ಮೈಸೂರು,ಜು,24,2020(www.justkannada.in): ವಿಧಾನಪರಿಷತ್ ಗೆ ಹೆಚ್.ವಿಶ್ವನಾಥ್ ನಾಮ ನಿರ್ದೇಶನ ಮಾಡಿರುವುದು ಸುಪ್ರೀಂಕೋರ್ಟ್ ಆದೇಶದ ಉಲ್ಲಂಘನೆಯಾಗಿದೆ. ರಾಜ್ಯಪಾಲರು ಸುಪ್ರೀಂ ಕೋರ್ಟ್ ಆದೇಶದ ಸ್ಪಷ್ಟ ಉಲ್ಲಂಘನೆ ಮಾಡಿದ್ದಾರೆ. ಇದೊಂದು ರಾಜಕೀಯ ದುರಂತ ಎಂದು ಮಾಜಿ ಸಚಿವ ಸಾ.ರಾ ಮಹೇಶ್ ಕಿಡಿಕಾರಿದರು.
ಮೈಸೂರಿನಲ್ಲಿ ಸುದ್ಧಿಗೋಷ್ಠಿ ನಡೆಸಿ ವಿಧಾನ ಪರಿಷತ್ ಗೆ ಹೆಚ್.ವಿಶ್ವನಾಥ್ ನಾಮ ನಿರ್ದೇಶನದ ಬಗ್ಗೆ ಲೇವಡಿ ಮಾಡಿದ ಶಾಸಕ ಸಾ.ರಾ ಮಹೇಶ್, ಬಾಂಬೆ ಡೈರೀಸ್ ಪುಸ್ತಕದ ಬ್ಲಾಕ್ ಮೇಲ್ನಿಂದ ಈ ಸ್ಥಾನ ಸಿಕ್ಕಿದೆ. ಹುಣಸೂರಿನಿಂದ ಬಾಂಬೆವರೆಗೆ ಹೋಗಿದ್ದ ಇವರ ಪ್ರಯಾಣ ಫಲವೇ ಈ ಸ್ಥಾನ. ಪುಸ್ತಕ ಇಟ್ಟುಕೊಂಡು ಬ್ಲಾಕ್ಮೇಲ್ ಮಾಡಿದ್ದಾರೆ. ಅದಕ್ಕೆ ಈ ಪರಿಷತ್ ಸ್ಥಾನ ಸಿಕ್ಕಿದೆ. ಬ್ಲಾಕ್ ಮೇಲ್ ಗೆ ಸಿಕ್ಕಿದ ಭಿಕ್ಷೆ ಇದು ಎಂದು ವ್ಯಂಗ್ಯವಾಡಿದರು.
ಕಲುಷಿತ ರಾಜಕೀಯ ಕ್ಷೇತ್ರ ಇನ್ನಾದರೂ ಶುದ್ದಿಯಾಗಲು ಅವಕಾಶ ಸಿಕ್ಕಿದೆ. ಇನ್ನು ಆ ಸಾಹಿತ್ಯ ಕ್ಷೇತ್ರ ಏನಾಗುತ್ತೋ ಎಂದು ಹೆಚ್.ವಿಶ್ವನಾಥ್ ಗೆ ಟಾಂಗ್ ನೀಡಿದ ಸಾ.ರಾ ಮಹೇಶ್, ದುರಂತ ನಾಯಕನೊಬ್ಬನಿಂದ ರಾಜಕೀಯ ಕ್ಷೇತ್ರ ಕೊಚ್ಚೆಗುಂಡಿಯಾಗಿತ್ತು. ಇದೀಗ ರಾಜಕೀಯ ಕ್ಷೇತ್ರ ಬಿಟ್ಟು ಸಾಹಿತ್ಯ ಕ್ಷೇತ್ರಕ್ಕೆ ಹೋಗಿದೆ. ನಾವು ಹಿರಿಯ ಸಾಹಿತಿ ಎಸ್.ಎಲ್.ಭೈರಪ್ಪರಿಂದ ಚಾಮುಂಡಿಗೆ ಪೂಜೆ ಮಾಡಿದ್ವಿ. ಅಂತಹ ಸಾಹಿತ್ಯ ಕ್ಷೇತ್ರಕ್ಕೆ ದುರಂತ ನಾಯಕರೋಬ್ಬರು ಬಂದಿದ್ದಾರೆ. ಆ ದೇವರೇ ಸಾಹಿತ್ಯ ಕ್ಷೇತ್ರವನ್ನ ಕಾಪಾಡಬೇಕು ಎಂದು ಲೇವಡಿ ಮಾಡಿದರು.
