಳಲಿ ಎಂದು ತಿಳಿಸಿದರು.
ಮೈಸೂರಿನಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಸಚಿವ .ಸಾ. ರಾ. ಮಹೇಶ್, ಶಿಕ್ಷಣ ಖಾತೆ ನಿರ್ವಹಿಸಿದ ವಿಶ್ವನಾಥ್ ರಿಂದ ಸಿಎಂಗೆ ಒಳ್ಳೆಯ ಸಲಹೆ ಮಾರ್ಗದರ್ಶನ ಸಿಗುತ್ತದೆ. ಹೀಗಾಗಿ ಎಲ್ಲರೂ ಅವರ ಮಾರ್ಗದರ್ಶನ ಸಲಹೆ ಪಡೆದುಕೊಳ್ಳಬೇಕು. ವಿಶ್ವನಾಥ್ ಅವರ ಮಾತುಗಳನ್ನ ಬೇರೆ ಅರ್ಥದಲ್ಲಿ ನೋಡುವುದು ಬೇಡ. ಅವರ ಮಾತುಗಳು ಟೀಕೆ ಅಲ್ಲ, ಅವು ಸಲಹೆಗಳು. ಅದನ್ನು ನಾವು ಪಡೆದುಕೊಳ್ಳುತ್ತೇವೆ ಇನ್ನು ಹೆಚ್. ವಿಶ್ವನಾಥ್ ಅವರ ಆರೋಗ್ಯ ದೃಷ್ಟಿಯಿಂದ ಅವರು ರಾಜ್ಯಾಧ್ಯಕ್ಷ ಸ್ಥಾನ ಬೇಡ ಎಂದಿದ್ದಾರೆ. ನಾವು ನೀವೇ ಇರಬೇಕು ಎಂದು ಹೇಳಿದ್ದೇವೆ ಎಂದರು.
ಇದೇ ವೇಳೆ ಮಾತನಾಡಿದ ಸಚಿವ ಜಿ.ಟಿ ದೇವೇಗೌಡ, ವಿಶ್ವನಾಥ್ ಜೊತೆಗೆ ನಾನು ಸಾ.ರಾ.ಮಹೇಶ್ ದೂರವಾಣಿಯಲ್ಲಿ ಮಾತನಾಡುತ್ತೇವೆ. ಅವರು ಯಾವ ಅರ್ಥದಲ್ಲಿ ಏನು ಮಾತನಾಡಿದ್ದಾರೆ ಎಂಬುದು ಗೊತ್ತಿಲ್ಲ. ವಿಶ್ವನಾಥ್ ಗೂ ಸಾ.ರಾ.ಮಹೇಶ್ ನಡುವೆ ಭಿನ್ನಾಭಿಪ್ರಾಯ ಇದೆ ಎಂದು ಕೆಲವರು ಸುದ್ದಿ ಹರಡಿಸಿದ್ದರು. ಆ ಸುದ್ದಿಗಳೆಲ್ಲ ಸುಳ್ಳು. ಅವರು ರಾಜ್ಯಾಧ್ಯಕ್ಷರಾಗಿ ಇರಬೇಕು ಎಂದು ಕೇಳಿಕೊಳ್ಳುತ್ತೇವೆ ಎಂದು ತಿಳಿಸಿದರು.
Key words: H. Vishwanath – displeasure -against – coalition government-sa.ra Mahesh-reaction