ಬೆಂಗಳೂರು,ಸೆಪ್ಟಂಬರ್,17,2020(www.justkannada.in): ಹೆಚ್.ವಿಶ್ವನಾಥ್ ಎಂತಹ ಅಭಿರುಚಿಯುಳ್ಳ ಮನುಷ್ಯ ಎಂದು ಗೊತ್ತಿದೆ. ಹೆಚ್.ವಿಶ್ವನಾಥ್ ಬಗ್ಗೆ ಚರ್ಚೆ ಮಾಡದಿರುವುದು ಒಳಿತು ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಇಂದು ಮಾತನಾಡಿದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ಡ್ಯಾನ್ಸ್ ಬಾರ್, ಬೆಟ್ಟಿಂಗ್ ಮಾಫಿಯಾಗಳು ಸರ್ಕಾರ ಬೀಳಿಸಲು ಕಾರಣ ಹೀಗೆಂದು ನಾನು ಹೇಳಿಕೆ ನೀಡಿದ್ದು ನಿಜ.ಕ್ರಿಕೆಟ್ ಬೆಟ್ಟಿಂಗ್, ಡ್ಯಾನ್ಸ್ ಬಾರ್ ಮುಚ್ಚಲು ಕ್ರಮ ಕೈಗೊಳ್ಳಲು ಮೈತ್ರಿ ಸರ್ಕಾರದ ವೇಳೆ ಸೂಚಿಸಿದ್ದೆ. ಅಧಿಕಾರಿಗಳು ರೇಡ್ ಮಾಡಲು ಆರಂಭಿಸಿದ್ದರು. ಬಾಂಬೆಗೆ ವಿಶೇಷ ವಿಮಾನಗಳಲ್ಲಿ ಶಾಸಕರು ಹೋಗಿದ್ದರು. ಬೆಟ್ಟಿಂಗ್ ದಂಧೆ ನಡೆಸುತ್ತಿದ್ದ ವ್ಯಕ್ತಿ ಅವರ ಜೊತೆ ಹೋಗಿದ್ದ. ಶ್ರೀಲಂಕಾಗೆ ಓಡಿ ಹೋಗಿದ್ದ ವ್ಯಕ್ತಿ ಮುಂಬೈಗೆ ಹೊಗಿದ್ದ ಎಂದು ಹೇಳಿದರು.
ಡ್ರಗ್ಸ್ ಬಗ್ಗೆ ಸದನಲ್ಲಿ ಚರ್ಚೆ ಮಾಡೊಲ್ಲ. ಇದರಿಂದ ಏನು ಪ್ರಯೋಜನ ಇಲ್ಲ.ಸದನದಲ್ಲಿ ಜನರ ಪರವಾದ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡುತ್ತೇವೆ. ಡಿಜೆ ಹಳ್ಳಿ ಬಗ್ಗೆ ಚರ್ಚೆ ಮಾಡಿ ಪ್ರಯೋಜನಾ ಏನು ಇಲ್ಲ. ಶಾಸಕರೇ ಯಾಕೆ ಆಯ್ತು ಅಂತ ಹೇಳಿದ್ದಾರೆ. ಮ್ಯಾಜಿಸ್ಟ್ರೇಟ್ ತನಿಖೆ ಅಂತ ಹೇಳಿದ್ದಾರೆ. ತನಿಖೆ ಎಲ್ಲಿಗೆ ಬಂತು ಎಂದು ಪ್ರಶ್ನಿಸಿದ ಹೆಚ್.ಡಿಕೆ, ಕಾಂಗ್ರೆಸ್ ಅವ್ರೇ ಇದರಲ್ಲಿ ಇದ್ದಾರೆ ಅಂತ ಜಗತ್ ಜಾಹೀರಾಗಿದೆ. ಕಾಂಗ್ರೆಸ್ ಅವರು ಈ ಬಗ್ಗೆ ಏನ್ ಹೇಳ್ತಾರೆ. ಈ ಬಗ್ಗೆ ಸದನದಲ್ಲಿ ಚರ್ಚೆ ಮಾಡಿ ಏನ್ ಪ್ರಯೋಜನ ಎಂದು ನುಡಿದರು.