ವಿಧಾನ ಪರಿಷತ್ ಗೆ ಹೆಚ್.ವಿಶ್ವನಾಥ್ ನಾಮನಿರ್ದಶನ ಸುಪ್ರೀಂ ಆದೇಶದ ಸ್ಪಷ್ಟ ಉಲ್ಲಂಘನೆ…..
ವಿಧಾನ ಪರಿಷತ್ ಸ್ಥಾನಕ್ಕೆ ವಿಶ್ವನಾಥ್ ನೇಮಕ ಮಾಡಿರುವುದು ಸುಪ್ರೀಂ ಕೊರ್ಟ್ ಆದೇಶದ ಸ್ಪಷ್ಟ ಉಲ್ಲಂಘನೆಯಾಗಿದೆ. ರಾಜ್ಯಪಾಲರು ಸುಪ್ರೀಂಕೋರ್ಟ್ ಆದೇಶವನ್ನ ಸ್ಪಷ್ಟ ಉಲ್ಲಂಘನೆ ಮಾಡಿದ್ದಾರೆ. ಇದು ರಾಜಕೀಯ ದುರಂತ. ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ವಿಶ್ವನಾಥ್, ಪರಿಷತ್ ಸ್ಥಾನವಲ್ಲ ಮಂಡಳಿ ಅಧ್ಯಕ್ಷರಾಗಿ ಕೂಡ ನಾಮನಿರ್ದೇಶನ ಆಗುವಂತಿಲ್ಲ. ವಿಶ್ವನಾಥ್ ನೇಮಕ ಕಾನೂನು ಬಾಹಿರವಾಗಿದೆ. ಅವರು ಪ್ರಮಾಣ ವಚನ ಸ್ವೀಕರಿಸುವಂತಿಲ್ಲ. ಇದು ಸಿಎಂ ಗೊತ್ತಿದೇಯೋ ಇಲ್ಲವೋ ನನಗೆ ಗೊತ್ತಿಲ್ಲ. ಯಾರಾದರೂ ತಪ್ಪು ಮಾಡಿರಲಿ. ಆದ್ರೆ ಆತ್ಮಸಾಕ್ಷಿಗೆ ವಿರುದ್ದವಾಗಿ ಹೇಗೆ ಪ್ರಮಾಣವಚನ ಸ್ವೀಕರಿಸುತ್ತಾರೆ ಇವರು.ಇವರಿಗೆ ಮನಸಾಕ್ಷಿ ಇದೇಯಾ? ಎಂದು ಪ್ರಶ್ನಿಸಿದರು.
