ಮೈಸೂರು,ಏಪ್ರಿಲ್,6,2024 (www.justkannada.in): ಸಮ್ಮಿಶ್ರ ಸರ್ಕಾರದ ಪತನಕ್ಕೆ ವೇಳೆ ಮಾಜಿ ಸಚಿವ ಹೆಚ್.ವಿಶ್ವನಾಥ್ ಮತ್ತು ಜೆಡಿಎಸ್ ನಾಯಕರ ನಡುವೆ ಉಂಟಾಗಿದ್ದ ಸಂಘರ್ಷ ಇದೀಗ ತಣ್ಣಗಾಗಿದ್ದು ಸ್ವತಃ ಹೆಚ್.ಡಿ ಕುಮಾರಸ್ವಾಮಿ ಅವರೇ ಇಂದು ಕೆ.ಆರ್ ನಗರದ ಹೆಚ್.ವಿಶ್ವನಾಥ್ ಮನೆಗೆ ಭೇಟಿ ನೀಡಿ ಚರ್ಚೆ ನಡೆಸಿದ್ದಾರೆ.
ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆಗಿಳಿದಿರುವ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಗೆಲ್ಲಲೇ ಬೇಕೆಂದು ಪಣ ತೊಟ್ಟಿದ್ದು ಈ ನಡುವೆ ಇಂದು ಕೆ.ಆರ್ ನಗರದಲ್ಲಿ ಬಿಜೆಪಿ ಎಂಎಲ್ ಸಿ ಹೆಚ್.ವಿಶ್ವನಾಥ್ ಅವರನ್ನ ಭೇಟಿಯಾಗಿ ಮಾತುಕತೆ ನಡೆಸಿದರು.
ಇದೇ ವೇಳೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹೆಚ್.ವಿಶ್ವನಾಥ್, ಹೆಚ್.ಡಿ ಕುಮಾರಸ್ವಾಮಿ ನನ್ನ ಮನೆಗೆ ಭೇಟಿ ನೀಡಿರುವುದು ನನ್ನರಾಜಕೀಯ ಜೀವನದ ಅಪರೂಪ ಸನ್ನೀವೇಶ. ರಾಜಕಾರಣದಲ್ಲಿ ಭಿನ್ನಾಭಿಪ್ರಾಯ ಸಹಜ ಭಿನ್ನಾಭಿಪ್ರಾಯ. ಎಲ್ಲವನ್ನೂ ಸರಿಪಡಿಸಿಕೊಂಡು ಹೋಗೋದು ಅನಿವಾರ್ಯ. ರಾಜಕಾರಣ ನಿಂತ ನೀರಲ್ಲ ಹರಿಯುವು ಗಂಗೆ. ಸಂಘರ್ಷ ಭಿನ್ನಾಭಿಪ್ರಾಯ ಮರೆತು ಬಾಳುವುದು ಸಹಜ ಕಷ್ಟದ ಸಮಯದಲ್ಲಿ ಹೆಚ್.ಡಿಕೆ ನನ್ನ ಜತೆ ಇದ್ದಾರೆ. ಎಲ್ಲಾ ಮರೆತು ಹೆಚ್ಡಿಕೆ ನಮ್ಮ ಮನೆಗೆ ಬಂದಿದ್ದಾರೆ. ಮೋದಿ ಮತ್ತೆ ಪ್ರಧಾನಿಯಾಗಲಿ ಎಂದು ಮೈತ್ರಿ ಮಾಡಿಕೊಂಡಿದ್ದಾರೆ. ಹೆಚ್.ಡಿಕೆ ಯದುವೀರ್ ಇಬ್ಬರೂ ಗೆಲ್ಲಬೇಕು ಎಂದು ಹೇಳಿದರು.
ಹೆಚ್ ಡಿ ದೇವೇಗೌಡರ ಬಗ್ಗೆ ಸಿದ್ದರಾಮಯ್ಯ ಮಾತು ಸರಿಯಲ್ಲ ಕುಮಾರಸ್ವಾಮಿ ಅವರ ಆಡಳಿತಾತ್ಮಕ ಬಗ್ಗೆ ಟೀಕೆ ಮಾಡಿ ಆದರೆ ಹೆಚ್.ಡಿ ದೇವೇಗೌಡರ ಬಗ್ಗೆ ಯಾವುದೇ ಕಾರಣಕ್ಕೂ ಮಾತನಾಡಬಾರದು. ದೇವೇಗೌಡರ ಬಗ್ಗೆ ಮಾತಾಡುವ ನೈತಿಕತೆ ಯಾರಿಗೂ ಇಲ್ಲ ಎಂದು ಹೆಚ್.ವಿಶ್ವನಾಥ್ ತಿಳಿಸಿದರು.
Key words: H.Vishwanath, HD Kumaraswamy, mysore