ಸಚಿವ ಸೋಮಣ್ಣ ಮನೆ ಕೇಳಿದ ವ್ಯಕ್ತಿಗೆ ಫೋನ್ ನಲ್ಲಿ ಬಾಯಿಗೆ ಬಂದ ಹಾಗೆ ಬೈದಿದ್ದಾರೆ. ಹಿಂದಿನ ಸರ್ಕಾರ ಇದ್ದಾಗ ಯಾರು ಕೇಳಿಲ್ಲ ಅಂತ ಸೋಮಣ್ಣ ಹೇಳಿದ್ದಾರೆ. ನನ್ನಿಂದ ಯಾವುದೇ ಸಮಸ್ಯೆ ಆಗಿಲ್ಲ. ವಸತಿ ಇಲಾಖೆಯಲ್ಲಿ ನನ್ನ ಅವಧಿಯಲ್ಲಿ ಅನೇಕ ಕೆಲಸ ಮಾಡಿದ್ದೇನೆ. ಇದೆಲ್ಲವನ್ನೂ ನಾನು ಸದನದಲ್ಲಿ ಚರ್ಚೆ ಮಾಡುತ್ತೇನೆ ಎಂದು ಹೆಚ್.ಡಿ ಕುಮಾರಸ್ವಾಮಿ ತಿಳಿಸಿದರು.
ಸರ್ಕಾರ ಹೋಗುತ್ತಿರುವ ಮಾರ್ಗ ನೋಡಿದ್ರೆ ದೇವರೆ ಸರ್ಕಾರವನ್ನ ಕಾಪಾಬೇಕು. ನಿರ್ಮಲಾ ಸೀತಾರಾಮನ್ ಹೇಳಿದಂತೆ ದೇವರೆ ಕಾಪಾಡಬೇಕು ಅಷ್ಟೆ ಎಂದು ಟೀಕಿಸಿದ ಹೆಚ್.ಡಿಕೆ, ಅಧಿಕಾರದಿಂದ ನನಗೆ ಮತ್ತು ಬರೋದಿಲ್ಲ. ನಾನು ಅವತ್ತು ಮತ್ತಿನಲ್ಲಿ ಮಲಗಿರಲಿಲ್ಲ. ಸಮ್ಮಿಶ್ರ ಸರ್ಕಾರದ ವೇಳೆ 25 ಸಾವಿರ ಕೋಟಿ ರೈತರ ಸಾಲ ಮನ್ನಾ ಮಾಡಿದೆ. ಕಾಂಪೀಟ್ ವಿತ್ ಚೈನಾ ಎಂದು ನಾನು 9 ಉದ್ಯಮಗಳಿಗೆ ಚಾಲನೆ ನೀಡಿದ್ದೆ. ಹೀಗಾಗಿ ರಾಜ್ಯಕ್ಕೆ ನನ್ನದೇ ಆದ ಕೊಡುಗೆ ಕೊಟ್ಟಿದ್ದೇನೆ. ಸಾರಾಯಿ ಮತ್ತು ಲಾಟರಿ ನಿಲ್ಲಿಸಿದವನು ನಾನು ಎಂದು ಹೇಳಿದರು.
ಸೋಮಣ್ಣ ವೀಡಿಯೋ ವೈರಲ್ ವಿಚಾರಯಾರೋ ಮನೆ ಕೇಳಿದ್ದಕ್ಕೆ ಮೈತ್ರಿ ಸರ್ಕಾರದಿಂದಾಗಿ ಹೌಸಿಂಗ್ ಡಿಪಾರ್ಟ್ಮೆಂಟ್ ಹಾಳಾಗಿದೆ ಅಂದಿದ್ದಾರೆ. ಏನಾಗಿದೆ ಅಂತಾ ದಾಖಲೆ ಕೊಡಿ ಅಂತಾ ಅಧಿವೇಶನದಲ್ಲಿ ಕೇಳುತ್ತೇನೆ ಎಂದು ಹೆಚ್.ಡಿ ಕುಮಾರಸ್ವಾಮಿ ತಿಳಿಸಿದರು.
Key words: H. Vishwanath – known – man –session- drugs-no discussion-Former CM- HD Kumaraswamy.