ಕೊಚ್ಚೆಗುಂಡಿ ಸಹವಾಸ ನಮಗ್ಯಾಕೆ ಸ್ವಾಮಿ…
ನಾನು ಹೆಚ್.ವಿಶ್ವನಾಥ್ ರಿಗೆ ಪತ್ರ ಬರೆಯೋಲ್ಲ. ಕೊಚ್ಚೆಗುಂಡಿ ಸಹವಾಸ ನಮಗ್ಯಾಕೆ ಸ್ವಾಮಿ. ಸಾಹಿತ್ಯ ಕ್ಷೇತ್ರಕ್ಕೂ ನಮಗು ಸಂಬಂಧ ಇಲ್ಲ. ನಾವ್ಯಾಕೇ ಅವರಿಗೆ ಪತ್ರ ಬರೆಯಲಿ. ಆದ್ರೆ ಆತ್ಮಸಾಕ್ಷಿ ಇದ್ರೆ ಪ್ರಮಾಣ ವಚನ ಸ್ವೀಕರಿಸಬಾರದು. ಸಾಹಿತ್ಯ ಕ್ಷೇತ್ರದವರೆಲ್ಲಾ ಈಗ ಬೇರೆ ಕ್ಷೇತ್ರ ಹುಡುಕಿಕೊಳ್ಳಬಹುದು. ಇವರ ಆಯ್ಕೆಯಿಂದ ಸಾಹಿತ್ಯ ಕ್ಷೇತ್ರ ಕಲುಷಿತವಾಗಿದೆ. ಮೇಲ್ಮೆನೆಯಲ್ಲಿ ಎಂತೆಂತಹ ನಾಯಕರಿದ್ದರು. ಅದು ರಾಜಕೀಯ ನಾಯಕರಿಗೆ ಪುನರ್ವಸತಿ ಆಗಿದ್ದರೂ ಪರವಾಗಿಲ್ಲ. ಇಂತಹ ನಾಯಕರಿಂದ ಮೆಲ್ಮೆಯೂ ಕಲುಷಿತವಾಗಿಬಿಡುತ್ತೆ ಅನ್ನೋದೆ ನಮ್ಮ ಸಂಕಟ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಾನು ರಾಜ್ಯಪಾಲರು ಹಾಗೂ ಸ್ಪೀಕರ್ಗೆ ಪತ್ರ ಬರೆಯುತ್ತೇನೆ. ಈ ಬಗ್ಗೆ ನಾನು ಸ್ಪೀಕರ್ ಹಾಗೂ ರಾಜ್ಯಪಾಲರಿಗೆ ಪತ್ರ ಬರೆಯುತ್ತೇವೆ. ಅವರ ನಾಮನಿರ್ದೇಶನ ಸುಪ್ರೀ ಆದೇಶ ಉಲ್ಲಂಘನೆ ಅಂತ ಮನವರಿಕೆ ಮಾಡಿಕೊಡುತ್ತೇನೆ ಎಂದು ಸಾ.ರಾ ಮಹೇಶ್ ತಿಳಿಸಿದರು.
ಜಿಲ್ಲಾ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ನೇಮಕ ವಿಚಾರ ಸಂಬಂಧ ನನಗೆ ಸಾ ರಾ ಮಹೇಶ್ ದ್ರೋಹ ಮಾಡಿದ್ದಾರೆ ಎಂದು ಜಿ ಪಂ ಸದಸ್ಯೆ ಚಂದ್ರಿಕಾ ಸುರೇಶ್ ಅರೋಪಿಸಿದ ಕುರಿತು ಪ್ರತಿಕ್ರಿಯಿಸಿದ ಸಾ.ರಾ ಮಹೇಶ್, ನಾವು ಅವರನ್ನೇ ಅಧ್ಯಕ್ಷ ರಾನ್ನಾಗಿ ಮಾಡಬೇಕು ಅಂತಾ ತೀರ್ಮಾನ ಆಗಿತ್ತು. ಅವರ ಸದಸ್ಯರಲ್ಲಿ ಹೊಂದಾಣಿಕೆ ಇರಲಿಲ್ಲ. ಹೀಗಾಗಿ ಎರಡು ಭಾರಿ ಚುನಾವಣೆ ಮುಂದೂಡಲಾಗಿತ್ತು. ಪಿರಿಯಾಪಟ್ಟಣದ ಸದಸ್ಯರಿಗೆ ಮಾನ್ಯತೆ ನೀಡಿ ಅಂತಾ ಒತ್ತಾಯ ಜಾಸ್ತಿ ಅಯ್ತು. ಮೊದಲು ಅಧ್ಯಕ್ಷರಾಗುವರಿಗೆ 3 ತಿಂಗಳ ಅವಕಾಶ ಅಂತ ತೀರ್ಮಾನ ಮಾಡಿದ್ದೇವೆ. ಎರಡನೇ ಬಾರಿ ಅಧ್ಯಕ್ಷರಿಗೆ 6 ತಿಂಗಳ ಅವಕಾಶ ಅಂತಾ ತೀರ್ಮಾನ ಆಗಿದೆ. ಮುಂದೆ ಅವರಿಗೆ ಅವಕಾಶ ಸಿಗುತ್ತೆ ಎಂದರು.
Key words: H. Vishwanath- MLC-violation – Supreme court- Former minister- SARA Mahesh